ದುಬೈ: ಕೊರೊನಾ ಲಸಿಕೆ ಸ್ವೀಕರಿಸೋದನ್ನ ಉತ್ತೇಜಿಸುವ ಸಲುವಾಗಿ ದುಬೈನ ರೆಸ್ಟೋರೆಂಟ್ಗಳಲ್ಲಿ ಕೊರೊನಾ ಲಸಿಕೆ ಪಡೆದ ಜನತೆಗೆ ರಿಯಾಯಿತಿ ನೀಡುತ್ತಿವೆ.
10 ಮಿಲಿಯನ್ ಜನಸಂಖ್ಯೆ ಹೊಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಈಗಾಗಲೇ 2.5 ಮಿಲಿಯನ್ ಜನರಿಗೆ ಕೊರೊನಾ ಲಸಿಕೆ ನೀಡಿದೆ.
ಈ ಮೂಲಕ ಇಸ್ರೆಲ್ ಬಳಿಕ ಅತಿ ಹೆಚ್ಚು ಲಸಿಕೆ ನೀಡಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರೀತಿಯನ್ನ ಹಂಚಿ ಕಣ್ಣೀರನ್ನಲ್ಲ ಎಂದು ಹೇಳಿದ ಗೇಟ್ಸ್ ಹಾಸ್ಪಿಟಾಲಿಟಿ ತನ್ನ ಮೂರು ರೆಸ್ಟಾರೆಂಟ್ಗಳಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ಬಿಲ್ನಲ್ಲಿ ರಿಯಾಯಿತಿಯನ್ನ ನೀಡುತ್ತಿದೆ. ಮೊದಲ ಡೋಸ್ ಪಡೆದವರಿಗೆ 10 ಪ್ರತಿಶತ ಹಾಗೂ ಎರಡು ಡೋಸ್ಗಳನ್ನ ಪೂರ್ಣಗೊಳಿಸಿದವರಿಗೆ 20 ಪ್ರತಿಶತ ರಿಯಾಯಿತಿ ಸಿಗಲಿದೆ.
ಕೊರೊನಾ ಲಸಿಕೆ ಪಡೆದ ಸಂಬಂಧ ವೈದ್ಯಕೀಯ ಪ್ರಮಾಣ ಪತ್ರಗಳನ್ನ ತೋರಿಸಿದ್ರೆ ರೆಸ್ಟಾರೆಂಟ್ಗಳಲ್ಲಿ ಈ ರಿಯಾಯಿತಿ ಸಿಗಲಿದೆ.