ಬೆಂಗಳೂರು : ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಿಹಿಸುದ್ದಿಯೊಂದು ನೀಡಿದ್ದು, ಕೇಂದ್ರ ಸರ್ಕಾರದ ಕೋಟಾದಡಿಯಲ್ಲಿ 3 ಲಕ್ಷ ಡೋಸ್ ಕೋವಿಶೀಲ್ಡ್ ಕರ್ನಾಟಕಕ್ಕೆ ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕೇಂದ್ರ ಸರ್ಕಾರದ ಕೋಟದಡಿಯಲ್ಲಿ 3 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಕರ್ನಾಟಕಕ್ಕೆ ಬಂದಿದೆ. ಈ ಮೂಲಕ ಕೇಂದ್ರದಿಇಂದ ಪಡೆದ ಒಟ್ಟು ಕೋವಿಶೀಲ್ಡ್ ಪ್ರಮಾಣ 1.05 ಕೋಟಿ ಡೋಸ್ ಎಂದು ಹೇಳಿದ್ದಾರೆ.
ಇನ್ನು ರಾಜ್ಯವು ನೇರವಾಗಿ ಖರೀದಿಸಿದ ಒಟ್ಟು ಕೋವಿಶೀಲ್ಡ್ ಪ್ರಮಾಣ 13.54 ಲಕ್ಷ ಡೋಸ್, ರಾಜ್ಯವು ಪಡೆದ ಒಟ್ಟು ಕೋವಾಕ್ಸಿನ್ ಪ್ರಮಾಣ 13.10 ಲಕ್ಷ ಡೋಸ್ ಎಂದು ಮಾಹಿತಿ ನೀಡಿದ್ದಾರೆ.