ಒಳ ಉಡುಪುನಲ್ಲಿ 1ಕೋಟಿ ರೂ.ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ! ಕಾಸರಗೋಡು ಮೂಲದ ಮಹಿಳೆಯ ಬಂಧನ!

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ದುಬೈನಿಂದ ಆಗಮಿಸಿದ್ದ ಮಹಿಳೆಯು  ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನದ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯದ ಕಾಸರಗೋಡಿನ ಮೊಹಮ್ಮದ್ ಅಲಿ ಸಮೀರಾ ಎಂಬಾಕೆಯನ್ನು ವಶಕ್ಕೆ ಪಡೆಯಲಾಗಿದೆ. ಈಕೆಯಿಂದ 1.10 ಕೋಟಿ ರೂ. ಮೌಲ್ಯದ 2.41 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

READ ALSO

ಈಕೆ ಒಳಉಡುಪು, ಸ್ಯಾನಿಟರಿ ಪ್ಯಾಡ್ ಮತ್ತು ಸಾಕ್ಸ್ ಗಳಲ್ಲಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದಳು.