ಎಕ್ಸೆಲ್ ಬೆಳಕು ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದ ಶಿಕ್ಷಣದ ಜೊತೆಗೆ ಮದ್ಯಾಹ್ನದ ಊಟ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು: ಸುಮಂತ್ ಕುಮಾರ್ ಜೈನ್

ಬೆಳ್ತಂಗಡಿ: ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವ ಮೂಲಕ ರಾಜ್ಯಾದ್ಯಂತ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿರುವ ಶೈಕ್ಷಣಿಕ ರಂಗದಲ್ಲಿ ತನ್ನ ಸಾಧನೆಗಳಿಂದ ನೂತನ ಮೈಲಿಗಲ್ಲು ಸ್ಥಾಪಿಸಿದ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿನೂತನ ಅವಕಾಶ ಕಲ್ಪಿಸಿದೆ.

7 ನೆಯ ತರಗತಿಯಲ್ಲಿ 96% ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಂಟನೆಯ ತರಗತಿಯ ಪ್ರವೇಶಾತಿಗೆ ರಿಯಾಯಿತಿ ಶುಲ್ಕ, ಎಂಟನೆಯ ತರಗತಿಯಲ್ಲಿ 96% ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಂಬತ್ತನೆಯ ತರಗತಿಯ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾ‌ರ್ ಜೈನ್ ಅವರು ತಿಳಿಸಿದ್ದಾರೆ.

ಒಂಬತ್ತನೆಯ ತರಗತಿಯಲ್ಲಿ 96% ಹಾಗೂ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಗೆ ಕಡಿಮೆ ಶುಲ್ಕದ ಪ್ರವೇಶಾತಿ ನೀಡಲಾಗುತ್ತದೆ.

ವೇಣೂರು ವಿದ್ಯೋದಯ ಕ್ಯಾಂಪಸ್ ನಲ್ಲಿ ಹಾಗೂ ಗುರುವಾಯನಕೆರೆಯ ಎಕ್ಸೆಲ್ ಟೆಕ್ನ ಸ್ಕೂಲ್ ನಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರಕಲಿದೆ.

ಎಕ್ಸೆಲ್ ಶಾಲೆಗಳಲ್ಲಿ ಆರನೆಯ ತರಗತಿಯ ಹಂತದಿಂದಲೇ ಮೆಡಿಕಲ್ ಹಾಗೂ ಐಐಟಿ ಫೌಂಡೇಶನ್ ಕೋರ್ಸ್‌ ನಡೆಸಲಾಗುವುದು. ಪ್ರೌಢ ಶಾಲಾ ಹಂತದಲ್ಲಿ ಫೌಂಡೇಶನ್ ಕೋರ್ಸ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು.

ಮಧ್ಯಾಹ್ನದ ಊಟದ ಜೊತೆಗೆ ತಾಲೂಕಿನ ಎಲ್ಲಾ ಭಾಗಗಳಿಂದ ಸ್ಕೂಲ್ ಬಸ್ ವ್ಯವಸ್ಥೆ ಒದಗಿಸಲಾಗುವುದು ಎಂದರು. ಎಕ್ಸೆಲ್ ಶಾಲೆಗಳಲ್ಲಿ ನಿರಂತರವಾಗಿ ವಿಜ್ಞಾನ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. ದೇಶ – ಭಾಷೆಗಳ ಕುರಿತಾಗಿ ಅಭಿಮಾನ ಮೂಡಿಸುವಂತಹ ವಾತಾವರಣವನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳು ಕಲ್ಪಿಸಲಿವೆ.

ಹೆಚ್ಚಿ ನ ಮಾಹಿತಿಗೆ 8867242769/ 9880899769 ಸಂಪರ್ಕಿಸಬಹುದು ಎಂದು ಸುಮಂತ್ ಕುಮಾ‌ರ್ ಜೈನ್‌ ತಿಳಿಸಿದ್ದಾರೆ.

