ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಸೂರು ಹಸ್ತಾಂತರ

ಅಸಹಾಯಕರ ಬದುಕಿಗೆ ಬೆಳಕಾದರೆ ನಮ್ಮ ಜೀವನ ಸಾರ್ಥಕ: ಡಾ.ಹೇಮಾವತಿ.ವಿ ಹೆಗ್ಗಡೆಯವರು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ವಾತ್ಸಲ್ಯ ಸದಸ್ಯರಾದ ಜಯಶ್ರೀ ಯವರಿಗೆ ವಾತ್ಸಲ್ಯ  ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ವಾತ್ಸಲ್ಯ ಸೂರನ್ನು ಮಾತೃಶ್ರೀ ಡಾ.ಹೇಮಾವತಿ ವಿ ಹೆಗ್ಗಡೆಯವರು ಹಸ್ತಾಂತರಿಸಿ, ಬದುಕಿನ ದಿನನಿತ್ಯ ಉಪಯೋಗದ ಸಾಮಗ್ರಿಗಳ ವಾತ್ಸಲ್ಯ ಕಿಟ್ ವಿತರಣೆ ಮಾಡಿ ಮಾತನಾಡುತ್ತಾ  ನಾವು ಅಸಹಾಯಕರ ಬದುಕಿಗೆ ಬೆಳಕಾದರೆ ನಮ್ಮ ಜೀವನ ಸಾರ್ಥಕ, ನಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಮಾತ್ರ ಕೊನೆ ಕಾಲಕ್ಕೆ ನಮಗೆ ಅಸರೆಯಾಗುತ್ತಾರೆ, ಇಂದು ಇದ್ದ ಪರಿಸ್ಥಿತಿಗಳು ನಾಳೆ ಇರುವುದಿಲ್ಲ, ಬದುಕಿನಲ್ಲಿ ಒಂದು ಒಂದು ಮೆಟ್ಟಿಲುಗಳನ್ನು ಹತ್ತಿಯೇ ಮೇಲಕ್ಕೆ ಹೋಗಬೇಕಾಗುತ್ತದೆ, ಅಂತೆಯೇ ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕಿನಲ್ಲಿ ಯಶಸ್ಸನ್ನು ಪಡೆಯಬೇಕು ಎಂದರು.
ರಾಜ್ಯಾದ್ಯಂತ ವಾತ್ಸಲ್ಯ ಮನೆಯನ್ನು ಇಂದು ನಿರ್ಮಿಸುತ್ತಿದ್ದು, ಆದರೆ ಪ್ರತಿಯೊಂದು ಕಡೆಯಲ್ಲಿಯೂ ಕೂಡ ಅನೇಕ ಸಮಸ್ಯೆಗಳಿಂದ ಒಬ್ಬಂಟಿಯಾಗಿ ಜೀವನವನ್ನು ನಡೆಸುತ್ತಿರುವ ಅನೇಕರಿಗೆ ಹಾಗೂ ಅಸಹಾಯಕರಿಗೆ ಇಂದು ಕೂಡ ಪೂರ್ಣ ಸೌಕರ್ಯದ ಮನೆಯು ಇಲ್ಲದೆ ಇರುವುದನ್ನು ಗಮನಿಸಿ ಇಂದು ವಾತ್ಸಲ್ಯ ಮನೆಯನ್ನು ಪೂರ್ಣ ವ್ಯವಸ್ಥೆಗಳೊಂದಿಗೆ ರಾಜ್ಯಾದ್ಯಂತ ಅಲ್ಲಿಯ ಸ್ಥಿತಿಗತಿಗಳನ್ನು ಗಮನಿಸಿ ವಾತ್ಸಲ್ಯ ಮನೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಯವರಾದ ಹರೀಶ್ ಕೃಷ್ಣರವರು, ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಜಯರಾಮ್, ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ವಿಠಲ್ ಪೂಜಾರಿ,ನಿರ್ದೇಶಕರಾದ ದಿನೇಶ್ ಪೂಜಾರಿ, ಯೋಜನಾಧಿಕಾರಿಗಳಾದ ಯಶೋಧರ್,
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುಧೀರ್, ಜನಜಾಗೃತಿ ತಾಲೂಕು ವೇದಿಕೆ ಸದಸ್ಯರು ಸ್ಥಳೀಯ ಗಣ್ಯರು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು,ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು, ಜ್ಞಾನ ವಿಕಾಸದ ಸಮನ್ವಯಧಿಕಾರಿ ಮಧುರ ವಸಂತ್ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Spread the love
  • Related Posts

