ನೂತನವಾಗಿ ಸ್ಥಾಪನೆಯಾದ “ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಲ್ಮಂಜ” ನೂತನ ಆಡಳಿತ ಮಂಡಳಿ ಅವಿರೋಧ ಆಯ್ಕೆ

READ ALSO


ಬೆಳ್ತಂಗಡಿ: ಕಲ್ಮಂಜದಲ್ಲಿ ನೂತನವಾಗಿ ಸ್ಥಾಪನೆಯಾದ “ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕಲ್ಮಂಜ” ಇದರ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಸಂಘದ ಅಧ್ಯಕ್ಷರಾಗಿ ಶ್ರೀ ರಮೇಶ್ ಗೌಡ ಗಲ್ಲೋಡಿ ಮತ್ತು ಉಪಾಧ್ಯಕ್ಷರಾಗಿ ಶ್ರೀ ಸೂರ್ಯನಾರಾಯಣ ಹೊಳ್ಳ ಪಜಿರಡ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಚಿನ್ ಗೌಡ ಕಲ್ಮಂಜ ಅವರನ್ನು ನೇಮಿಸಿಕೊಳ್ಳಲಾಗಿದೆ. ಹಾಗೆಯೇ ನಿರ್ದೇಶಕರುಗಳಾಗಿ ರಾಧಾಕೃಷ್ಣ,ಶ್ರೀನಿವಾಸ್,ಮಂಜುನಾಥ್ ಗುಡಿಗಾರ್,ಗೀತಾ ನಾಯ್ಕ್,ಪುಷ್ಪವತಿ,ಶಿವಪ್ರಸಾದ್,ದೇಜಪ್ಪ ಪೂಜಾರಿ, ಗಿರೀಶ್ ಗೌಡ, ರಾಘವೇಂದ್ರ ವಿಷ್ಣುನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.