ನವದೆಹಲಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ (74) ಇಂದು ನಿಧನರಾಗಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಅಗತ್ಯ ಬಿದ್ದರೆ ಇನ್ನೂ ಒಂದುವಾರದ ಬಳಿಕ ಮತ್ತೊಂದು ಚಿಕಿತ್ಸೆ ಮಾಡಬೇಕು ಎಂದು ಅವರ ಮಗ ಚಿರಾಗ್ ಪಾಸ್ವಾನ್ ತಿಳಿಸಿದ್ದರು.
ಕಳೆದ ಕೆಲವು ದಿನಗಳಿಂದಲೂ ರಾಮ್ ವಿಲಾಸ್ ಪಾಸ್ವಾನ್ ದೆಹಲಿಯ ಪೋರ್ಟೀಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು.
ಲೋಕ ಜನಶಕ್ತಿ ಪಾರ್ಟಿಯ ಸಂಸ್ಥಾಪಕರಾದ ರಾಮ್ ವಿಲಾಸ್ ಪಾಸ್ವಾನ್, 8 ಬಾರಿ ಸಂಸದರಾಗಿದ್ದರು. ಎನ್ ಡಿಎ ಮೈತ್ರಿಕೂಟದಲ್ಲಿದ್ದ ಎಲ್ ಜೆಪಿ ಪಕ್ಷದಿಂದ ಪಾಸ್ವಾನ್ ಅವರು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.