ನವದೆಹಲಿ: ಜನವರಿ 1ರಿಂದ 4 ಚಕ್ರದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದಿಂದ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು ಮೋಟಾರು ವಾಹನ ನಿಯಮಗಳಿಗೆ ಶೀಘ್ರದಲ್ಲೇ ತಿದ್ದುಪಡಿ ಮಾಡಲಾಗುವುದು. 2017 ರ ನಂತರದಲ್ಲಿ ತಯಾರಾಗಿರುವ ಹೊಸ ವಾಹನಗಳಿಗೆ ಫಾಸ್ಟ್ರ್ಯಾಗ್ ಕಡ್ಡಾಯ ಮಾಡಲಾಗಿತ್ತು. ಈಗ 2017ಕ್ಕೆ ಮೊದಲು ತಯಾರಾದ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ರ್ಯಾಗ್ ಕಡ್ಡಾಯ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಟೋಲ್ ಗಳಲ್ಲಿ ವಾಹನದಟ್ಟಣೆ ತಡೆಯಲು, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲು ಫಾಸ್ಟ್ರ್ಯಾಗ್ ಕಡ್ಡಾಯಗೊಳಿಸಲಾಗಿದೆ. ಜನವರಿ 1 ರಿಂದ 4 ಚಕ್ರದ ಎಲ್ಲಾ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.