ದ.ಕ ಜಿಲ್ಲಾ ನೋಟರಿ ವಕೀಲರಾಗಿ ಬೆಳ್ತಂಗಡಿಯ ಸೌಮ್ಯಾ ರಾಜೇಶ್‌ ಕೆ ಪೂಜಾರಿ ಆಯ್ಕೆ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಸೌಮ್ಯಾ ರಾಜೇಶ್‌ ಕೆ ಪೂಜಾರಿಯವರನ್ನು‌ ದಕ್ಷಿಣ ಕನ್ನಡ ಜಿಲ್ಲಾ ನೋಟರಿ ವಕೀಲರಾಗಿ ಕೇಂದ್ರ ಸರ್ಕಾರ ನೇಮಕ‌ಮಾಡಿ ಆದೇಶ ಹೊರಡಿಸಿದೆ.

ಮೂಲತಃ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮ ಮಿತ್ತಕೋಡಿಯ ದಿ. ಓಬಯ್ಯ ಪೂಜಾರಿ ಮತ್ತು ರೇವತಿ ದಂಪತಿಯ ಪುತ್ರಿಯಾಗಿರುವ ಇವರು ಕಾನೂನು ಪದವಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದ್ದು

READ ALSO

ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಪರ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್ ಅವರ ಜೊತೆ‌ ನ್ಯಾಯವಾದಿಯಾಗಿ ಮಂಗಳೂರಿನಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.

ಇವರು ಬೆಳ್ತಂಗಡಿ ತಾಲೂಕು ಕಿಲ್ಲೂರಿನ
ರಾಜೇಶ್.ಕೆ.ಪೂಜಾರಿಯವರ ಧರ್ಮಪತ್ನಿಯಾಗಿದ್ದು ಮಗಳು ರಿಷಾ.ಆರ್ ಪೂಜಾರಿ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ.