ಸೆಲ್ಪಿ ಹುಚ್ಚಿಗೆ ಐವರು ಬಲಿ! ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕಲ್ಮಂಡ್ವಿ ಜಲಪಾತದಲ್ಲಿ ನಡೆದ ದುರ್ಘಟನೆ!

ಪಾಲ್ಘರ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಜವಾಹರ್ ಪ್ರದೇಶದ ಜಲಪಾತದಲ್ಲಿ ಮುಳುಗಿ ಐವರು ಮೃತಪಟ್ಟಿರುವ ಘಟನೆ ನಡೆದಿದೆ.

ಲಾಕ್​​​​ಡೌನ್ ನಡುವೆಯೂ 13 ಜನರ ಗುಂಪು ಜವಾಹರ್ ಪಟ್ಟಣದ ಬಳಿಯ ಕಲ್ಮಂಡ್ವಿ ಜಲಪಾತಕ್ಕೆ ಹೋಗಿದ್ದರು. ಅವರಲ್ಲಿ ಇಬ್ಬರು ಸೆಲ್ಫಿ ತೆಗೆಯಲು ಮುಂದಾದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಇನ್ನೂ ಮೂವರು ನೀರಿಗೆ ಧುಮುಕಿದ್ದು, ಐವರೂ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮೃತರನ್ನು ನಿಮೇಶ್ ನರೇಂದ್ರ ಪಟೇಲ್ (30), ಜೈ ಅತುಲ್ ಭೋಯಿರ್ (21), ಪ್ರಥಮೇಶ್ ಪ್ರಕಾಶ್ ಚವಾಣ್ (18), ದೇವೇಂದ್ರ ಗಂಗಾಧರ್ ವಾಘ್ (24) ಮತ್ತು ದೇವೇಂದ್ರ ಫಾಲ್ತಂಕರ್ (21) ಎಂದು ಗುರುತಿಸಲಾಗಿದೆ.ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿ ಮೃತ ದೇಹಗಳನ್ನು ಮೇಲೆತ್ತುವ ಕಾರ್ಯ ಮಾಡಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ.

Spread the love
  • Related Posts

    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ ವರ್ಗಾವಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಡಿ.ಸಿ ಸಹಿತ 17ಜಿಲ್ಲಾಧಿಕಾರಿಯವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಂಗಳೂರಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಮಕ್ಕಳ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈಮುಹಿಲನ್ ರವರಿಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಸದ್ರಿಯವರ ತೆರವಾದ ಜಾಗಕ್ಕೆ ದರ್ಶನ HV ಯವರನ್ನು ವರ್ಗಾಯಿಸಿ…

    Spread the love

    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    ಬೆಳ್ತಂಗಡಿ: ಕಾಜೂರಿನಿಂದ ದಿಡುಪೆಗೆ ಹೋಗುವ ರಸ್ತೆಗೆ ಭಾರೀ ಮಳೆಗೆ ಹೆಮ್ಮರವೊಂದು ಉರುಳಿ ಬಿದ್ದು ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಪ್ರತಿದಿನ ಹತ್ತಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಮರ…

    Spread the love

    You Missed

    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ ವರ್ಗಾವಣೆ

    • By admin
    • June 17, 2025
    • 157 views
    ದ.ಕ ಜಿಲ್ಲಾಧಿಕಾರಿ ಸಹಿತ 17ಜಿಲ್ಲಾಧಿಕಾರಿಯವರ  ವರ್ಗಾವಣೆ

    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    • By admin
    • June 16, 2025
    • 75 views
    ಕಾಜೂರು-ದಿಡುಪೆ ರಸ್ತೆಯಲ್ಲಿ ಬಿದ್ದ ಮರ ಕೆಲಕಾಲ ಸಂಚಾರ ಅಸ್ತವ್ಯಸ್ತ

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • June 16, 2025
    • 266 views
    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ  ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    • By admin
    • June 15, 2025
    • 184 views
    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    • By admin
    • June 12, 2025
    • 107 views
    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    • By admin
    • June 12, 2025
    • 65 views
    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