TRENDING
Next
Prev

ಗೋಡಂಬಿ ಬೀಜ ಗಂಟಲಿನಲ್ಲಿ ಸಿಲುಕಿ ಮಗು ಸಾವು

READ ALSO

ಪುತ್ತೂರು: ಗೋಡಂಬಿ ಬೀಜ ಗಂಟಲಿನಲ್ಲಿ ಸಿಲುಕಿ ಮೂರುವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ‌ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಸಾಲ್ಮರ ಉರುಮಾಲ್ ಇಸಾಕ್ ಎಂಬವರ ಮೂರುವರೆ ವರುಷದ ಗಂಡು ಮಗು ಗೋಡಂಬಿ ಬೀಜ ತಿನ್ನುತ್ತಿರುವ ಸಂದರ್ಭ, ಅದು ಗಂಟಲಲ್ಲಿ ಸಿಲುಕಿ ಮಗು ಆಸ್ವಸ್ಥಗೊಂಡಿತ್ತು. ಇದನ್ನು ಗಮನಿಸಿದ ಮನೆಯವರು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋದರು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಮಗು ಸಾವನ್ನಪ್ಪಿದೆ.