ತಾಮ್ರದ ಲೋಟದಲ್ಲಿ ನೀರು ಕುಡಿದರೇ ಏನಾಗುತ್ತೆ!? ಹಲವು ಮಾರಕ ಕಾಯಿಲೆಯಿಂದ ಮುಕ್ತಿ ಪಡೆಯಲು ಸಹಕಾರಿಯಾಗಬಹುದೇ

ಬದಲಾದ ಜೀವನ ಶೈಲಿಯಿಂದಾಗಿ ನಿತ್ಯ ನಾವು ಸ್ಟೀಲ್ ಮತ್ತು ಪ್ಲಾಸ್ಟಿಕ್ ತಟ್ಟೆ, ಲೋಟಗಳ ಉಪಯೋಗಿಸುವುದು ಹೆಚ್ಚು. ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ಇನ್ನೆಂದೂ ನೀವು ಸ್ಟೀಲ್ ಲೋಟಗಳ ಕಡೆ ತಿರುಗಿಯೂ ನೋಡುವುದಿಲ್ಲ..

ಹೌದು, ದಿನ ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಮಾರಕ ಕ್ಯಾನ್ಸರ್ ರೋಗದಿಂದಲೂ ನಾವು ದೂರವಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಕೇವಲ ಇದು ಮಾತ್ರವಲ್ಲದೇ ಅಜೀರ್ಣ, ಬೊಜ್ಜಿನ ಸಮಸ್ಯೆ ಕೂಡ ಇದರಿಂದ ಬಗೆಹರಿಯುತ್ತದೆ. ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ ಪ್ರಮುಖ ಪ್ರಯೋಜನಗಳ ಪಟ್ಟಿ ಇಲ್ಲಿದೆ.

1.ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಊಟದ ಬಳಿಕ ಅಥವಾ ಇತರೆ ಸಂದರ್ಭಗಳಲ್ಲಿ ತಾಮ್ರದ ಚೊಂಬು ಅಥವಾ ತಾಮ್ರದ ಲೋಟಗಳಲ್ಲಿ ನೀರು ಕುಡಿಯುವುದರಿಂದ ಅದರಲ್ಲಿನ ಅಂಶಗಳು ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
ಅಂತೆಯೇ ಹೊಟ್ಟೆಯೊಳಗಿನ ಉರಿಯನ್ನು ನಿಯಂತ್ರಿಸುತ್ತದೆ. ಆ ಮೂಲಕ ದೇಹದ ಜೀರ್ಣ ಕ್ರಿಯೆಯನ್ನು ಇದು ಉತ್ತಮಪಡಿಸುತ್ತದೆ.

2.ಬೊಜ್ಜಿನ ಸಮಸ್ಯೆಯಿಂದ ಮುಕ್ತಿ

ಬೊಜ್ಜಿನಿಂದ ಬಳಲುತ್ತಿರುವ ಮಂದಿ ನಿತ್ಯ ಡಯಟ್ ಹಾಗೂ ವ್ಯಾಯಾಮ ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದು ದುಃಖ ಪಡುತ್ತಾರೆ. ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಅಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ. ನೀರಿನಲ್ಲಿರುವ ತಾಮ್ರದ ಅಂಶ ದೇಹದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಬೊಜ್ಜು ಶೇಖರಣೆಯಾಗದಂತೆ ತಡೆಯುತ್ತದೆ. ಆ ಮೂಲಕ ಆಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ.

3.ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ತಾಮ್ರದ ಅಂಶ ಮಾನವನ ದೇಹದಲ್ಲಿ ರೋಗ ನಿರೋಧಕ ಅಂಶವನ್ನು ಹೆಚ್ಚಿಸುತ್ತದೆ. ಆ ಮೂಲಕ ಯಾವುದೇ ರೋಗಗಳು ಸುಲಭವಾಗಿ ದೇಹಕ್ಕೆ ತಾಗದಂತೆ ನೋಡಿಕೊಳ್ಳುತ್ತದೆ.

ಹಿಂದಿನ ಕಾಲದಲ್ಲಿ ಈಗಿನ ಸ್ಟೀಲ್ ನಾಣ್ಯಗಳ ಬದಲಿಗೆ ತಾಮ್ರ ಮತ್ತು ಚಿನ್ನದ ನಾಣ್ಯಗಳು ಚಾಲ್ತಿಯಲ್ಲಿದ್ದವು. ತಾಮ್ರ ಮತ್ತು ಚಿನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿದಿದ್ದ ಅಂದಿನ ವೈದ್ಯರು ಮತ್ತು ಧರ್ಮ ಪ್ರಚಾರಕರು ದೇವಾಲಯಗಳ ಕಲ್ಯಾಣಿ ಹಾಗೂ ಪವಿತ್ರ ನದಿಗಳಲ್ಲಿ ನಾಣ್ಯವನ್ನು ಹಾಕಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಿದ್ದರು. ಆ ಮೂಲಕ ಕಲ್ಯಾಣಿಯ ನೀರು ಮತ್ತು ನದಿಯ ನೀರು ಕುಡಿಯುವ ಮಂದಿ ಯಾವುದೇ ರೋಗಗಳಿಗೆ ತುತ್ತಾಗುವುದಿಲ್ಲ ಎಂಬುದು ಅವರ ಭಾವನೆಯಾಗಿತ್ತು.

