ಮಂಗಳೂರು: ಕರಾವಳಿಯಾದ್ಯಂತ ವರುಣಾರ್ಭಟ ಮಿತಿಮೀರಿದ್ದು ಇಂದು ಗುರುಪುರದ ಮೂಲೂರು ಗ್ರಾಮದ ಬಂಗ್ಲೆಗುಡೆಯಲ್ಲಿ ಮನೆಗಳ ಮೇಲೆ ಗುಡ್ಡಕುಸಿತಗೊಂಡು 2 ಮಕ್ಕಳು ದುರ್ಮರಣಗೊಂಡ ಘಟನೆ ವರದಿಯಾಗಿದೆ.
ಮೃತರನ್ನು ಗುರುಪುರದ ನಿವಾಸಿಗಳಾದ ಸಫ್ವಾನ್(16) ಹಾಗೂ ಸಹ್ಲಾ(10) ಎಂದು ಗುರುತಿಸಲಾಗಿದೆ.
ಲಾಕ್ ಡೌನ್ ಇದ್ದ ಹಿನ್ನೆಲೆ ಮಾವನ ಮನೆಗೆ ಬಂದಿದ್ದ ಮಕ್ಕಳಿಬ್ಬರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ
ಸ್ಥಳದಲ್ಲಿ NDRF ತಂಡ, ಅಗ್ನಿಶಾಮಕದಳ ಹಾಗೂ ಪೋಲೀಸರು ಕಾರ್ಯಾಚರಣೆ ನಡೆಸಿದರೂ ಮಕ್ಕಳನ್ನು ಜೀವಂತವಾಗಿ ಹೊರ ತೆಗೆಯಲು ಸಾಧ್ಯವಾಗಿಲ್ಲ
ಘಟನಾ ಸ್ಥಳಕ್ಕೆ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.
ಅಪಾಯದಲ್ಲಿರುವ 14 ಕುಟುಂಬವನ್ನು ಸ್ಥಳಾಂತರಿಸಿದ್ದು ಮನೆಕಳೆದುಕೊಂಡ ಕುಟುಂಬಗಳಿಗೆ ತುರ್ತು ನೆರವು ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾಉಸ್ತುವಾರಿ ಸಚಿವ ಕೋಟ ಶೀನಿವಾಸ ಪೂಜಾರಿ,
ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಮಾಜಿ ಶಾಸಕ ಯು.ಟಿ ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವ, ಸ್ಥಳೀಯ ಜನಪ್ರತಿನಿಧಿಗಳು ಬೇಟಿ ನೀಡಿದ್ದರು.