ಕೊರೋನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು?

೧. ಆಪತ್ಕಾಲೀನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಿರುವ ಪರ್ಯಾಯವೆಂದರೆ ‘ಆಪದ್ಧಧರ್ಮ! : ‘ಸದ್ಯ ಜಗತ್ತಿನಾದ್ಯಂತ ಕೊರೊನಾ ಮಹಾಮಾರಿಯಿಂದಾಗಿ ಎಲ್ಲೆಡೆ ಜನರ ಸಂಚಾರಕ್ಕೆ (ಲಾಕ್‌ಡೌನ್) ಅನೇಕ ನಿರ್ಬಂಧಗಳಿವೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರಸಾರಿಗೆಗೆ ನಿಷೇಧವಿದೆ. ಕೆಲವು ಸ್ಥಳಗಳಲ್ಲಿ ಕೊರೊನಾದ ಸೋಂಕು ಕಡಿಮೆಯಿದ್ದರೂ, ಅಲ್ಲಿನ ಜನರು ಮನೆಯಿಂದ ಹೊರಗೆ ಬರಲು ಅನೇಕ ನಿಷೇಧಗಳಿವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ ಮತ್ತು ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿಷೇಧಗಳು ಬಂದಿವೆ. ಕೊರೊನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಇದನ್ನೇ ‘ಆಪದ್ಧರ್ಮ ಎಂದು ಹೇಳುತ್ತಾರೆ. ‘ಆಪದ್ಧರ್ಮ ಅಂದರೆ ‘ಆಪದ್ಧರ್ಮ ಕರ್ತವ್ಯೋ ಧರ್ಮಃ| ಅಂದರೆ ‘ ಆಪತ್ಕಾಲದಲ್ಲಿ ಧರ್ಮಶಾಸ್ತ್ರದಲ್ಲಿ ಮಾನ್ಯತೆಯಿರುವ ಕೃತಿಗಳು. ಇಂತಹ ಕಾಲದಲ್ಲಿಯೇ ಶ್ರೀ ಗಣೇಶಚತುರ್ಥಿಯ ವ್ರತ ಮತ್ತು ಗಣೇಶೋತ್ಸವ ಬರುತ್ತಿರುವುದರಿಂದ ಸಂಪತ್ಕಾಲದಲ್ಲಿ ಹೇಳಿದಂತೆ, ಈ ಬಾರಿ ಉತ್ಸವದ ಸ್ವರೂಪದಲ್ಲಿ ಅಂದರೆ ಸಾಮೂಹಿಕ ಸ್ವರೂಪದಲ್ಲಿ ಈ ಉತ್ಸವವನ್ನು ಆಚರಿಸಲು ಮಿತಿಯಿದೆ. ಈ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ‘ಸದ್ಯದ ದೃಷ್ಟಿಯಿಂದ ಧರ್ಮಾಚರಣೆ ಎಂದು ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?, ಎಂಬ ವಿಚಾರವನ್ನು ಮಾಡಲಾಗಿದೆ. ಇಲ್ಲಿ ಮಹತ್ವದ ವಿಷಯವೆಂದರೆ, ‘ಹಿಂದೂ ಧರ್ಮವು ಯಾವ ಮಟ್ಟದವರೆಗೆ ಹೋಗಿ ಮಾನವನ ವಿಚಾರವನ್ನು ಮಾಡಿದೆ?, ಎಂಬುದನ್ನು ನಾವು ಕಲಿಯಬಹುದು. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆ ಗಮನಕ್ಕೆ ಬರುತ್ತದೆ.

೨. ಗಣೇಶ ಚತುರ್ಥಿಯ ವ್ರತವನ್ನು ಹೇಗೆ ಆಚರಿಸಬೇಕು ? : ಗಣೇಶೋತ್ಸವವು ಹಿಂದೂಗಳ ಒಂದು ದೊಡ್ಡ ಹಬ್ಬವಾಗಿದೆ. ಶ್ರೀ ಗಣೇಶಚತುರ್ಥಿಗೆ, ಹಾಗೆಯೇ ಶ್ರೀ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ೧ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸದ್ಯ ಕೊರೊನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.

ಪ್ರತಿ ವರ್ಷ ಅನೇಕರ ಮನೆಗಳಲ್ಲಿ ಜೇಡಿಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್ ಇತ್ಯಾದಿಗಳಿಂದ ತಯಾರಿಸಿದ ಮೂರ್ತಿಯನ್ನು ಪೂಜಿಸಲಾಗುತ್ತದೆ. ಈ ವರ್ಷ ಯಾವ ಪ್ರದೇಶದಲ್ಲಿ ಕೊರೋನಾ ವೈರಾಣುವಿನ ಸೋಂಕು ಅಲ್ಪ ಪ್ರಮಾಣದಲ್ಲಿದೆಯೋ, ಅಂದರೆ ಯಾವ ಭಾಗದಲ್ಲಿ ಸಂಚಾರಸಾರಿಗೆ ನಿಷೇಧವಿಲ್ಲವೋ, ಅಂತಹ ಸ್ಥಳಗಳಲ್ಲಿ ಎಂದಿನಂತೆ ಗಣೇಶಮೂರ್ತಿಯನ್ನು ತಂದು ಅದನ್ನು ಪೂಜಿಸಬೇಕು.

