ರಾಜ್ಯದಲ್ಲಿ ಇನ್ಮುಂದೆ ಅಕ್ರಮ ಒಂಟೆ, ಗೋವುಗಳ ಹತ್ಯೆಗೆ ಬ್ರೇಕ್.?

ಬೆಂಗಳೂರು : ರಾಜ್ಯಾದ್ಯಂತ ಬಕ್ರೀದ್ ಸೇರಿದಂತೆ ಮುಂತಾದ ಹಬ್ಬದ ದಿನಗಳಲ್ಲಿ ಅಕ್ರಮ ಒಂಟೆ, ಗೋವುಗಳ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಹಬ್ಬದ ದಿನಗಳನ್ನು ಒಳಗೊಂಡಂತೆ ಅನಧಿಕೃತವಾಗಿ ಗೋವು, ಒಂಟೆ ಹತ್ಯೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಇದೇ ರೀತಿಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಸಮಿತಿ ರಚನೆಯಾಗಿ, ಅಕ್ರಮ ಗೋವು, ಒಂಟೆ ಹತ್ಯೆಗೆ ಬ್ರೇಕ್ ಹಾಕಲಾಗುತ್ತದೆ ಎನ್ನಲಾಗುತ್ತಿದೆ.

ಈ ಕುರಿತಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಎನ್ ಶಿವಕುಮಾರ್, ನಡಾವಳಿಯೊಂದನ್ನು ಪ್ರಕಟಿಸಿದ್ದು, ರಾಜ್ಯದಲ್ಲಿ ಹಬ್ಬದ ದಿನಗಳನ್ನೂಳಗೊಂಡಂತೆ ಅನಧಿಕೃತ ಗೋವು, ಒಂಟೆಗಳ ಹತ್ಯೆಯನ್ನು ಮತ್ತು ಸಾಮೂಹಿಕ ಹತ್ಯೆಯನ್ನು ತಡೆಗಟ್ಟಲು ಸರ್ಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯೊಂದನ್ನು ರಚಿಸಿದ್ದು, ಸದರಿ ಸಮಿತಿಯು ಅನಧಿಕೃತ ಪ್ರಾಣಿ ಹತ್ಯೆ, ಸಾಗಾಣಿಕೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳತಕ್ಕದೆಂದು ನಿರ್ದೇಶಿಸಿರುವುದರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ರಾಣಿಗಳ ವಧೆಯನ್ನು ತಡೆಯುವ ನಿಟ್ಟಿನಿಂದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರ್ ಟಿ ಓ ಇಲಾಖೆ, ಪಶುಪಾಲನಾ ಇಲಾಖೆ, ಎನ್ ಜಿ ಒ ಮತ್ತು ಬಿಬಿಎಂಪಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.

READ ALSO

ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯಂತೆಯೇ ರಾಜ್ಯದೆಲ್ಲೆಡೆ ಹಬ್ಬದ ದಿನಗಳನ್ನೂ ಒಳಗೊಂಡಂತೆ ಅನಧಿಕೃತವಾಗಿ ಗೋವು, ಒಂಟೆಗಳ ಹತ್ಯೆಯನ್ನು ಮತ್ತು ಸಾಮೂಹಿಕ ಹತ್ಯೆಯನ್ನು ತಡೆಗಟ್ಟಲು ಸಮಿತಿ ರಚಿಸಲಾಗುತ್ತಿದೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಅನಧಿಕೃತ ಗೋವು, ಒಂಟೆಗಳ ಹತ್ಯೆಗೆ ಬ್ರೇಕ್ ಹಾಕಲಿದೆ ಎಂದು ಹೇಳಲಾಗುತ್ತಿದೆ.