ವೈದ್ಯರು ಹಾಗೂ ಪತ್ರಕರ್ತರಿಗೆ ಶುಭಹಾರೈಸಿದ ಸಿ.ಎಂ. ಬಿ ಎಸ್ ವೈ

ಬೆಂಗಳೂರು: ಸಮಾಜ ಕಟ್ಟುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಮಾಧ್ಯಮಗಳನ್ನು ಮುನ್ನೆಡೆಸುವ ಎಲ್ಲಾ ಪತ್ರಕರ್ತ ಬಂಧುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಪತ್ರಿಕಾ ದಿನ’ದ ಶುಭಾಶಯಗಳನ್ನು ಕೋರಿದ್ದಾರೆ.

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭವಾದ ಜುಲೈ 1ನೇ ತಾರೀಕಿನಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮೂಲಕ ಪತ್ರಕರ್ತರು ರೂಪಿಸುವ ಸಾಮಾಜಿಕ ಅಭಿಪ್ರಾಯಗಳಿಗೆ ತುಂಬಾ ಮಹತ್ವವಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಪತ್ರಿಕಾರಂಗ, ಪ್ರಜಾಪ್ರಭುತ್ವವನ್ನು ಬಲಗೊಳಿಸುವ ವಿಚಾರಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ. ಇಂತಹ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಪತ್ರಕರ್ತ ಪರಿವಾರಕ್ಕೆ ಮತ್ತೊಮ್ಮೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಪತ್ರಕರ್ತರಿಗೆ  ಶುಭಾಶಯ ಸಲ್ಲಿಸಿದ ಸಿಎಂ ಬಿಎಸ್​ವೈ

ಪತ್ರಕರ್ತರಿಗೆ ಶುಭಾಶಯ ಸಲ್ಲಿಸಿದ ಸಿಎಂ ಬಿಎಸ್​ವೈ

ಅದೇ ರೀತಿ ಸಾರ್ವಜನಿಕರ ಆರೋಗ್ಯದ ಕಾವಲುಗಾರರಂತೆ ದಿನವಿಡೀ ಕೆಲಸ ಮಾಡುವ ವೈದ್ಯ ಸಮೂಹಕ್ಕೆ ಸಿಎಂ ಬಿಎಸ್​ವೈ ‘ರಾಷ್ಟ್ರೀಯ ವೈದ್ಯ’ರ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ವೈದ್ಯರಿಗೆ ಶುಭಾಶಯ ಸಲ್ಲಿಸಿದ ಸಿಎಂ ಬಿಎಸ್​ವೈ

ವೈದ್ಯರಿಗೆ ಶುಭಾಶಯ ಸಲ್ಲಿಸಿದ ಸಿಎಂ ಬಿಎಸ್​ವೈ

ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ಆಂತರಿಕ ಸೈನಿಕರಂತೆ ಕೆಲಸ ಮಾಡುವ ವೈದ್ಯ ವೃಂದಕ್ಕೆ ಸಮಾಜ ಯಾವಾಗಲೂ ಋಣಿಯಾಗಿರುತ್ತಿದ್ದೆ. ಸಾಂಕ್ರಾಮಿಕ ರೋಗಗಳ ಸವಾಲಿನ ಸನ್ನಿವೇಶಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ ತ್ಯಾಗ ದೊಡ್ಡದು. ವೈದ್ಯಕೀಯ ಕ್ಷೇತ್ರಕ್ಕೆ ಭಾರತರತ್ನ ಡಾ. ಬಿ.ಸಿ.ರಾಯ್ ಅವರು ನೀಡಿದ ಕೊಡುಗೆಯ ಸ್ಮರಣಾರ್ಥವಾಗಿ ಅವರ ಜನ್ಮದಿನದಂದು ಆಚರಿಸಲಾಗುವ ‘ರಾಷ್ಟ್ರೀಯ ವೈದ್ಯರ ದಿನ’ದ ಸಂದರ್ಭದಲ್ಲಿ ವೈದ್ಯರು ಸಮೂಹಕ್ಕೆ ಹೃತ್ಪೂರ್ವಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್‌, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…

    Spread the love

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು. ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ…

    Spread the love

    You Missed

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 87 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 49 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 53 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 136 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    • By admin
    • December 10, 2024
    • 75 views
    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ

    • By admin
    • December 10, 2024
    • 86 views
    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