ತುಳು ವಿಧ್ವಾಂಸ, ಭಾಷಾ ಸಂಶೋಧಕ ಯು. ಪಿ ಉಪಾಧ್ಯಾಯ ಇನ್ನಿಲ್ಲ

ಉಡುಪಿ: ತುಳು ವಿಧ್ವಾಂಸ, ಭಾಷಾ ಸಂಶೋಧಕ ಯು. ಪಿ ಉಪಾಧ್ಯಾಯ ಅವರು (85) ಶುಕ್ರವಾರ ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಭಾಷೆ, ಜಾನಪದ, ಸಂಸ್ಕೃತಿ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ಯು. ಪಿ ಉಪಾಧ್ಯಾಯರು ರಾಷ್ಟ್ರಕವಿ ಗೋವಿಂದ ಪೈ ತುಳು ನಿಘಂಟು ಯೋಜನೆಯ ಸಂಪಾದಕರಾಗಿದ್ದರು. ಈ ಯೋಜನೆಯಲ್ಲಿ ಆರು ಸಂಪುಟಗಳ ( 3,440 ಪುಟ, ಒಂದು ಲಕ್ಷ ಶಬ್ಧ) ತುಳು ನಿಘಂಟು ಹೊರತಂದಿದ್ದರು.

READ ALSO

ಪತ್ನಿ ದಿ. ಡಾ. ಸುಶೀಲಾ ಉಪಾಧ್ಯಾಯ ಅವರೊಂದಿಗೆ ಸೇರಿ ಭಾಷೆ, ಜಾನಪದ ಸಂಸ್ಕೃತಿಯ ಕುರಿತಾಗಿ ಬಹಳಷ್ಟು ಸಂಶೋಧನೆ ನಡೆಸಿದ್ದಾರೆ. ಭಾಷಾ ಸಂಶೋಧನೆಯ ಕುರಿತಾಗಿ ವಿಶೇಷ ಆಸಕ್ತಿ ಹೊಂದಿದ್ದ ಉಪಾಧ್ಯಾಯರು ಆಫ್ರಿಕಾ ದೇಶಗಳಿಗೆ ತೆರಳಿ ಜಾನಪದ ಭಾಷೆಗಳ ಕುರಿತು ಅಧ್ಯಯನ ನಡೆಸಿದ್ದರು.

ಸೇಡಿಯಾಪು ಕೃಷ್ಣ ಭಟ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಯುಪಿ ಉಪಾಧ್ಯಾಯರು ಪಾತ್ರರಾಗಿದ್ದರು. ಅಮೇರಿಕಾದಲ್ಲಿ ನೆಲೆಸಿರುವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.