ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಯುವಕನಿಗೆ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯಿಂದ ಆರ್ಥಿಕ ನೆರವು ಹಾಗೂ ಮಾಶಾಸನ ವಿತರಣೆ

ಶಿಡ್ಲಘಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಯುವಕನಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ಹಾಗೂ ಮಾಶಾಸನವನ್ನು ವಿತರಣೆ ಮಾಡಲಾಯಿತು.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮತ್ತು ತಂದೆ ತಾಯಿ ಇಲ್ಲದ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಕಂಬದಹಳ್ಳಿಯ 20 ವರ್ಷದ ಯುವಕನಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 10000 ಸಹಾಯಧನ ನೀಡಿದ್ದು, ಬಡವರ ಕಲ್ಯಾಣಕ್ಕಾಗಿ ಪೂಜ್ಯರು ಹತ್ತು ಹಲವಾರು ಕಾರ್ಯಕ್ರಮ ಮಾಡುತ್ತಾ ಬಂದಿದ್ದು ಇದರಲ್ಲಿ ನಿರ್ಗತಿಕರ ಮಾಶಾಸನ ಕಾರ್ಯಕ್ರಮವು ಒಂದಾಗಿದೆ ಇದರಂತೆ ಯುವಕನ ಜೀವನ ನಡೆಸಲು
ಪ್ರತಿ ತಿಂಗಳು 750/-ರಂತೆ ಮಾಶಾಸನವನ್ನು ಮಂಜೂರುಗೊಳಿಸಿ ಬಡ ಯುವಕನ ಬದುಕಿಗೆ ಆಶಾಕಿರಣರಾಗಿದ್ದಾರೆ.

READ ALSO

ಶ್ರೀ ಕ್ಷೇತ್ರದಿಂದ ಹೆಗ್ಗಡೆಯವರು ಮಂಜೂರುಗೊಳಿಸಿದ ಆರ್ಥಿಕ ನೆರವು ಹಾಗೂ ಮಾಸಾಶನವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ತ್ಯಾಗರಾಜ್ ರವರು ವಿತರಿಸಿದರು ಈ ಸಂಧರ್ಭದಲ್ಲಿ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಊರಿನ ಮುಖಂಡರಾದ ಮಂಜುನಾಥ್ ಮೇಲ್ವಿಚಾರಕರಾದ ಜ್ಯೋತಿ ಸೇವಾಪ್ರತಿನಿಧಿ ಲಕ್ಷ್ಮಮ್ಮ ಪದಾಧಿಕಾರಿ ಗೀತಾ ಉಪಸ್ಥಿತರಿದ್ದರು.