ಚೀನಾದ ಅಧಿಪತ್ಯವನ್ನು ಸ್ವೀಕರಿಸುವ ಬಗ್ಗೆ ಫಾರುಕ ಅಬ್ದುಲ್ಲಾರ ಹೇಳಿಕೆಯ ಮೇಲೆ ‘ಆನ್‌ಲೈನ್ ವಿಶೇಷ ಚರ್ಚಾಕೂಟ’ !

ಫಾರುಕ ಅಬ್ದುಲ್ಲಾರಂತಹ ಪ್ರತ್ಯೇಕತಾವಾದಿ ಹಾಗೂ ದೇಶವಿರೋಧಿ ಪ್ರವೃತ್ತಿಯನ್ನು ಪೋಷಿಸುವ ನಮ್ಮ ವ್ಯವಸ್ಥೆಯಲ್ಲಿಯೇ ಲೋಪದೋಷಗಳಿವೆ ! – ಶ್ರೀ. ಸುಶೀಲ ಪಂಡಿತ್, ಸಂಸ್ಥಾಪಕರು, ರೂಟ್ಸ್ ಇನ್ ಕಶ್ಮೀರ್

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್‌ನ ಸಂಸದ ಡಾ. ಫಾರುಕ ಅಬ್ದುಲ್ಲಾ ಇವರ ಕಾಲದಲ್ಲಿ ಸಾವಿರಾರು ಹಿಂದೂಗಳ ನರಮೇಧವಾಯಿತು, ಚಕಮಕಿಯಲ್ಲಿ ಸಾವಿಗೀಡಾದ ಭಯೋತ್ಪಾದಕರ ಕುಟುಂಬದವರಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ಜಾರಿಯಾಯಿತು, ಕಾಶ್ಮೀರದಲ್ಲಿಯ ಜನರು ಭಾರತದಲ್ಲಿ ಇರಬೇಕೋ ಇಲ್ಲವೋ ಇದರ ಬಗ್ಗೆ ಜನಾಭಿಪ್ರಾಯ ಕೇಳಬೇಕೆಂದು ಒತ್ತಾಯಿಸಲಾಯಿತು, ಅದೇರೀತಿ ಮ್ಯಾನ್ಮಾರ್‌ನಲ್ಲಿಯ ಸಾವಿರಾರು ರೋಹಿಂಗ್ಯಾ ಮುಸಲ್ಮಾನರಿಗೆ ಅನಧಿಕೃತವಾಗಿ ಕಾಶ್ಮೀರದಲ್ಲಿ ನೆಲೆ ನೀಡುವುದು ಇತ್ಯಾದಿ ಅನೇಕ ಪ್ರತ್ಯೇಕತಾವಾದಿ ಹಾಗೂ ದೇಶವಿರೋಧಿ ಕೃತ್ಯಗಳಾಗಿವೆ. ಇಂತಹ ಅಬ್ದುಲ್ಲಾರವರ ಬಾಯಿಯಿಂದ ಕಾಶ್ಮೀರಿ ಜನರಿಗೆ ಚೀನಾದ ಅಧಿಪತ್ಯ ಸ್ವೀಕಾರದ ಬಗ್ಗೆ ಮಾತನಾಡುವುದು ಆಶ್ಚರ್ಯವಲ್ಲ. ಇತರ ದೇಶಗಳಲ್ಲಿ ಈ ರೀತಿ ದೇಶವಿರೋಧಿ ಹೇಳಿಕೆ ನೀಡುತ್ತಿದ್ದರೇ, ಆತನಿಗೆ ಕೂಡಲೇ ದೇಹದಂಡನೆಯ ಶಿಕ್ಷೆ ನೀಡಲಾಗುತ್ತಿತ್ತು. ಆದ್ದರಿಂದ ನಿಜವಾದ ಲೋಪದೋಷ ನಮ್ಮ ವ್ಯವಸ್ಥೆಯಲ್ಲಿದೆ, ಇದು ಈ ರೀತಿಯಲ್ಲಿ ಅನೇಕ ದೇಶವಿರೋಧಿ, ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ಪ್ರವೃತ್ತಿಯನ್ನು ಪೋಷಿಸುವ ಕಾರ್ಯವು ನಡೆಯುತ್ತಿದೆ, ಎಂದು ‘ರೂಟ್ಸ್ ಇನ್ ಕಶ್ಮೀರ್’ನ ಸಂಸ್ಥಾಪಕ ಹಾಗೂ ಕಾಶ್ಮೀರಿ ಅಭ್ಯಾಸಕರಾದ ಶ್ರೀ. ಸುಶೀಲ ಪಂಡಿತ್ ಇವರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಶೇಷ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು. ‘ಫೇಸ್‌ಬುಕ್’ ಹಾಗೂ ‘ಯು ಟ್ಯೂಬ್’ನ ಮಾಧ್ಯಮದಿಂದ ಈ ಚರ್ಚಾಕೂಟವನ್ನು38768 ಜನರು ಪ್ರತ್ಯಕ್ಷವಾಗಿ ನೋಡಿದರೆ, 1 ಲಕ್ಷದ 18 ಸಾವಿರದ 309 ಜನರ ತನಕ ಈ ಕಾರ್ಯಕ್ರಮ ತಲುಪಿತು.