Spread the love
  • Related Posts

    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    ಬೆಳ್ತಂಗಡಿ: ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಲಾಯಿತು.ಸಂಘದ ಅಧ್ಯಕ್ಷ ವಿಜಯ ಆರ್. ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಒಂಜರೆಬೈಲು ಅಂಗನವಾಡಿ ಕೇಂದ್ರದ ಪುಷ್ಪಾ, ಕೊಟ್ರೊಟ್ಟು ಅಂಗನವಾಡಿ ಕೇಂದ್ರದ ಪುಷ್ಪಾ,…

    Spread the love

    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    ಬೆಂಗಳೂರು: ನೀಟ್ ಪರೀಕ್ಷೆಯಲ್ಲಿ ನಿರಂತರ ಅತ್ಯುತ್ತಮ ಸಾಧನೆ ದಾಖಲಿಸಿ, ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮುನ್ನಡೆಸಿದ ಖ್ಯಾತಿ ಪಡೆದಿರುವ ಎಕ್ಸೆಲ್ ಪಿಯು ಕಾಲೇಜು, ಗುರುವಾಯನಕೆರೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಗ್ಯಾರಂಟಿ ನ್ಯೂಸ್ ಕನ್ನಡ ವತಿಯಿಂದ…

    Spread the love

    You Missed

    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    • By admin
    • August 15, 2026
    • 6 views
    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    • By admin
    • August 14, 2026
    • 21 views
    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್‌ ದಾಳಿ: ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ

    • By admin
    • August 14, 2026
    • 11 views
    ಬಂಟ್ವಾಳ ಕಾವಳ ಪಡೂರಿನಲ್ಲಿ ಪೊಲೀಸ್‌ ದಾಳಿ: ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸೊತ್ತುಗಳು ವಶಕ್ಕೆ

    ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಆಗಸ್ಟ್ 15-16ರಂದು ಶೈಕ್ಷಣಿಕ ಸಾಧಕರ ಅಭಿನಂದನೆ ಮತ್ತು “ರಕ್ಷಕ ನಮನ-2026” ಕಾರ್ಯಕ್ರಮ

    • By admin
    • August 14, 2026
    • 6 views
    ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಆಗಸ್ಟ್ 15-16ರಂದು ಶೈಕ್ಷಣಿಕ ಸಾಧಕರ ಅಭಿನಂದನೆ ಮತ್ತು “ರಕ್ಷಕ ನಮನ-2026” ಕಾರ್ಯಕ್ರಮ

    ವೈದ್ಯಕೀಯ ವಿದ್ಯಾರ್ಥಿಗಳ ಕನಸು ನನಸಾಗಿಸುವ ‘ಎಕ್ಸೆಲ್ ನೀಟ್ ಅಕಾಡೆಮಿ’ ವೈದ್ಯರಾಗಲು ವಿಶ್ವಾಸದ ಆಯ್ಕೆ – ಎಕ್ಸೆಲ್ ಗುರುವಾಯನಕೆರೆ

    • By admin
    • August 11, 2026
    • 13 views
    ವೈದ್ಯಕೀಯ ವಿದ್ಯಾರ್ಥಿಗಳ ಕನಸು ನನಸಾಗಿಸುವ ‘ಎಕ್ಸೆಲ್ ನೀಟ್ ಅಕಾಡೆಮಿ’ ವೈದ್ಯರಾಗಲು ವಿಶ್ವಾಸದ ಆಯ್ಕೆ – ಎಕ್ಸೆಲ್  ಗುರುವಾಯನಕೆರೆ

    ಪುತ್ತೂರು: ರಸ್ತೆ ಕಾಮಗಾರಿ ನಡುವೆ ಮಣ್ಣಿನಲ್ಲಿ ಹೂತು ಹೋದ ಕೆ.ಎಸ್‌.ಆರ್‌.ಟಿ.ಸಿ ಸ್ಲೀಪರ್ ಕೋಚ್ ಬಸ್; ರಸ್ತೆ ಸುರಕ್ಷತಾ ಕ್ರಮಗಳ ಕೊರತೆಗೆ ಸ್ಥಳೀಯರ ಆಕ್ರೋಶ!

    • By admin
    • August 11, 2026
    • 16 views
    ಪುತ್ತೂರು: ರಸ್ತೆ ಕಾಮಗಾರಿ ನಡುವೆ ಮಣ್ಣಿನಲ್ಲಿ ಹೂತು ಹೋದ ಕೆ.ಎಸ್‌.ಆರ್‌.ಟಿ.ಸಿ ಸ್ಲೀಪರ್ ಕೋಚ್ ಬಸ್; ರಸ್ತೆ ಸುರಕ್ಷತಾ ಕ್ರಮಗಳ ಕೊರತೆಗೆ ಸ್ಥಳೀಯರ ಆಕ್ರೋಶ!