ಕೊರೋನಾ ಹೊಡೆತಕ್ಕೆ ಕರುನಾಡು ತತ್ತರ! 11ಸಾವಿರವನ್ನು ದಾಟಿ ಮುನ್ನುಗುತ್ತಿದೆ ಹೆಮ್ಮಾರಿ ಕೊರೋನಾ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿಯ ಆರ್ಭಟ ಹೆಚ್ಚುತಿದ್ದು ರಾಜ್ಯರಾಜಧಾನಿಯ ಜನತೆಯನ್ನ ಬೆಚ್ಚಿಬೀಳಿಸಿದೆ.

ರಾಜ್ಯರಾಜಧಾನಿಯಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು ಬಳ್ಳಾರಿ ಕಲಬುರ್ಗಿ ಕೊಪ್ಪಳ ಧಾರವಾಡ ಸೇರಿದಂತೆ ಕಡಲತಡಿ ಮಂಗಳೂರನ್ನು ಬೆಚ್ಚಿಬೀಳಿಸಿದೆ.

READ ALSO

ರಾಜ್ಯದಲ್ಲಿ ಇಂದು 445 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 11005ಕ್ಕೆ ಏರಿಕೆಯಾಗಿದೆ

445ಸೋಂಕಿತರ ಪೈಕಿ 86 ಮಂದಿ ವಿದೇಶ ಹಾಗೂ ಹೊರರಾಜ್ಯದಿಂದ ಪ್ರಯಾಣ ಬೆಳೆಸಿದವರಾಗಿದ್ದಾರೆ.

ಮಹಾಮಾರಿ ರುದ್ರನರ್ತನಕ್ಕೆ 10 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 180ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಬೆಂಗಳೂರು 147
ಬಳ್ಳಾರಿ 47
ಕಲಬುರ್ಗಿ 42
ಕೊಪ್ಪಳ 36
ದಕ್ಷಿಣಕನ್ನಡ 33
ಧಾರವಾಡ 30
ರಾಯಚೂರು 14
ಗದಗ 12
ಚಾಮರಾಜನಗರ 11
ಉಡುಪಿ 09
ಯಾದಗಿರಿ 07
ಮಂಡ್ಯ 06
ಉತ್ತರಕನ್ನಡ 06
ಶಿವಮೊಗ್ಗ 06
ಕೋಲಾರ 06
ಮೈಸೂರು 05
ಚಿಕ್ಕಮಗಳೂರು 04
ಕೊಡಗು 04
ಹಾಸನ 03
ವಿಜಯಪುರ 02
ತುಮಕೂರು 02
ಹಾವೇರಿ 02
ಬೀದರ್ 01
ಬೆಳಗಾವಿ 01
ರಾಮನಗರ 01
ಚಿತ್ರದುರ್ಗ 01
ದಾವಣಗೆರೆ 01