TRENDING
Next
Prev

ಮೂಢನಂಬಿಕೆಯನ್ನು ಬದಿಗೊತ್ತಿ ರುಧ್ರಭೂಮಿಯನ್ನು ಸ್ವಚ್ಛಗೊಳಿಸಿದ ಧರ್ಮಸ್ಥಳದ ತರುಣರು

ಧರ್ಮಸ್ಥಳ: ದಕ್ಷಿಣ ಕನ್ನಡ ವಿದ್ಯಾವಂತ, ಬುದ್ದಿವಂತ ಜನರಿರುವ ಜಿಲ್ಲೆಯಾದರೂ ಮೂಢನಂಬಿಕೆಗೆ ಕುಖ್ಯಾತವಾಗಿದೆ. ಇಲ್ಲಿನ ಜನರು ಸ್ಮಶಾನದ ವಿಚಾರ ಎತ್ತಿದರೆ ಬಹುದೂರ ಓಡುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಯುವಕರ ಗುಂಪೊಂದು ಸ್ಮಶಾನದಲ್ಲಿ ಶ್ರಮದಾನದೊಂದಿಗೆ ಉಪಹಾರ ಸೇವಿಸುವ ಮೂಲಕ ಮೂಢನಂಬಿಕೆಗೆ ಸಡ್ಡು ಹೊಡೆದು ಉಳಿದವರಿಗೆ ಮಾದರಿಯಾಗುವ ಘಟನೆ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿ ನಡೆದಿದೆ.

ಹೌದು ವಿಜ್ಞಾನ ಎಷ್ಟೇ ಮುಂದುವರಿದರೂ ಕೂಡ ಸ್ಮಶಾನ ಎಂದಾಕ್ಷಣ ಜನರು ಎದ್ದುಬಿದ್ದು ಓಡುತ್ತಾರೆ. ಅದರಲ್ಲೂ ದ.ಕ ಜಿಲ್ಲೆಯ ಜನರು ಎಷ್ಟೇ ವಿದ್ಯಾವಂತ , ಬುದ್ದಿವಂತರಾದರೂ ಮೂಢನಂಬಿಕೆಗೆ ಬಲಿಯಾಗಿರುವುದು ಇತಿಹಾಸದ ದುರಂತ. ಆದರೆ ಇತಿಹಾಸ ಪ್ರಸಿದ್ಧ ಧರ್ಮಸ್ಥಳದ ಯುವಕರು ಧರ್ಮಸ್ಥಳ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸ್ಮಶಾನ ಅಭಿವೃದ್ಧಿ ಸಮಿತಿ ಹಾಗೂ ಊರವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿರುವ ಸ್ಮಶಾನದಲ್ಲಿ ಶ್ರಮದಾನ ನಡೆಯಿತು.

READ ALSO

ಊರಿನ ಪ್ರಮುಖ ಸ್ಮಶಾನವು ಗಿಡಗಂಟಿ , ಪೊದೆಗಳಿಂದ ಆವೃತ್ತವಾಗಿತ್ತು. ಇಲ್ಲಿಗೆ ಬರುವವರಿಗೆ ಭಯವನ್ನು ಹುಟ್ಟಿಸುವಂತೆ ಪೊದೆಗಳಿತ್ತು. ಇದನ್ನರಿತ ಸ್ಥಳೀಯ ಗ್ರಾಮ ಪಂಚಾಯತ್ , ಸ್ಮಶಾನ ಅಭಿವೃದ್ಧಿ ಸಮಿತಿ ಹಾಗೂ ಊರವರು ಗಿಡಗಂಟಿ ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಜೊತೆಗೆ ಸ್ಮಶಾನದಲ್ಲೇ ಉಪಹಾರ ಸೇವಿಸುವ ಮೂಲಕ ಜನ ಮಾನಸದಲ್ಲಿದ್ದ ಮೂಢನಂಬಿಕೆಗೆ ಸಡ್ಡು ಹೊಡೆದು ಧರ್ಮಸ್ಥಳ ಪರಿಸರದಲ್ಲಿ ಹೊಸ ಇತಿಹಾಸ ನಿರ್ಮಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿ ಡಾ| ಜಯಕೀರ್ತಿ ಜೈನ್,ಪಂ ಅಭಿವೃದ್ಧಿ ಅಧಿಕಾರಿ ಉಮೇಶ್,ತಾಲೂಕು ಪಂ,ಸದಸ್ಯೆ ಧನಲಕ್ಷ್ಮಿ ಜನಾರ್ಧನ,ಬೆಳ್ತಂಗಡಿ ಬಿಜೆಪಿ ಮಂಡಲ ಪ್ರದಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ಪಂ ಮಾಜಿ ಸದಸ್ಯ ಸುಧಾಕರ ಗೌಡ,ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಪ್ರೀತಮ್, ಸಮಾಜ ಸೇವಕ ಪ್ರಭಾಕರ ರಾವ್ ಕನ್ಯಾಡಿ, ರಾಜೇಂದ್ರ ದಾಸ್, ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದು ಸಾಕ್ಷಿಯಾಗಿದ್ದರು.