ತಿರುವನಂತಪುರ: ಮುಸ್ಲಿಂ ಮಹಿಳೆಯರನ್ನು ಮೊದಲು ನೆಲದ ಅಡಿ ಹೂತು ಹಾಕಲಾಗುತ್ತಿತ್ತು. ಈಗ ಅವರನ್ನು ಹಿಜಾಬ್, ಬುರ್ಖಾ ಹಾಗೂ ತ್ರಿವಳಿ ತಲಾಖ್ ಅಡಿಯಲ್ಲಿ ಹೂತು ಹಾಕಲಾಗುತ್ತಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,
ಹಿಜಾಬ್ ವಿರುದ್ಧ ಮುಸ್ಲಿಂ ಮಹಿಳೆಯರು ಹೋರಾಟ ನಡೆಸಿದ ಹಲವು ಇತಿಹಾಸಗಳೇ ಇವೆ ಎಂದಿದ್ದಾರೆ. ಜೊತೆಗೆ ‘ವಸ್ತ್ರಸಂಹಿತೆ ಎಂಬುದು ಸಂಸ್ಥೆಗಳ ಅವಿಭಾಜ್ಯ ಅಂಗ. ಸಂಸ್ಥೆಗಳಲ್ಲಿ ಇರುವವರು ಅದನ್ನು ಪಾಲಿಸಲೇಬೇಕು’ ಎಂದೂ ಹೇಳಿದ್ದಾರೆ.
ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ಸಂಸ್ಥೆಗಳ ಸಮವಸ್ತ್ರದ ಅರಿವು ಇದ್ದೇ ಪ್ರವೇಶ ಪಡೆದಿರುತ್ತಾರೆ. ಹೀಗೆ ಏಕಾಏಕಿ ಬಂಡೇಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳನ್ನು ರಾಜಕೀಯ ಲಾಭಕ್ಕೆ ಹಾಗೂ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.