
ಬೆಳ್ತಂಗಡಿ: ಚಾರ್ಮಾಡಿ ಘಾಟ್ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಅನಾಹುತಗಳು ಹೆಚ್ಚಾಗುತ್ತಿದ್ದು ಇಂದು ಮುಂಜಾನೆ ಚಾರ್ಮಾಡಿಯಲ್ಲಿ ಗುಡ್ಡ ಕುಸಿತಗೊಂಡು ಸಂಚಾರಕ್ಕೆ ತೊಡಕಾಗಿದೆ.

ಚಾರ್ಮಾಡಿ ಅಲೆಖಾನ್ ಸಮೀಪ ಗುಡ್ಡ ಕುಸಿತಗೊಂಡ ಪರಿಣಾಮ ಸಂಚಾರಕ್ಕೆ ಮತ್ತೆ ಅಡ್ಡಿಯಾಗಿದೆ.

ತೆರವು ಕಾರ್ಯಾಚರಣೆ ಸಾಗುತ್ತಿದ್ದು ಸ್ಥಳದಲ್ಲಿ ಒಂದು ಜಿಸಿಬಿ ನಿಯೋಜಿಸಲಾಗಿದೆ. ಮರಮಟ್ಟು, ಸಣ್ಣಪುಟ್ಟ ಬಂಡೆಗಳು ಉರುಳಿ ರಸ್ತೆಗೆ ಅಪ್ಪಳಿಸುತ್ತಿರುವುದರಿಂದ ಸವಾರರು ಎಚ್ಚರಿಕೆಯಾಗಿ ಸಾಗಬೇಕಿದೆ. ಕಳೆದರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕಳೆದ ವರ್ಷ ಕುಸಿತಗೊಂಡ ಚಾರ್ಮಾಡಿ ಘಾಟ್ ರಸ್ತೆ ಮತ್ತೆ ಅಲ್ಲಲ್ಲಿ ಕುಸಿತಕ್ಕೊಳಗಾಗುತ್ತಿದೆ.