ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಯೋಜನೆಯಡಿ ಕುಚ್ಚಿಲಕ್ಕಿ ವಿತರಿಸುವಂತೆ ಸಚಿವ ಕೋಟ ಶ್ರೀನಿವಾಸಪೂಜಾರಿ ಒತ್ತಾಯಿಸಿದ್ದಾರೆ.
ಕರಾವಳಿಯ ಜಿಲ್ಲೆಗಳಲ್ಲಿ ಪಡಿತರ ಯೋಜನೆಯಡಿ ಅಕ್ಕಿ ವಿತರಿಸುವಾಗ ಉತ್ತಮ ಮಟ್ಟದ ಕುಚ್ಚಿಲಕ್ಕಿ (ಕುಸುಲಕ್ಕಿ) ವಿತರಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆ. ಗೋಪಾಲಯ್ಯ ರವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸಪೂಜಾರಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸೂಕ್ತ ವರದಿ ತಯಾರಿಸಿ 2 ಜಿಲ್ಲೆಯ ಪಡಿತರದಾರರಿಗೇ ಉತ್ತಮ ಗುಣಮಟ್ಟದ ಕುಚಲಕ್ಕಿ ವಿತರಣೆ ಮಾಡುವಂತೆ ಕೊರಿದ್ದಾರೆ.