ಫೇಸ್‌ಬುಕ್ ಪಾಸ್ ವರ್ಡ್ ಗೆ ಕನ್ನ ಗೂಗಲ್ ಪ್ಲೇಸ್ಟೋರ್ ನಿಂದ 25 ಆ್ಯಪ್ಗಳ ಔಟ್

ನ್ಯೂಯಾರ್ಕ್: ಫೇಸ್ ಬುಕ್ ಬಳಕೆದಾರರ ಪಾಸ್ ವರ್ಡ್ ಮತ್ತು ಇತರ ಮಾಹಿತಿಗಳನ್ನು ಕೆಲವು ಆಯಪ್ ಗಳು ಹ್ಯಾಕ್ ಮಾಡಿವೆ ಎಂದು ಫ್ರೆಂಚ್ ಸೈಬರ್-ಸೆಕ್ಯುರಿಟಿ ಸಂಸ್ಥೆ ಮಾಹಿತಿ ನೀಡಿದ ಬೆನ್ನಲ್ಲೇ, ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 25 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ ಎಂದು ವರದಿಯಾಗಿದೆ.

ಆದರೇ ರಿಮೂವ್ ಮಾಡುವ ಮೊದಲು ಈ 25 ಅಪ್ಲಿಕೇಶನ್‌ಗಳನ್ನು ಒಟ್ಟು 2.34 ಮಿಲಿಯನ್ ಬಾರಿ ಜನರು ಡೌನ್‌ಲೋಡ್ ಮಾಡಿದ್ದಾರೆ ಎಂದು ಸಂಸ್ಥೆಯು ಉಲ್ಲೇಖಿಸಿದೆ. ಮಾತ್ರವಲ್ಲದೆ ಈ ಆಯಪ್ ಗಳನ್ನು ಒಂದೇ ಗುಂಪು ಸೇರಿ ರಚಿಸಿದೆ ಎಂಬ ಆಘಾತಕಾರಿ ಮಾಹಿತಿಯು ಹೊರಬಿದ್ದಿದೆ.

READ ALSO

ಈ ಆಯಪ್ ಗಳ ಫೀಚರ್ ಮತ್ತು ವೈಶಿಷ್ಟ್ಯಗಳು ವಿಭಿನ್ನವಾಗಿ ಕಂಡರೂ, ಇವುಗಳ ಉದ್ದೇಶ ಒಂದೇ ಆಗಿದ್ದವು. ಇದರಲ್ಲಿ ಕೆಲವು ಫೋಟೋ ಎಡಿಟರ್‌, ವಿಡಿಯೋ ಎಡಿಟರ್ ಅಪ್ಲಿಕೇಶನ್‌ಗಳು, ವಾಲ್‌ ಪೇಪರ್ ಅಪ್ಲಿಕೇಶನ್‌ಗಳು, ಫ್ಲ್ಯಾಷ್‌ಲೈಟ್ ಅಪ್ಲಿಕೇಶನ್‌ಗಳು, ಫೈಲ್ ಮ್ಯಾನೇಜರ್‌ಗಳು ಮತ್ತು ಮೊಬೈಲ್ ಗೇಮ್‌ಗಳು ಕೂಡ ಸೇರಿವೆ.

ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿರುವ ಅಪ್ಲಿಕೇಶನ್ ಗಳ ಪಟ್ಟಿ:

