ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ಘಟಕದಿಂದ ನೆರವು

ಸಕಲೇಶಪುರ, ಜೂನ್ 5: ತಾಲೂಕಿನ ಉದೇವಾರ ಗ್ರಾಮದ ಕೂಲಿ ಕಾರ್ಮಿಕರಾದ ಸರೋಜಮ್ಮ ಅವರ ಮನೆ ಮೇಲೆ ಭಾರೀ ಗಾಳಿ-ಮಳೆಯಿಂದ ತೆಂಗಿನಮರ ಬಿದ್ದು ಮನೆಗೆ ಅಪಾರ ಹಾನಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಸರೋಜಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.

ಈ ವಿಷಯ ತಿಳಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸಕಲೇಶಪುರದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ತಕ್ಷಣ ನೆರವಿಗೆ ಧಾವಿಸಿ ಸೇವಾ ಕಾರ್ಯ ಕೈಗೊಂಡರು. ಸ್ವಯಂಸೇವಕರಾದ ಮಧುವರನ್, ಘಟಕ ಪ್ರತಿನಿಧಿ ಹರೀಶ್, ಸೇವಾ ಸಂಯೋಜಕಿ ದಿವ್ಯ ಹಾಗೂ ಸ್ವಯಂಸೇವಕರಾದ ಭಾಸ್ಕರ್ ಆಚಾರ್, ಲೀಲಾವತಿ, ಗುರುಪ್ರಕಾಶ್ ಮತ್ತು ರಾಮು ಅವರು ಮನೆ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ, ಹಾನಿಗೊಳಗಾದ ಮನೆಯ ಹೆಂಚುಗಳನ್ನು ಜೋಡಿಸಿ ಟಾರ್ಪಾಲ್ ಹೊದಿಸುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಶಿವಾನಂದ ಹಾಗೂ ಎಸ್.ಪಿ.ಗಳಾದ ಸೌಮ್ಯ ಮತ್ತು ರೂಪ ಉಪಸ್ಥಿತರಿದ್ದು ಸೇವಾ ಕಾರ್ಯಕ್ಕೆ ಸಹಕರಿಸಿದರು.

ಶೌರ್ಯ ಘಟಕದ ಈ ಮಾನವೀಯ ಸೇವಾ ಕಾರ್ಯವನ್ನು ಕಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು.

Spread the love
  • Related Posts

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲು ಬಸ್ ನಿಲ್ದಾಣದ ಸಮೀಪ ಸೆ. 3ರಂದು ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ಆನೆ ಪ್ರತ್ಯಕ್ಷವಾಗಿ ಆತಂಕ ಉಂಟುಮಾಡಿದ ಘಟನೆ ವರದಿಯಾಗಿದೆ. ಉಜಿರೆ–ಬೆಳಾಲು–ಬಂದಾರು ಮುಖ್ಯ ರಸ್ತೆಯ ಮಿನಂದೇಲು ಬಸ್ ನಿಲ್ದಾಣ ಹಾಗೂ ಡಿ.ಪಿ.…

    Spread the love

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    ಬೆಳ್ತಂಗಡಿ: ಧರ್ಮಸ್ಥಳ- ಕೊಕ್ಕಡ ರಸ್ತೆಯ ಧರ್ಮಸ್ಥಳ ಸಮೀಪದ ಕಲ್ಲೇರಿ ಪರಿಸರದ ಪುದುವೆಟ್ಟು ಕ್ರಾಸ್ ಬಳಿ ಗುರುವಾರ ರಾತ್ರಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಗುರುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕಾಡಾನೆ ಹೆದ್ದಾರಿ ಬದಿಯಲ್ಲಿ…

    Spread the love

    You Missed

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    • By admin
    • September 3, 2026
    • 4 views
    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    • By admin
    • September 3, 2026
    • 3 views
    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    • By admin
    • September 3, 2026
    • 4 views
    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    • By admin
    • September 3, 2026
    • 11 views
    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

    • By admin
    • August 31, 2026
    • 6 views
    ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    • By admin
    • August 27, 2026
    • 8 views
    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