ಧರ್ಮಸ್ಥಳ ಕನ್ಯಾಡಿ : ಧರ್ಮಸ್ಥಳ ಗ್ರಾಮದ ಕನ್ಯಾಡಿ ಪೆಟ್ರೋಲ್ ಪಂಪ್ ಬಳಿ ಶರತ್ ಕೂಡೇಲು ಇವರ ಮಾಲಿಕತ್ವದ “ಪವರ್ ಟೆಕ್ ಬ್ಯಾಟರಿ ” ಎಂಬ ಸಂಸ್ಥೆಯು ಶುಭಾರಂಭ ಗೊಂಡಿದೆ.
ಸಂಸ್ಥೆಯ ಮಾಲಿಕರ ತಂದೆ ಮೋನಪ್ಪ ಪೂಜಾರಿ ತಾಯಿ ರುಕ್ಮಿಣಿ ಇವರು ದೀಪಾ ಬೆಳಗಿಸಿ ಉದ್ಘಾಟಿಸಿದರು.
ಕಟ್ಟಡದ ಮಾಲೀಕರಾದ ಉದಯ, ತುಳುನಾಡ್ ಒಕ್ಕೂಟ ಸಂಸ್ಥಾಪಕರಾದ ಶೈಲೇಶ್ ಆರ್. ಜೆ., ಕನ್ಯಾಡಿ ಉದ್ಯಮಿ ಉದಯ ಧರ್ಮಸ್ಥಳ, ತುಳುನಾಡ್ ಒಕ್ಕೂಟ ಬೆಳ್ತಂಗಡಿ ತಾಲ್ಲೂಕು ಅದ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಯೋಗಿಶ್ ಕನ್ಯಾಡಿ, ಸತೀಶ್ ಹಾಗೂ ಇತರರು ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಶುಭಾರಂಭಕ್ಕೆ ಆಗಮಿಸಿದ ಎಲ್ಲರನ್ನು ಮಾಲಕರಾದ ಶರತ್ ಕೂಡೇಲು, ಶ್ರೀಮತಿ ಚಿತ್ರಾ ಶರತ್ ಮತ್ತು ಬೇಬಿ ಬೂವಿ ಇವರು ಸ್ವಾಗತಿಸಿ ಸತ್ಕರಿಸಿದರು.