ಸೂಪರ್ ವಾಲ್ ಪೇಪರ್ ಫ್ಲ್ಯಾಶ್ ಲೈಟ್, ವಾಲ್ ಪೇಪರ್ ಲೆವೆಲ್, ಕಾನ್ ಟೂರ್ ಲೆವೆಲ್ ವಾಲ್ ಪೇಪರ್, ಐ ಪ್ಲೇಯರ್ ಮತ್ತು ಐ ವಾಲ್ ಪೇಪರ್, ವಿಡಿಯೋ ಮೇಕರ್, ಕಲರ್ ವಾಲ್ ಪೇಪರ್ಸ್, ಪೆಡೋಮೀಟರ್. ಪವರ್ ಫುಲ್ ಫ್ಲ್ಯಾಶ್ ಲೈಟ್, ಸೂಪರ್ ಬ್ರೈಟ್ ಫ್ಲ್ಯಾಶ್ ಲೈಟ್, ಸೂಪರ್ ಫ್ಲ್ಯಾಶ್ ಲೈಟ್, ಸೋಲಿಟೈರ್, ಅಕ್ಯುರೇಟ್ ಸ್ಕ್ಯಾನಿಂಗ್ ಆಫ್ ಕ್ಯೂ ಆರ್ ಕೋಡ್, ಕ್ಲಾಸಿಕ್ ಕಾರ್ಡ್ ಗೇಮ್. ಜಂಕ್ ಫೈಲ್ ಕ್ಲೀನಿಂಗ್, ಸಿಂಥೇಟಿಕ್ ಝಡ್, ಫೈಲ್ ಮೆನೇಜರ್, ಕಾಂಪೋಸೈಟ್ ಝಡ್, ಸ್ಕ್ರೀನ್ ಶಾಟ್ ಕ್ಯಾಪ್ಚರ್, ಡೈಲಿ ಹೋರೋಸ್ಕೋಪ್ ವಾಲ್ ಪೇಪರ್ಸ್, ವುಕ್ಸಿಯಾ ರೀಡರ್, ಪ್ಲಸ್ ವೆದರ್, ಎನಿಮ್ ಲೈವ್ ವಾಲ್ ಪೇಪರ್, ಐ ಹೆಲ್ತ್ ಸ್ಟೆಪ್ ಕೌಂಟರ್, ಕಾಮ್ ಟೈಪ್ ಫಿಕ್ಷನ್,ಪಾಡೆನಾಟೆಫ್

ಇವುಗಳಲ್ಲಿ ಸೂಪರ್ ವಾಲ್ ಪೇಪರ್ಸ್ ಫ್ಲ್ಯಾಶ್ ಲೈಟ್ ಮತ್ತು ಪಾಡೆನಾಟೆಫ್ ಆಯಪ್ ಗಳು 5,00,000 ಡೌನ್ ಲೋಡ್ ಕಂಡಿವೆ. ಇನ್ನು ಕೆಲವು ಅಪ್ಲಿಕೇಶನ್ ಗಳು 1,00,000 ಬಾರಿ ಡೌನ್ ಲೋಡ್ ಆಗಿವೆ.

ಈ ಅಪ್ಲಿಕೇಶನ್‌ಗಳು ದುರುದ್ದೇಶಪೂರಿತ ಕೋಡ್ ಅನ್ನು ಒಳಗೊಂಡಿದ್ದು, ಈಗಾಗಲೇ ಬಳಸುತ್ತಿರುವ ಫೇಸ್‌ಬುಕ್ ಅಥವಾ ಇತರ ಆಯಪ್ ಗಳ ಬ್ರೌಸರ್ ವಿಂಡೋವನ್ನು ನಕಲಿ ಮಾಡಿ ಲೋಡ್ ಮಾಡುತ್ತದೆ. ಆದರೇ ಬಳಕೆದಾರರು ಇದನ್ನು ಅಸಲಿ ಎಂದೇ ತಿಳಿದು ಕಾರ್ಯನಿರ್ವಹಿಸುತ್ತಾರೆ. ಈ ಎಲ್ಲಾ ಅಪ್ಲಿಕೇಶನ್‌ ಗಳ ಮೇಲೆ ಮೇ ತಿಂಗಳಲ್ಲಿ ಗೂಗಲ್‌ ಗೆ ರಿಪೋರ್ಟ್ ಮಾಡಲಾಗಿತ್ತು. ಇದೀಗ ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ಈ ಆಯಪ್ ಗಳನ್ನು ಕಿತ್ತೆಸೆದಿದೆ.