ಕಡಿರುದ್ಯಾವರ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪದಲ್ಲಿ ಚಿರಂಜೀವಿ ಯುವಕ ಮಂಡಲ (ರಿ), ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘ ಕಾನರ್ಪ ಕಡಿರುದ್ಯಾವರ ಇದರ ವತಿಯಿಂದ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಕಾರ್ಯಕ್ರಮವನ್ನು ಚಿರಂಜೀವಿ ಯುವಕ ಮಂಡಲ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಪೂಜೆ ಹಾಗೂ ಮೊಸರು ಕುಡಿಕೆ ಉತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ವಿಜಯ ಪೂಜಾರಿ ಕಾಜೂರು ರವರು ಉದ್ಘಾಟಿಸಿ ಶುಭಹಾರೈಸಿದರು.
ಸಮಾರೋಪ ಸಮಾರಂಭದಲ್ಲಿ ಗಣಪತಿ ಭಟ್ ಕುಳಮರ್ವ ಮಾತನಾಡುತ್ತಾ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನ ನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ. ಶ್ರೀ ಕೃಷ್ಣ ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗನಾಗಿ ಜನಿಸಿದನು. ಶ್ರೀ ಕೃಷ್ಣ ಜನ್ಮಾಷ್ಟಮಿ ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ವೈದೀಕ ಆಚರಣೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಯುವ ಪೀಳಿಗೆಗೆ ಶ್ರೀ ಕೃಷ್ಣನ ಆದರ್ಶ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಚಿರಂಜೀವಿ ಯುವಕ ಮಂಡಲ ನಿರಂತರ 33ವರ್ಷಗಳಿಂದ ಇಂತಹ ಕಾರ್ಯಕ್ರಮಗಳ ಜೊತೆಗೆ ವೈದೀಕ ಸ್ಪರ್ಶ ನೀಡುವುದು ಬಹಳ ಸಂತೋಷಕರ ಹೀಗೆ ನಿರಂತರವಾಗಿ ತಮ್ಮ ಕಾರ್ಯ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಸಾಧಕರ ಸನ್ಮಾನ
ಕಾರ್ಯಕ್ರಮದಲ್ಲಿ ಶ್ರೀನಿವಾಸ ಗೌಡ ಬೆಳಾಲು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು, ಮೋಹನ್ ಬಂಗೇರ ಕಾರಿಂಜ ಆಡಳಿತಾಧಿಕಾರಿಗಳು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಲ್ಲಿ, ಗೋಪಾಲಕೃಷ್ಣ ಸ.ಪ್ರೌ.ಶಾಲೆ ಮಿತ್ತಬಾಗಿಲು, ಸಚಿನ್ ಬಿಢೆ ಮುಂಡಾಜೆ, ರತ್ನಾವತಿ ಬಾಲಕೃಷ್ಣ ಅಧ್ಯಕ್ಷರು ಗ್ರಾ.ಪಂ ಕಡಿರುದ್ಯಾವರ, ದಾಜಮ್ಮ ಅಧ್ಯಕ್ಷರು ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘ, ಯುವಕ ಮಂಡಲದ ಅಧ್ಯಕ್ಷರಾದ ಜರ್ನಾದನ ಕಾನರ್ಪ, ಬಾಲಕೃಷ್ಣಗೌಡ, ರಾಮಚಂದ್ರ ಗೌಡ, ಜಯರಾಜ್ ಸಾಲಿಯಾನ್, ಹರ್ಷನಾರಾಯಣ ಭಟ್, ರಾಘವೇಂದ್ರ ಭಟ್, ರವೀಂದ್ರ ಪೂಜಾರಿ, ಹಾಗೂ ಯುವಕ ಮಂಡಲದ ಸದಸ್ಯರು ಪಾಲ್ಗೊಂಡಿದ್ದರು.