ಕರಾವಳಿಯಲ್ಲಿ ಜೂನ್ 01 ರಿಂದ ಮೀನುಗಾರಿಕೆ ನಿಷೇಧ!

ಮಂಗಳೂರು, : ಕೊರೊನಾ ವೈರಸ್, ಚಂಡಮಾರುತದ ಭೀಕರತೆಗೆ ಕರಾವಳಿಯಲ್ಲಿ ಮತ್ಸೋದ್ಯಮ ನಲುಗಿ ಹೋಗಿದೆ. ಮೀನುಗಾರಿಕೆ ಉತ್ತುಂಗವಿದ್ದ ಸಮಯದಲ್ಲಿಯೇ ಲಾಕ್‌ಡೌನ್ ಬರೆ ಬಿದ್ದು, ಸ್ವಲ್ಪ ಸುಧಾರಿಸುವಾಗಲೇ ಚಂಡಮಾರುತ ಹೊಡೆತಕೊಟ್ಟಿತು.ಇದೆಲ್ಲದರ ನಡುವೆ ಇದೀಗ ಮೀನುಗಾರಿಕಾ ಋತು ಅಂತಿಮವಾಗುತ್ತಿದ್ದು, ಜೂನ್ 1 ರಿಂದ ಮೀನುಗಾರಿಕೆಯನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಕರ್ನಾಟಕ ಕಡಲ ಮೀನುಗಾರಿಕಾ ನಿಯಂತ್ರಣ ಕಾಯಿದೆಯನುಸಾರವಾಗಿ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು/ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತೀಕೃತ ಬೋಟ್ ಅಥವಾ ಯಾವುದೇ ಬೋಟ್‌ಗಳನ್ನು ಸಮುದ್ರಕ್ಕೆ ಇಳಿಸದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಜೂನ್ 1 ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ನಿಷೇಧ ವನ್ನು ಹೇರಲಾಗಿದ್ದು, ರಾಜ್ಯ ಸರ್ಕಾರದ ನಿಯಮ ಉಲ್ಲಂಘಿಸಿ ಮೀನುಗಾರಿಕೆ‌ ನಡೆಸಿದರೆ, ಕಡಲ ಮೀನುಗಾರಿಕೆ ವಿಧಿಸಲಾಗಿರುವ ದಂಡನೆಗೆ ಹೊಣೆಯಾಗುವುದಲ್ಲದೇ, ಒಂದು ವರ್ಷದ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ ಎಂದು ಮೀನುಗಾರಿಕಾ ಇಲಾಖೆ ಪ್ರಕಟಣೆ ಹೊರಡಿಸಿದೆ.ಮಂಗಳೂರು ಬಂದರಿನಲ್ಲಿ ಸಾವಿರಕ್ಕೂ ಅಧಿಕ ಬೋಟ್‌ಗಳಿದ್ದು, ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿನಿತ್ಯ ದುಡಿಯುತ್ತಿದ್ದರು.

ಲಾಕ್‌ಡೌನ್ ಬಳಿಕ ಕಾರ್ಮಿಕರೆಲ್ಲಾ ತಮ್ಮೂರಿಗೆ ಮರಳಿದ್ದು, ಇದೀಗ ಮೀನುಗಾರಿಕಾ ಋತುವೂ ಅಂತ್ಯಗೊಂಡಿದ್ದು, ವರ್ಷ ಪೂರ್ತಿ ನಷ್ಟದಲ್ಲೇ ಮೀನುಗಾರಿಕಾ ಉದ್ಯಮ ಕಳೆದಿದೆ.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 60 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 101 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