ರಾಜ್ಯಾದ್ಯಂತ ಫೆ.16 ರಿಂದ ಪಿಯುಸಿ, ಪದವಿ ಕಾಲೇಜು ಆರಂಭ : ಶಿಕ್ಷಣ ಸಚಿವ BC ನಾಗೇಶ್

ಬೆಂಗಳೂರು : ರಾಜ್ಯದಲ್ಲಿ ಫೆಬ್ರವರಿ 16 ರಿಂದ ಪದವಿ ಪೂರ್ವ ಹಾಗೂ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ರಾಜ್ಯದಲ್ಲಿ ಸಮವಸ್ತ್ರ ವಿಚಾರವಾಗಿ ವಿವಾದಗಳು ಎದ್ದಿದ್ದು ಈ ಸಂಬಂಧ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು ಆ ಬಳಿಕ ಮಾತನಾಡಿದ ಸಚಿವರು ಹೈ ಕೋರ್ಟ್ ಸೂಚನೆಯಂತೆ ಬುಧವಾರ (ಫೆ.16) ದಿಂದ ಪದವಿ ಪೂರ್ವ ಮತ್ತು ಪದವಿ ತರಗಗತಿಗಳು ಆರಂಭವಾಗಲಿದೆ, ವಿದ್ಯಾರ್ಥಿಗಳು ಹೈ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಅದರಂತೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕು ಎಂದು ಸಚಿವರು ಹೇಳಿದ್ದಾರೆ.

READ ALSO