ಹಾಸನ: ಕೊರೋನಾ 2ನೇ ಅಲೆ ನಿಯಂತ್ರಣ ಆಗುತ್ತಿರುವ ಬೆನ್ನಲ್ಲೇ ಕೋಡಿ ಮಠದ ಶ್ರೀಗಳು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.
ಔಷಧಿಯೇ ಇಲ್ಲದಂತಹ ಕಾಯಿಲೆಗಳು ಭಾರೀ ಪ್ರಭಾವವನ್ನು ಬೀರುತ್ತದೆ ಎಂದು ಎರಡು ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಗಳು, ಮತ್ತೆ ಭವಿಷ್ಯವನ್ನು ನುಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜೂನ್ 20ರ ವೇಳೆಯಲ್ಲಿ ಇದರ ಹಾವಳಿ ಕ್ಷೀಣಿಸಲಿದೆ ಎಂದು ಹೇಳಿದ್ದಾರೆ.
ಆದರೆ ಮುಂದೆ ಕಾದಿದೆ ಮಾರಿಹಬ್ಬ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಗಮನಿಸಬೇಕಾದ ವಿಚಾರ ಏನಂದರೆ, ಕಳೆದ ಕಾರ್ತಿಕ ಮಾಸದಲ್ಲಿ ಕೊರೊನಾ ಮೊದಲನೇ ಕಮ್ಮಿಯಾಗುತ್ತದೆ ಎಂದು ಕೋಡಿಶ್ರೀಗಳು, ಮುಂಬರುವ ಕಾರ್ತಿಕದಲ್ಲಿ ದೇಶಕ್ಕೆ ಹೊಸ ಸಮಸ್ಯೆ/ಕಾಯಿಲೆ ಎದುರಾಗಲಿದೆ ಎಂದು ಹೇಳಿರುವುದು ಜ್ಯೋತಿಷ್ಯ ಶಾಸ್ತ್ರ ನಂಬುವವರನ್ನು ಆತಂಕಕ್ಕೆ ದೂಡಿದೆ.
ಈಗಿನ ಕಾಯಿಲೆ ಜೂನ್ ಇಪ್ಪತ್ತರ ಮೇಲೆ ಕಮ್ಮಿಯಾಗುತ್ತಾ ಬರುತ್ತದೆ
ಕೊರೊನಾ ಎನ್ನುವ ಕಾಯಿಲೆ ಏನು ವಿಶ್ವವನ್ನು ಕಾಡುತ್ತಿದೆಯೋ ಅದು ಸಂಪೂರ್ಣ ಹೋಗಲು ಇನ್ನು ಹತ್ತು ವರ್ಷ ಬೇಕಾದೀತು. ಆದರೆ, ಈಗಿನ ಕಾಯಿಲೆ ಜೂನ್ ಇಪ್ಪತ್ತರ ಮೇಲೆ ಕಮ್ಮಿಯಾಗುತ್ತಾ ಬರುತ್ತದೆ. ಈಗ ಬಂದಿರುವ ರೋಗವನ್ನು ನಾವು ಗಂಟಲು ಬೇನೆ ಎಂದು ಕರೆಯುತ್ತಿದ್ದೆವು. ಯಾವಾಗ ಮನುಷ್ಯನಲ್ಲಿ ಸ್ವಚ್ಚತೆ ಹೋಯಿತೋ ಆಗ ಇಂತಹ ಕಾಯಿಲೆಗಳು ಕಫ, ಪಿತ್ತ, ವಾತ ರೀತಿಯಲ್ಲಿ ಮನುಷ್ಯನನ್ನು ಆವರಿಸುತ್ತದೆ.
ಮನುಷ್ಯ ತನ್ನ ನಿಯಂತ್ರಣ ತಪ್ಪಿದಾಗ ಇಂತಹ ಕಾಯಿಲೆಗಳು ಜನರನ್ನು ಕಾಡಲು ಆರಂಭಿಸುತ್ತದೆ
ಕಾಯಿಲೆಗಳು ಮಾರಕವಾಗದಿದ್ದರೂ, ಮನುಷ್ಯ ತನ್ನ ನಿಯಂತ್ರಣ ತಪ್ಪಿದಾಗ ಇಂತಹ ಕಾಯಿಲೆಗಳು ಜನರನ್ನು ಕಾಡಲು ಆರಂಭಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನೊಂದು ಅಲೆ ಎದುರಾಗಲಿದೆ. ಸಾವಿರಾರು ಸಾವುಗಳಾಗಿವೆ, ಎಲ್ಲರೂ ಮೆಡಿಶಿನ್ ಹಾಕಿ ಸತ್ತು ಹೋದವರು. ಇದರ ವಿಷ ಭೂಮಿಯನ್ನು ಸೇರುತ್ತಿದೆ, ಅದು ಹೊರಗೆ ಬರುತ್ತದೆ
ಕುಂಭ ರಾಶಿಯಲ್ಲಿ ಗುರು ಬಂದರೆ ಆ ವರ್ಷವೆಲ್ಲಾ ಮಳೆ ಬೆಳೆ ಜಾಸ್ತಿಯಾಗುತ್ತೆ.
ಹೋದ ಹೊತ್ತಲ್ಲೇ ಸತ್ತ, ಬಿದ್ದ ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಅಂತಹ ಕಾಯಿಲೆ ಮುಂದೆ ಬರುತ್ತದೆ, ಕುಂಭದಲ್ಲಿ ಗುರು ಬರಲು, ತುಂಬೋ ಕೆರೆಕಟ್ಟೆ ಶಂಭವಿನ ಪದಶಾಕ್ಷಿ ಡಬ್ಬವೆನಿಸಬೇಡಿ ಎನ್ನುವ ಪದ ನಮ್ಮಲ್ಲಿ ಬಳಕೆಯಲ್ಲಿದೆ.
ಹೂತ ಹೆಣಗಳು ಎದ್ದು ಮಾತಾಡುತ್ತಾವೆ. ಪ್ರೇತಗಳ ಭಾದೆ ಎದುರಾಗಲಿದೆ:
ಕಾರ್ತಿಕದ ವರೆಗೂ ಮಳೆ ಸುರಿಯುತ್ತೆ, ಮಳೆ ಬಂದರೆ ಶೀತ, ಇದು ಈಗಿನ ಕಾಯಿಲೆಯ ಸ್ನೇಹಿತ. ಜಗತ್ತಿಗೆ ಅಪಾಯಕಾರಿ ಸನ್ನಿವೇಶ ಎದುರಾಗಲಿದೆ, ದೊಡ್ಡದೊಡ್ಡ ತಲೆಗಳು ಉರುಳಲಿವೆ, ರಾಜಕೀಯ ವಿಪ್ಲವವಾಗಲಿದೆ. ಸಾಮೂಹಿಕ ಸಾವುನೋವುಗಳು ಆಗುತ್ತವೆ, ಹೂತ ಹೆಣಗಳು ಎದ್ದು ಮಾತಾಡುತ್ತಾವೆ. ಪ್ರೇತಗಳ ಭಾದೆ ಎದುರಾಗಲಿದೆ