ಮುಂಡಾಜೆ: ರಾಷ್ಟ್ರೀಯ ಆರೋಗ್ಯ ಮಿಷನ್; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ; ರಾಷ್ಟ್ರೀಯ ಬಾಯಿ ಆರೋಗ್ಯ ನೀತಿ; ಬೆಳ್ತಂಗಡಿ ತಾಲೂಕು ಆರೋಗ್ಯ ಕಛೇರಿ; ಎ.ಬಿ. ಶೆಟ್ಟಿ ದಂತವೈದ್ಯಕೀಯ ಕಾಲೇಜು, ದೇರಳಕಟ್ಟೆ; ಸೇವಾಭಾರತಿ (ರಿ.) ಕನ್ಯಾಡಿ, ಬೆಳ್ತಂಗಡಿ ತಾಲೂಕು; ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಮಂಡಳಿ; ಚಿರಂಜೀವಿ ಯುವಕ ಮಂಡಲ (ರಿ.), ಕಾನರ್ಪ, ಕಡಿರುದ್ಯಾವರ; ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ, ಕಾನರ್ಪ, ಕಡಿರುದ್ಯಾವರ; ಮಹಮ್ಮಾಯಿ ಸೇವಾ ಸ್ಪಂದನ, ಕಡಿರುದ್ಯಾವರ ಇವುಗಳ ಜಂಟಿ ಆಶ್ರಯದಲ್ಲಿ ದಿನಾಂಕ 10-01-2022ನೇ ಸೋಮವಾರ ವಿವೇಕಾನಂದ ವಿದ್ಯಾಸಂಸ್ಥೆ ಮುಂಡಾಜೆ ಇಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಸಲಾಯಿತು.
ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ವಿವೇಕಾನಂದ ವಿದ್ಯಾ ಸಂಸ್ಥೆ ಮುಂಡಾಜೆ ಇದರ ಅಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ವಿಶ್ವನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ದಕ್ಷಿಣ ಕನ್ನಡ ಜಿಲ್ಲಾ ಎನ್.ಓ.ಹೆಚ್.ಪಿ ಯೋಜನಾಧಿಕಾರಿ ಗಳಾದ ಡಾ| ಲವೀನಾ ಹಾಗೂ ದೇರಳ ಕಟ್ಟೆ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಸಮುದಾಯ ಶಿಬಿರಾಧಿಕಾರಿಗಳಾದ ಡಾ| ಶಿಲ್ಪಾ ಇವರುಗಳು ದೀಪ ಪ್ರಜ್ವಲಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸೇವಾಭಾರತಿ (ರಿ.) ಕನ್ಯಾಡಿ ಇದರ ಅಧ್ಯಕ್ಷರಾದ ಶ್ರೀ ವಿನಾಯಕ ರಾವ್ ಕನ್ಯಾಡಿ ಅವರ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಉಪ್ಪಿನಂಗಡಿ ಅರೋಗ್ಯ ಕೇಂದ್ರದ ದಂತ ವೈದ್ಯರಾದ ಡಾ. ಹುಸೇನ್ ಮುಷಾಕಿರ್ ಅವರು ದಂತ ಅರೋಗ್ಯ ರಕ್ಷಣೆ ಕುರಿತು ಹಾಗೂ ಅಗತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಿ ಶಿಬಿರದ ಸದುಪಯೋಗವನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಜೋಲಿ ಓ ಐ, ಚಿರಂಜೀವಿ ಯುವಕ ಮಂಡಲದ ಅದ್ಯಕ್ಷರಾದ ಶ್ರೀ ಜನಾರ್ದನ ಕಾನರ್ಪ , ಮಹಾಮ್ಮಾಯಿ ಸೇವಾ ಸ್ಪಂದನ ಕಡಿರುದ್ಯಾವರದ ಪ್ರಮುಖರಾದ ಶ್ರೀ ದೀಕ್ಷಿತ್ ಹೆಚ್ ಉಪಸ್ಥಿತಿರಿದ್ದರು. ವಿವೇಕಾನಂದ ವಿದ್ಯಾ ಸಂಸ್ಥೆ ಯ ಅಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಭಾರತಿ ಫಡ್ಕೆ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ವಸಂತಿ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು ಹಾಗೂ
ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ಸುಬಾಶ್ಚಂದ್ರ ಜೈನ್ ವಂದಿಸಿದರು.