    ಕಾಡಾನೆ ಸಂಚಾರ ಹಿನ್ನಲೆ ದಿಡುಪೆ ಫಾಲ್ಸ್ ಭೇಟಿಗೆ ನಿರ್ಬಂಧ

    ಬೆಳ್ತಂಗಡಿ : ದಿಡುಪೆ ಫಾಲ್ಸ್ ಸುತ್ತಮುತ್ತಲಿನ ಪರಿಸರದಲ್ಲಿ ಕಾಡಾನೆಗಳ  ಸಂಚಾರ ಮಾಡುತ್ತಿವೆ. ಪ್ರವಾಸಿಗರು ಈ ಪರಿಸರದಲ್ಲಿ  ಓಡಾಟ ನಡೆಸುವಾಗ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ  ಅ.10 ರಿಂದ(ನಾಳೆಯಿಂದ) ದಿಡುಪೆ ಫಾಲ್ಸ್ ಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಮಾಡಿ ಬೆಳ್ತಂಗಡಿ ವಲಯ…

    Spread the love

    ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಜಿಲ್ಲಾ ಮಟ್ಟದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬೆಳ್ತಂಗಡಿ ತೆಕ್ಕೆಗೆ, ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ

    ಬೆಳ್ತಂಗಡಿ : (ಅ.08) ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಜಿಲ್ಲಾ ಮಟ್ಟದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬೆಳ್ತಂಗಡಿ ತೆಕ್ಕೆಗೆ, ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಾರ್ಟಿ ದಕ್ಷಿಣ…

    Spread the love

    You Missed

    ಕಾಡಾನೆ ಸಂಚಾರ ಹಿನ್ನಲೆ ದಿಡುಪೆ ಫಾಲ್ಸ್ ಭೇಟಿಗೆ ನಿರ್ಬಂಧ

    • By admin
    • October 9, 2026
    • 2 views
    ಕಾಡಾನೆ ಸಂಚಾರ ಹಿನ್ನಲೆ ದಿಡುಪೆ ಫಾಲ್ಸ್ ಭೇಟಿಗೆ ನಿರ್ಬಂಧ

    ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಜಿಲ್ಲಾ ಮಟ್ಟದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬೆಳ್ತಂಗಡಿ ತೆಕ್ಕೆಗೆ, ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ

    • By admin
    • October 9, 2026
    • 4 views
    ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಜಿಲ್ಲಾ ಮಟ್ಟದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬೆಳ್ತಂಗಡಿ ತೆಕ್ಕೆಗೆ, ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ

    ಕೇರಳ: ಸಿಡಿಲು ಬಡಿದು ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ದುರಂತ ಸಾವು; ಶೋಕಸಾಗರದಲ್ಲಿ ಆನೆ ಪ್ರಿಯರು!

    • By admin
    • October 5, 2026
    • 11 views
    ಕೇರಳ: ಸಿಡಿಲು ಬಡಿದು ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ದುರಂತ ಸಾವು; ಶೋಕಸಾಗರದಲ್ಲಿ ಆನೆ ಪ್ರಿಯರು!

    ಕರಾವಳಿಯಲ್ಲಿ ಮುಂದುವರಿದ ಮಳೆ; ರೈತರ ಮೊಗದಲ್ಲಿ ಸಂತಸ,4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    • By admin
    • October 5, 2026
    • 8 views
    ಕರಾವಳಿಯಲ್ಲಿ ಮುಂದುವರಿದ ಮಳೆ; ರೈತರ ಮೊಗದಲ್ಲಿ ಸಂತಸ,4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗ: ಸುತ್ತೂರು ಶ್ರೀ

    • By admin
    • October 4, 2026
    • 12 views
    ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗ: ಸುತ್ತೂರು ಶ್ರೀ

    ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳ ಕೊಡುಗೆ ಅಪಾರ; ಸಮಾಜಮುಖಿ ಸೇವೆಗಳಲ್ಲಿ ಧರ್ಮಸ್ಥಳ ದೇಶಕ್ಕೆ ಮಾದರಿ: ಶಾಸಕ ಸಿಮೆಂಟ್ ಮಂಜು

    • By admin
    • October 1, 2026
    • 13 views
    ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳ ಕೊಡುಗೆ ಅಪಾರ; ಸಮಾಜಮುಖಿ ಸೇವೆಗಳಲ್ಲಿ ಧರ್ಮಸ್ಥಳ ದೇಶಕ್ಕೆ ಮಾದರಿ: ಶಾಸಕ ಸಿಮೆಂಟ್ ಮಂಜು