ಧರ್ಮಸ್ಥಳ: ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನೆ

ಬೆಳ್ತಂಗಡಿ: ಮಕ್ಕಳು ಮೊಬೈಲ್ ಗೀಳನ್ನು ಅಂಟಿಸಿಕೊಳ್ಳದೆ ಗುರು ಹಿರಿಯರ ಮಾರ್ಗದರ್ಶನದಂತೆ ನಡೆದು ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಇಂತಹ ಶಿಬಿರಗಳ ಪ್ರಯೋಜನವನ್ನು ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಧರ್ಮಸ್ಥಳ ಮಂಡಲ ಪಂಚಾಯತ್ ಮಾಜಿ ಪ್ರಧಾನ ಸುಂದರ ಗೌಡ ಪುಡ್ಕೆತ್ತು ಹೇಳಿದರು.

ಅವರು ಮೇ 4 ರಂದು ಧರ್ಮಸ್ಥಳ ಗ್ರಾ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಗ್ರಾ.ಪಂ. ಧರ್ಮಸ್ಥಳ, ಅರಿವು ಕೇಂದ್ರ ಹಾಗೂ ಗ್ರಾ.ಪಂ. ಡಿಜಿಟಲ್ ಗ್ರಂಥಾಲಯ ಇವುಗಳ ಆಶ್ರಯದಲ್ಲಿ ಮೇ 4 ರಿಂದ 11ರ ವರೆಗೆ ನಡೆಯಲಿರುವ ಚಿಣ್ಣರ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳದ ಹಿರಿಯ ಮುತ್ಸದ್ದಿ ಹಾಗೂ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯ ಬಿ. ಭುಜಬಲಿ ಧರ್ಮಸ್ಥಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯ ನವೀನ್‌ಚಂದ್ರ ಶೆಟ್ಟಿ ಭಾಗವಹಿಸಿ ಶುಭ ಹಾರೈಸಿದರು.

ಧರ್ಮಸ್ಥಳ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಸ್ವಾಗತಿಸಿ, ಕಾರ್ಯದರ್ಶಿ ಪ್ರಮೀಳಾ ವಂದಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು. ಗ್ರಾ.ಪಂ. ಸಿಬಂದಿಗಳು ಸಹಕರಿಸಿದರು. ೩೦ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡರು.

Spread the love
  • Related Posts

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ಮೂಡುಬಿದಿರೆ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡುಬಿದಿರೆಯ ಕೇಮಾರುವಿನಲ್ಲಿರುವ ಶ್ರೀ ಕ್ಷೇತ್ರ ಸಾಂದೀಪನಿ ಸಾಧನಾಶ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾ‌ರ್ ಅವರು ₹1 ಕೋಟಿ ಅನುದಾನ ಘೋಷಿಸಿದ್ದು, ಈ ಕುರಿತು ಮಠದ ಈಶ ವಿಠಲದಾಸ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.…

    Spread the love

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ರೈತರ ಸಮಸ್ಯೆಗಳ ಕುರಿತು ಪ್ರತ್ಯೇಕವಾಗಿ ಚರ್ಚೆ; ಕರಾವಳಿ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳ ನಿರೀಕ್ಷೆ ಮಂಗಳೂರು: ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಸ್ಥಳೀಯ ರೈತರಲ್ಲಿ…

    Spread the love

    You Missed

    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    • By admin
    • September 19, 2026
    • 4 views
    ಕೇಮಾರು ಶ್ರೀ ಕ್ಷೇತ್ರ ಸಾಂದೀಪನಿ ಕೇಮಾರು ಸಾಧನಾಶ್ರಮಕ್ಕೆ ₹1 ಕೋಟಿ ಅನುದಾನ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಈಶ ವಿಠಲದಾಸ ಸ್ವಾಮೀಜಿ

    ನಾವೂರು–ಕುತ್ಲೂರು ದುರ್ಗಮ ಪ್ರದೇಶಗಳ ವಿದ್ಯುದೀಕರಣಕ್ಕೆ ವನ್ಯಜೀವಿ ಅನುಮತಿ11 ಕೆ.ವಿ. ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅವಕಾಶ – ಶಾಸಕ ಹರೀಶ್ ಪೂಂಜ

    • By admin
    • September 18, 2026
    • 10 views

    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    • By admin
    • September 18, 2026
    • 9 views
    ಕಸ್ತೂರಿ ರಂಗನ್ ವರದಿ ಕುರಿತು ರೈತರ ಆತಂಕ ನಿವಾರಣೆಗೆ ಸರ್ಕಾರ ಬದ್ಧ: ಸಿ.ಎಂ ಡಿಕೆಶಿ

    ಆಟಿಡೊಂಜಿದಿನ ಧರ್ಮಸ್ಥಳ ಕನ್ಯಾಡಿ 2

    • By admin
    • September 15, 2026
    • 22 views

    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    • By admin
    • September 15, 2026
    • 30 views
    ನಾಡಿನೆಲ್ಲೆಡೆ ಗಣಪನ ಹಬ್ಬದ ಸಡಗರ ಸಂಭ್ರಮ ಬೆಳ್ತಂಗಡಿ ತಾಲೂಕಿನಾದ್ಯಂತ 2026ರಲ್ಲಿ ವಿವಿಧೆಡೆ ಆಚರಿಸಲ್ಪಟ ಗಣಪನ ನೋಡಬನ್ನಿ

    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ

    • By admin
    • September 13, 2026
    • 15 views
    ಕಡಿರುದ್ಯಾವರ: ಗ್ರಾಮೀಣ ರಸ್ತೆಯಲ್ಲಿ ಮರ ಸಾಗಾಟದ ಲಾರಿಗಳ ಹಾವಳಿ — ರಸ್ತೆ ಹಾಳಾಗುತ್ತಿರುವ ಆರೋಪ