ಕಡಲತಡಿಯಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ! ಮಾಜಿ ಕೇಂದ್ರ ಸಚಿವರಿಗೂ ಸೋಂಕು ದೃಢ!

ಮಂಗಳೂರು: ಕೊರೋನಾ ಮಹಾಮಾರಿ ಆರ್ಭಟ ಮಿತಿಮೀರುತ್ತಿದ್ದು ಕಡಲತಡಿ ಮಂಗಳೂರಿನಲ್ಲಿಂದು ಕೊರೋನಾ ಮಹಾಸ್ಫೋಟವಾಗುವ ಲಕ್ಷಣಗಳಿದ್ದು ಇಂದು 145 ಮಂದಿಗೆ ಸೋಂಕು ದೃಢವಾಗುವ ಶಂಕೆ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ಕರಾವಳಿ ಭಾಗದ ಕಾಂಗ್ರೆಸ್ ನ ಪ್ರಭಾವಿ ನಾಯಕ ಕೇಂದ್ರದ ಮಾಜಿ ಸಚಿವರಿಗೆ ಹಾಗೂ ಅವರ ಪತ್ನಿಗೂ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ.

READ ALSO

ಬಂಟ್ವಾಳ ಶಾಸಕ ಆಪ್ತರೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಕೆಲ ದಿನಗಳ ಹಿಂದಷ್ಟೇ ಈ ಮುಖಂಡನ ಮನೆಯ ಗೃಹ ಪ್ರವೇಶ ನಡೆದಿತ್ತು ಗೃಹ ಪ್ರವೇಶದಲ್ಲಿ ಭಾಗವಹಿಸಿದ್ದವರು ಸದ್ಯ ಕೊರೋನಾ ಸೋಂಕಿನ ಭೀತಿಯಲ್ಲಿದ್ದಾರೆ ಇವರು ಶಾಸಕರ ಹಲವು ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ ಭಾಗವಹಿಸುತ್ತಿದ್ದರೆಂದು ವರದಿಯಾಗಿದೆ.

ಇವರ ಪ್ರಾಥಮಿಕ ಸಂಪರ್ಕವಿರುವವರನ್ನು ಕ್ವಾರೇಂಟೇನ್ ಮಾಡಲು ಸಿದ್ದತೆ ನಡೆಸಲಾಗುತ್ತಿದೆ