ಅರ್ಹ ಬಡ ಕುಟುಂಬಕ್ಕೆ “ದಿತಿ ಸಾಂತ್ವನ ನಿಧಿ”

ಬೆಳ್ತಂಗಡಿ: ಪ್ರತಿ ವರ್ಷದಂತೆ ಇಂದು “ದಿತಿ ಸಾಂತ್ವನ ನಿಧಿ” ಯನ್ನು ವಿತರಣೆಮಾಡಲಾಯಿತು

ಬೆಳ್ತಂಗಡಿ ತಾಲೂಕು ಪತ್ರಿಕಾ ದಿನಾಚರಣೆಯ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರು “ದಿತಿ ಸಾಂತ್ವನ ನಿಧಿ”ಯನ್ನು ಅರ್ಹ 03 ಬಡ ಕುಟುಂಬಗಳಿಗೆ ವಿತರಿಸಿದರು.

READ ALSO

ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಕಾರ್ಯದರ್ಶಿ, ವಿಜಯವಾಣಿ ಪತ್ರಿಕೆಯ ಪತ್ರಕರ್ತರಾದ ಮನೋಹರ ಬಳೆಂಜ ರವರು ಕಳೆದ 03 ವರ್ಷಗಳಿಂದ “ದಿತಿ ಸಾಂತ್ವನ ನಿಧಿ”ಯನ್ನು ನೀಡುತ್ತಾ ಬಂದಿದ್ದು ಈ ವರ್ಷವೂ ಆರೋಗ್ಯದ ಸಮಸ್ಯೆ ಇರುವ ವಂಶಿ ಕೊಯ್ಯೂರು, ಸುಶಾಂತ್ ಕಾಶಿಪಟ್ನ ಹಾಗೂ ಮಂಗಳೂರಿನ ತನೀಷ್ ಗಟ್ಟಿಯವರಿಗೆ ಸಹಾಯಹಸ್ತ ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಜಿಲ್ಲಾ ಪತ್ರಕರ್ತ ಸಂಘದ ಗ್ರಾಮೀಣ ಕಾರ್ಯದರ್ಶಿ ಭುವನೇಶ ಗೇರುಕಟ್ಟೆ ಉಪಸ್ಥಿತರಿದ್ದರು