ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ ಇನ್ನು ನೆನಪು ಮಾತ್ರ

ಬೆಂಗಳೂರು: ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ (70) ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು.

ಕಿರುತೆರೆಯ ಪ್ರೇಮಲೋಕ ಧಾರವಾಹಿಯಲ್ಲಿ ಅವರು ನಟಿಸ್ತಾ ಇದ್ದರು. ಇತ್ತೀಚೆಗೆ ಧಾರಾವಾಹಿಯ ಶೂಟಿಂಗ್​ನಲ್ಲೂ ಅವರು ಭಾಗಿಯಾಗಿದ್ದರು. ಹಲವಾರು ಸಿನಿಮಾ, ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು.

READ ALSO

ರಂಗಭೂಮಿ, ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹುಲಿವನ ಗಂಗಾಧರ್ ತೆಂಗುಬೆಳೆಗಾರರೂ ಆಗಿದ್ದರು.