ಕೊರೋನಾಗೆ ಬೆಚ್ಚಿ ಬಿದ್ದ ಕರ್ನಾಟಕ! ಇಂದು ರಾಜ್ಯದಲ್ಲಿ ಸಾವಿನ ಸಂಖ್ಯೆ ಎಷ್ಟು? ಕೊರೋನಾ ಸೋಂಕಿತರೇಷ್ಟು? ಆತಂಕದಲ್ಲಿದೆ ಕರುನಾಡು!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ತನ್ನ ಆರ್ಭಟವನ್ನು ಮತ್ತೆ ಮತ್ತೆ ಮುಂದುವರಿಸಿದ್ದು 29 ಜಿಲ್ಲೆಯಲ್ಲೂ ಸೋಂಕು ದೃಢವಾಗಿದ್ದು ಇಂದು ರಾಜ್ಯದಲ್ಲಿ 2496 ಸೋಂಕಿತರ ಸಂಖ್ಯೆ ಕಂಡುಬಂದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1267ಸೋಂಕಿತರು ಪತ್ತೆಯಾಗಿದ್ದು 56 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ.

ರಾಜ್ಯದಲ್ಲಿಂದು 2496 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 44077ಕ್ಕೆ ಏರಿಕೆಯಾಗಿದೆ.

READ ALSO

ರಾಜ್ಯದಲ್ಲಿ ಕೋರೋನಾ ಮರಣಮೃದಂಗ ತನ್ನ ಆರ್ಭಟವನ್ನು ಮುಂದುವರಿಸಿದ್ದು ಇಂದು ಅತಿಹೆಚ್ಚಿನ ಸಂಖ್ಯೆಯಲ್ಲಿ ಮರಣ ಹೊಂದಿದವರ ಸಂಖ್ಯೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 87 ಮಂದಿ ಸೋಂಕಿಗೆ ಬಲಿಯಾಗಿದ್ದು ಇದುವರೆಗೆ 842ಮಂದಿಯನ್ನು ಹೆಮ್ಮಾರಿ ಬಲಿ ಪಡೆದಂತಾಗಿದೆ