4 ವಯಸ್ಸನ್ನು ಮರೆಮಾಚುತ್ತದೆ

ತಾಮ್ರದಲ್ಲಿ ಆಯಂಟಿ ಆಕ್ಸಿಂಡೆಂಟ್ ಅಂಶ ಯಥೇಚ್ಛವಾಗಿದ್ದು, ಇದು ದೇಹದ ಅನಾವಶ್ಯಕ ಬೊಜ್ಜಿನ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಅಂತೆಯೇ ದೇಹ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ತೊಡೆದು ಹಾಕುವ ಶಕ್ತಿ ತಾಮ್ರಕ್ಕೆ ಇದ್ದು, ನಿರ್ಜೀವ ಜೀವಕೋಶಗಳನ್ನು ತೊಡೆದುಹಾಕಿ ಹೊಸ ಜೀವಕೋಶಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

5.ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ

ತಾಮ್ರದ ಅಂಶ ಹೃದಯಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಅಧಿಕ ಬೊಜ್ಜು ನಿಯಂತ್ರಣದ ಮೂಲಕ ಮತ್ತು ಹೃದಯದ ರಕ್ತನಾಳಗಳ ಶುದ್ದೀಕರಣದ ಮೂಲತ ಹೃದಯ ಆರೋಗ್ಯವಾಗಿರುವಂತೆ ತಾಮ್ರದ ಅಂಶ ನೋಡಿಕೊಳ್ಳುತ್ತದೆ. ಅಮೆರಿಕನ್ ವೈದ್ಯರು ಹೇಳಿರುವಂತೆ ತಾಮ್ರ ಬಿಪಿಯನ್ನು ಕೂಡ ನಿಯಂತ್ರಣದಲ್ಲಿಡುತ್ತದೆಯಂತೆ.

6.ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಇನ್ನು ತಾಮ್ರದಲ್ಲಿನ ಆಯಂಟಿ ಆಕ್ಸಿಡೆಂಟ್ ಅಂಶ ಮಾರಕ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಅಂತೆಯೇ ಭವಿಷ್ಯದಲ್ಲಿ ಕ್ಯಾನ್ಸರ್ ರೋಗ ಬರದಂತೆಯೂ ಇದು ತಡೆಯುತ್ತದ

7.ಥೈರಾಯ್ಡ್ ಉಪಶಮನದಲ್ಲಿ ಪರಿಣಾಮಕಾರಿ

ಪ್ರಸ್ತುತ ಸಮಾಜದಲ್ಲಿ ಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ತಿನ್ನುವ ಆಹಾರದಲ್ಲಿ ತಾಮ್ರದ ಅಂಶದ ಕೊರತೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ನಾವು ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶ ಸೇರುತ್ತದೆ. ಇದು ಥೈರಾಯ್ಡ್ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

8.ಚರ್ಮರೋಗ ಸಮಸ್ಯೆಯಲ್ಲೂ ಪರಿಣಾಮಕಾರಿ

ತಾಮ್ರದಲ್ಲಿರುವ ಅಂಶಗಳು ಮಾನವನ ಚರ್ಮಕ್ಕೆ ಯಾವುದೇ ರೀತಿಯ ಸಮಸ್ಯೆ ಕಾಡದಂತೆ ತಡೆಯುತ್ತದೆ. ಅಂತೆಯೇ ಸಂಧಿವಾತ ಮತ್ತು ಸಂಧಿನೋವಿನಲ್ಲೂ ಇದು ಪರಿಣಾಮಕಾರಿಯಾಗಬಲ್ಲದು ಎಂದು ವೈದ್ಯರು ಹೇಳಿದ್ದಾರೆ.

9.ರಕ್ತ ಹೀನತೆ ಸಮಸ್ಯೆ ದೂರ

ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಅದರಲ್ಲಿರುವ ಆಯಂಟಿ ಆಕ್ಸಿಡೆಂಟ್ ಅಂಶ ದೇಹದ ಬೊಜ್ಜನ್ನು ನಿಯಂತ್ರಿಸುವ ಮೂಲಕ ದೇಹ ಸದಾಕಾಲ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಅಂತೆಯೇ ಹೃದಯ ಆರೋಗ್ಯದಲ್ಲೂ ತಾಮ್ರ ಪರಿಣಾಮಕಾರಿಯಾಗಿದ್ದು, ಹೃದಯ ನಾಳಗಳು ಸದಾಕಾಲ ಚಟುವಟಿಕೆಯಿಂದ ನೋಡಿಕೊಳ್ಳುತ್ತದೆ. ಆ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ದೂರಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 60 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 101 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