ಬೆಳ್ತಂಗಡಿ: ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವ ಮೂಲಕ ರಾಜ್ಯಾದ್ಯಂತ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿರುವ ಶೈಕ್ಷಣಿಕ ರಂಗದಲ್ಲಿ ತನ್ನ ಸಾಧನೆಗಳಿಂದ ನೂತನ ಮೈಲಿಗಲ್ಲು ಸ್ಥಾಪಿಸಿದ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿನೂತನ ಅವಕಾಶ ಕಲ್ಪಿಸಿದೆ.
7 ನೆಯ ತರಗತಿಯಲ್ಲಿ 96% ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಂಟನೆಯ ತರಗತಿಯ ಪ್ರವೇಶಾತಿಗೆ ರಿಯಾಯಿತಿ ಶುಲ್ಕ, ಎಂಟನೆಯ ತರಗತಿಯಲ್ಲಿ 96% ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಂಬತ್ತನೆಯ ತರಗತಿಯ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ತಿಳಿಸಿದ್ದಾರೆ.

ಒಂಬತ್ತನೆಯ ತರಗತಿಯಲ್ಲಿ 96% ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಗೆ ಕಡಿಮೆ ಶುಲ್ಕದ ಪ್ರವೇಶಾತಿ ನೀಡಲಾಗುತ್ತದೆ.
ವೇಣೂರು ವಿದ್ಯೋದಯ ಕ್ಯಾಂಪಸ್ ನಲ್ಲಿ ಹಾಗೂ ಗುರುವಾಯನಕೆರೆಯ ಎಕ್ಸೆಲ್ ಟೆಕ್ನ ಸ್ಕೂಲ್ ನಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರಕಲಿದೆ.
ಎಕ್ಸೆಲ್ ಶಾಲೆಗಳಲ್ಲಿ ಆರನೆಯ ತರಗತಿಯ ಹಂತದಿಂದಲೇ ಮೆಡಿಕಲ್ ಹಾಗೂ ಐಐಟಿ ಫೌಂಡೇಶನ್ ಕೋರ್ಸ್ ನಡೆಸಲಾಗುವುದು. ಪ್ರೌಢ ಶಾಲಾ ಹಂತದಲ್ಲಿ ಫೌಂಡೇಶನ್ ಕೋರ್ಸ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು.
ಮಧ್ಯಾಹ್ನದ ಊಟದ ಜೊತೆಗೆ ತಾಲೂಕಿನ ಎಲ್ಲಾ ಭಾಗಗಳಿಂದ ಸ್ಕೂಲ್ ಬಸ್ ವ್ಯವಸ್ಥೆ ಒದಗಿಸಲಾಗುವುದು ಎಂದರು. ಎಕ್ಸೆಲ್ ಶಾಲೆಗಳಲ್ಲಿ ನಿರಂತರವಾಗಿ ವಿಜ್ಞಾನ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. ದೇಶ – ಭಾಷೆಗಳ ಕುರಿತಾಗಿ ಅಭಿಮಾನ ಮೂಡಿಸುವಂತಹ ವಾತಾವರಣವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳು ಕಲ್ಪಿಸಲಿವೆ.
ಹೆಚ್ಚಿ ನ ಮಾಹಿತಿಗೆ 8867242769/ 9880899769 ಸಂಪರ್ಕಿಸಬಹುದು ಎಂದು ಸುಮಂತ್ ಕುಮಾರ್ ಜೈನ್ ತಿಳಿಸಿದ್ದಾರೆ.






