ಬೆಂಗಳೂರು : ರಾಜ್ಯರಾಜಧಾನಿಯಲ್ಲಿ ಕೊರೋನಾರ್ಭಟ ಮಿತಿಮೀರುತಿದ್ದು ಸಿಲಿಕಾನ್ ಸಿಟಿಯಲ್ಲಿ ಪರ ಊರಿಂದ ಉದ್ಯೋಗದ ನಿಮ್ಮಿತ್ತ ಬಂದು ನೆಲೆಸಿದವರು ಮತ್ತೆ ತಮ್ಮತಮ್ಮ ಊರಿನ ಕಡೆ ಮುಖಮಾಡಿ ಸಾಗುತ್ತಿದ್ದಾರೆ.
ಇದರ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಬೆಂಗಳೂರಿನಲ್ಲಿ ದಿನನಿತ್ಯ ಸಾವಿರದ ಗಡಿಯ ಹತ್ತಿರ ಹತ್ತಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಜನರಲ್ಲಿ ಭಯ ಆವರಿಸಿದ್ದು .ಇಲ್ಲೇ ಉಳಿದರೆ ಬಹಳಷ್ಟು ಕಷ್ಟ ಇದೆಯೆಂದು ಭಾವಿಸಿ ಹೇಗಾದ್ರೂ ಮಾಡಿ ಊರು ಸೇರೋಣವೆಂದು ಜನ ಬೆಂಗಳೂರು ಬಿಟ್ಟು ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಅಲ್ಲದೇ ಅನೇಕರು ಮನೆ ಖಾಲಿ ಮಾಡಿಕೊಂಡು, ತಮ್ಮ ಊರುಗಳತ್ತ ವಾಪಾಸ್ ತೆರಳುತ್ತಿದ್ದಾರೆ. ಟಾಟಾ ಏಸ್, ವಾಹನಗಳಲ್ಲಿ ಜನರು ಬೆಂಗಳೂರು ತೊರೆಯುತ್ತಿದ್ದಾರೆ.