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು(ಡಾ.) ಚಾರುದತ್ತ ಪಿಂಗಳೆಯವರು ಮಾತನಾಡುತ್ತಾ, ಚೀನಾದಲ್ಲಿ ಇಸ್ಲಾಮ್‌ಗೆ ಯಾವುದೇ ಸ್ಥಾನ ಇಲ್ಲ. ಅಲ್ಲಿ ಮುಸಲ್ಮಾನರ ಮೇಲೆ ಅಮಾನವೀಯವಾಗಿ ದೌರ್ಜನ್ಯ, ಅನೇಕ ಮಸೀದಿಗಳನ್ನು ನೆಲಸಮ ಮಾಡಿ ಕುರಾನ್ ಬದಲಾಯಿಸುವ ತನಕ ಘಟನೆಗಳು ಸಂಭವಿಸುತ್ತಿವೆ. ಈ ಬಗ್ಗೆ ಫಾರುಕ ಅಬ್ದುಲ್ಲಾ ಇವರಿಗೆ ಆಕ್ಷೇಪಣೆ ಇಲ್ಲ; ಆದರೆ ಕಲಂ 370 ಹಾಗೂ 35(ಅ) ತೆಗೆದನಂತರ ಅವರು ನೇರ ಚೀನಾದ ಅಧಿಪತ್ಯದ ಬಗ್ಗೆ ಮಾತುಗಳನ್ನಾಡುತ್ತಿರುವುದರಿಂದ ‘ನ್ಯಾಶನಲ್ ಕಾನ್ಫರೆನ್ಸ್’ ಅಲ್ಲ ‘ಅಂಟಿ ನ್ಯಾಶನಲ್ ಕಾನ್ಫರೆನ್ಸ್’ ಎಂದು ಹೇಳಬೇಕಾಗಬಹುದು. 1974 ರಲ್ಲಿ ‘ಜಮ್ಮು-ಕಾಶ್ಮೀರ ಲಿಬ್ರೇಶನ್ ಫ್ರಂಟ್’(ಜೆ.ಕೆ.ಎಲ್.ಎಫ್.)ನ ಭಯೋತ್ಪಾದಕರೊಂದಿಗೆ ಇದ್ದ ಫಾರುಕ ಅಬ್ದುಲ್ಲಾ ಇವರ ಛಾಯಾಚಿತ್ರ ಪ್ರಸಾರವಾಗಿದೆ. ಇದರಿಂದ ಅವರ ಮಾನಸಿಕತೆ ಸ್ಪಷ್ಟವಾಗುತ್ತದೆ. ಜೆ.ಕೆ.ಎಲ್.ಎಫ್.ನ ಯುವಕರು ಬಂದೂಕನ್ನು ಹಿಡಿದು ದೇಶದ ಮೇಲೆ ಹಲ್ಲೆ ಮಾಡುತ್ತಿದ್ದಾರೆ, ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಅಬ್ದುಲ್ಲಾ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ‘ಜಮ್ಮು ಎಕ್‌ಜುಟ್’ನ ಅಧ್ಯಕ್ಷ ನ್ಯಾಯವಾದಿ ಅಂಕುರ ಶರ್ಮಾ ಇವರು ಮಾತನಾಡುತ್ತಾ, ಫಾರುಕ ಅಬ್ದುಲ್ಲಾ ಇವರ ಹೇಳಿಕೆಗೆ ಜಮ್ಮು-ಕಾಶ್ಮೀರದ ಜನರು ತೀವ್ರವಾಗಿ ವಿರೋಧಿಸಿದ್ದಾರೆ. ನಮ್ಮ ದೃಷ್ಟಿಯಲ್ಲಿ ಫಾರುಕ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬುಬಾ ಮುಫ್ತಿ, ಪ್ರತ್ಯೇಕತಾವಾದಿ ಗಿಲಾನಿ, ಯಾಸಿನ್ ಮಲೀಕ್, ಅದೇರೀತಿ ಜಿಹಾದಿ ಭಯೋತ್ಪಾದಕರು ಹಾಗೂ ಐ.ಎಸ್.ಐ ಇವರೆಲ್ಲರು ಇಂದೇ ಮಾಲೆಯ ಮಣಿಗಳಾಗಿದ್ದಾರೆ. ಇವರಿಗೆ ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳಿಲ್ಲದಂತೆ ಮಾಡಿ ಇಸ್ಲಾಮಿ ಆಡಳಿತವನ್ನು ತರಲಿಕ್ಕಿದೆ. ಅದಕ್ಕಾಗಿ ಜಿಹಾದ್‌ಗೆ ಕರೆ ನೀಡಿದ್ದಾರೆ. ಈ ಸಮಸ್ಯೆಯನ್ನು ಅರಿತು ಅದರ ಮೇಲೆ ಉಪಾಯವನ್ನು ಹುಡುಕಬೇಕಿದೆ ಎಂದು ಹೇಳಿದ್ದಾರೆ. ಕಾಶ್ಮೀರಿ ವಿಚಾರವಂತರಾದ ಶ್ರೀ. ಲಲಿತ್ ಅಮ್ಬರದಾರ ಇವರು ಮಾತನಾಡುತ್ತಾ, ಅಬ್ದುಲ್ಲಾ ಇವರ ಹೇಳಿಕೆಯು ಕಲಂ 370 ರದ್ದು ಪಡಿಸಿದ್ದರಿಂದ ಆದ ಮಾನಸಿಕ ರೋಗವಾಗಿದೆ. ಅದರೊಂದಿಗೆ ‘ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಏಕೆ ಆಯಿತು’ ಇದರ ಉತ್ತರವನ್ನು ಹುಡುಕಿದರೇ, ಕಾಶ್ಮೀರ ಇದು ಹಿಂದೂ ಸಂಸ್ಕೃತಿಯ ಪ್ರತೀಕವಾಗಿದ್ದು ಅದರ ಮೇಲೆ ಉದ್ದೇಶಪೂರ್ವಕವಾಗಿ ಮಾಡಿದ ದಾಳಿಯಾಗಿದೆ. ಕಾಶ್ಮೀರದ ಬಗ್ಗೆ ನಾವು ರಾಜಿ ಮಾಡಿಕೊಂಡರೇ, ದೇಶದ ಪ್ರತಿಯೊಂದು ಸ್ಥಳದಲ್ಲಿ ಕಾಶ್ಮೀರದಂತೆ ಭಯಾನಕ ಪರಿಸ್ಥಿತಿ ಉದ್ಭವಿಸಬಹುದು ಎಂದು ಹೇಳಿದರು.

Spread the love
  • Related Posts

    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಧಂತ್ಯುತ್ಸವ ಅಕ್ಟೋಬರ್ 24 ಶುಕ್ರವಾರದಂದು ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರೀಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಭಗವಾನ್ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ…

    Spread the love

    ನಾಳೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ದಿನಾಂಕ 24/10/2025ರಂದು ಬೆಳಿಗ್ಗೆ 9.30ರಿಂದ ಅಪರಾಹ್ನ 2ಗಂಟೆಯವರೆಗೆ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರವು ನಡೆಯಲಿದೆ. Spread the love

    Spread the love

    You Missed

    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    • By admin
    • October 23, 2025
    • 5 views
    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    ನಾಳೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    • By admin
    • October 23, 2025
    • 16 views
    ನಾಳೆ  ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    • By admin
    • October 23, 2025
    • 35 views
    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    • By admin
    • October 23, 2025
    • 209 views
    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    17ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 86 views
    17ವಯೋಮಾನದ  ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 61 views
    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ  ರಾಷ್ಟ್ರಮಟ್ಟಕ್ಕೆ ಆಯ್ಕೆ