ಮಂಗಳೂರು: ಕೊಲ್ಲಿ ರಾಷ್ಟ್ರ ಯುನೈಟೆಡ್ ಅರಬ್ ಎಮಿರೈಟ್ಸ್ನಿಂದ ಮಂಗಳೂರಿಗೆ ಮತ್ತಷ್ಟು ಮೆಡಿಕಲ್ ಆಕ್ಸಿಜನ್ ಬಂದು ತಲುಪಿದೆ.
11 ಕಂಟೇನರ್ಗಳಲ್ಲಿ ಒಟ್ಟು 220 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಮಂಗಳೂರಿಗೆ ಆಗಮಿಸಿದೆ. ಭಾರತೀಯ ನೌಕಾಪಡೆಯ ವಾರ್ಶಿಪ್ ಐಎನ್‌ಎಸ್ ಶಾರ್ದುಲ್, ಕುವೈಟ್ನಿಂದ ನವಮಂಗಳೂರು ಬಂದರಿಗೆ ಜೀವವಾಯುವನ್ನ ಹೊತ್ತು ತಂದಿದೆ.
ಎಡಿಜಿಪಿ ಪ್ರತಾಪ್ ರೆಡ್ದಿ ಬಂದರಿನಲ್ಲಿ ಶಾರ್ದುಲ್ ಹಡಗನ್ನ ಬರಮಾಡಿಕೊಂಡರು. ಈ ವೇಳೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಉಪಸ್ಥಿತರಿದ್ದರು. ಸರ್ಕಾರದ ನಿರ್ದೇಶನದಂತೆ ರಾಜ್ಯದ ಇತರ ಭಾಗಗಳಿಗೆ ಈ ಆಕ್ಸಿಜನ್ ಕಂಟೇನರ್ಗಳು ರವಾನೆಯಾಗಲಿವೆ.