ಬೆಳ್ತಂಗಡಿ: ಇಂದು ಅಪರಾಹ್ನ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಎಂಬಲ್ಲಿ ಅರಣ್ಯ ಪ್ರದೇಶದ ಒಳಗಡೆ ಇರುವ ಜಲಪಾತಕ್ಕೆ ತೆರಳಿದ್ದ ಉಜಿರೆ ಮೂಲದ ನಾಲ್ವರು ಯುವಕರು ಜಲಪಾತದಲ್ಲಿ ಇರುವ ಸಮಯ ಜಲಪಾತದ ಅಂಚಿನ ಗುಡ್ಡ ದಿಢೀರನೆ ಕುಸಿತ ಉಂಟಾಗಿ ಮೂವರು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ವರದಿಯಾಗಿದೆ.
ಮೂವರಲ್ಲಿ ಒಬ್ಬರು ಮಣ್ಣಿನಡಿಯಲ್ಲಿ ಸಿಲುಕಿ ಕಾಣೆಯಾಗಿದ್ದು ಇನ್ನಿಬ್ಬರು ಅಪಾಯದಿಂದ ಪಾರಾಗಿರುತ್ತಾರೆ. ಮೃತಪಟ್ಟ ವ್ಯಕ್ತಿ ಉಜಿರೆ ಮೂಲದ ಕಾಶಿಬೆಟ್ಟು ನಿವಾಸಿ ಎಂದು ಗುರುತಿಸಲಾಗಿದ್ದು ಮೃತದೇಹವನ್ನು ಮಣ್ಣಿನ ಅಡಿಯಿಂದ ಇನ್ನು ತೆಗೆಯಬೇಕಾಗಿರುತ್ತದೆ.
ಇದೀಗ ಘಟನೆಯ ಬಗ್ಗೆ ವಿಚಾರ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಹಾಗೂ ಸ್ಥಳೀಯರು ತೆರಳಿದ್ದಾರೆ.