BBMP ಆಯುಕ್ತರಾಗಿ ಮಂಜುನಾಥ ಪ್ರಸಾದ್ ರವರನ್ನು ನೇಮಕಗೊಳಿಸಿ ರಾಜ್ಯಸರ್ಕಾರದ ಆದೇಶ

ಬೆಂಗಳೂರು: ಕೊರೋನಾಗೆ ಬೆಂಗಳೂರಿನಲ್ಲಿ ನಡೆಯಿತು ಮೊದಲ ಅಧಿಕಾರಿಯ ತಲೆದಂಡ. ಅನಿಲ್ ಕುಮಾರ್ BBMP ಆಯುಕ್ತರಾಗಿದ್ದರು ಇದೀಗ ಮಂಜುನಾಥ ಪ್ರಸಾದ್ ರವರನ್ನು ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ. ಕೊರೋನಾ ಗೆ ಸಂಬಂಧಿಸಿದಂತೆ ಕಾರ್ಯವೈಖರಿಯಲ್ಲಿ ಮುಖ್ಯಮಂತ್ರಿಯವರು ಅಸಮಾಧಾನಗೊಂಡಿದ್ದರು ಇದರ ಬೆನ್ನಲ್ಲೇ ಈಗ ವರ್ಗಾವಣೆ ಮಾಡಿ ರಾಜ್ಯಸರ್ಕಾರ ಆದೇಶಿಸಿದೆ.

ಕೋವಿಡ್ ಪರಿಸ್ಥಿತಿ ನಿಯಂತ್ರಿಸುವಲ್ಲಿ ಅನಿಲ್​ ಕುಮಾರ್ ಅವರು ವೈಫಲ್ಯರಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಹೈಕೋರ್ಟ್‌ನಿಂದಲೂ ಬಿಬಿಎಂಪಿ ಕಾರ್ಯ ವೈಖರಿಗೆ ಚಾಟಿ ಬೀಸಿತ್ತು. ಈ ಕಾರಣಕ್ಕೆ ಅನಿಲ್ ಕುಮಾರ್ ಅವರನ್ನು ಆ ಸ್ಥಾನದಿಂದ ಎತ್ತಂಗಡಿ ಮಾಡಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಅಲ್ಲದೆ,ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿದ್ದ ಕುಮಾರ ನಾಯಕ್ ಅವರನ್ನು ಬಿಬಿಎಂಪಿ ಆಯುಕ್ತರನ್ನಾಗಿ ನೇಮಿಸಲು ಚಿಂತನೆ ನಡೆದಿದೆ ಎನ್ನಲಾಗಿತ್ತು. ಆದರೆ, ಈ ಸ್ಥಾನಕ್ಕೆ ಈಗ ಎನ್.ಮಂಜುನಾಥ್ ಪ್ರಸಾದ್ ಅವರನ್ನು ನೂತನ ಕಮಿಷನರ್​ ಆಗಿ ನೇಮಕ ಮಾಡಲಾಗಿದೆ. ಇನ್ನು, ಅನಿಲ್ ಕುಮಾರ್ ರನ್ನು ಸಾರ್ವಜನಿಕ ಉದ್ದಿಮೆ ಅಪರ ಮುಖ್ಯ ಕಾರ್ಯದರ್ಶಿ ಆಗಿ ವರ್ಗಾವಣೆ ಮಾಡಲಾಗಿದೆ.

READ ALSO