(‘ಧರ್ಮಶಾಸ್ತ್ರಾನುಸಾರ ಜೇಡಿ ಮಣ್ಣಿನ ಗಣೇಶಮೂರ್ತಿ ಏಕಿರಬೇಕು ?, ಈ ವಿಷಯದ ವಿವರಣೆಯನ್ನು ಲೇಖನದ ಕೊನೆಯ ಭಾಗದಲ್ಲಿ ನೀಡಲಾಗಿದೆ)

ಯಾರಿಗೆ ಏನಾದರೂ ಕಾರಣದಿಂದ ಮನೆಯಿಂದ ಹೊರಗೆ ಬರುವುದು ಸಾಧ್ಯವಿಲ್ಲವೋ, ಉದಾ. ಕೊರೋನಾದ ಸಾಂಕ್ರಾಮಿಕತೆಯಿಂದ ಅಕ್ಕಪಕ್ಕದ ಪರಿಸರ ಅಥವಾ ಕಟ್ಟಡವನ್ನು ‘ನಿಷೇಧಿತ ವಲಯ ಎಂದು ಘೋಷಿಸಿದ್ದರೆ, ಅಲ್ಲಿಯ ಜನರು ತಮಗೆ ಗಣೇಶತತ್ತ್ವದ ಲಾಭವಾಗಬೇಕೆಂದು ತಮ್ಮ ಮನೆಯಲ್ಲಿನ ಗಣೇಶನ ಮೂರ್ತಿ ಅಥವಾ ಗಣೇಶನ ಚಿತ್ರದ ಷೋಡಷೋಪಚಾರ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಮಾಡುವಾಗ ‘ಪೂಜೆಯ ‘ಪ್ರಾಣಪ್ರತಿಷ್ಠಾಪನೆ ಈ ವಿಧಿಯನ್ನು ಮಾತ್ರ ಮಾಡಬಾರದು, ಇದನ್ನು ಗಮನದಲ್ಲಿಡಬೇಕು.

೩. ಜ್ಯೇಷ್ಠ ಗೌರಿ ವ್ರತವನ್ನು ಯಾವ ರೀತಿ ಮಾಡಬೇಕು ? : ಕೆಲವು ಮನೆಗಳಲ್ಲಿ ಭಾದ್ರಪದ ಶುಕ್ಲ ಪಕ್ಷ ಅಷ್ಟಮಿಯಂದು ಜ್ಯೇಷ್ಠ ಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಕೆಲವು ಮನೆಗಳಲ್ಲಿ ಕಲ್ಲುಗಳ ರೂಪದಲ್ಲಿ ಮತ್ತು ಇನ್ನು ಕೆಲವು ಮನೆಗಳಲ್ಲಿ ಮುಖವಾಡಗಳನ್ನು ಮಾಡಿ ಅವುಗಳನ್ನು ಪೂಜಿಸಲಾಗುತ್ತದೆ. ಕೊರೊನಾದ ಸಂಕಟದಿಂದ ಯಾರಿಗೆ ಪ್ರತಿವರ್ಷದಂತೆ ಕಲ್ಲುಗಳ ಸ್ವರೂಪದಲ್ಲಿ ಅಥವಾ ಮುಖವಾಡಗಳ ಸ್ವರೂಪದಲ್ಲಿ ಗೌರಿಯ ಪೂಜೆಯನ್ನು ಮಾಡಲು ಸಾಧ್ಯವಿಲ್ಲವೋ, ಅವರು ತಮ್ಮ ಮನೆಯಲ್ಲಿನ ಯಾವುದಾದರೂಂದು ದೇವಿಯ ಮೂರ್ತಿಯ ಅಥವಾ ದೇವಿಯ ಚಿತ್ರದ ಪೂಜೆಯನ್ನು ಮಾಡಬೇಕು.

ವಿಶೇಷ ಸೂಚನೆ : ಗಣೇಶಮೂರ್ತಿಯನ್ನು ತರುವಾಗ, ಹಾಗೆಯೇ ಮೂರ್ತಿಯ ವಿಸರ್ಜನೆಯನ್ನು ಮಾಡುವಾಗ ಮನೆಯ ಕೆಲವೇ ವ್ಯಕ್ತಿಗಳು ಹೋಗಬೇಕು. ಮೂರ್ತಿಯ ವಿಸರ್ಜನೆ ಮಾಡುವಾಗ ತಮ್ಮ ಮನೆಯ ಹತ್ತಿರದ ಕೆರೆ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡಬೇಕು. ಈ ಸಮಯದಲ್ಲಿ ಜನಜಂಗುಳಿಯಾಗುವ ಅಪಾಯ ಹೆಚ್ಚಿರುವುದರಿಂದ ಕೊರೋನಾ ಸಂದರ್ಭದಲ್ಲಿ ಸರಕಾರವು ಹೇಳಿರುವ ಮಾರ್ಗದರ್ಶಕ ಅಂಶಗಳನ್ನು ಚಾಚುತಪ್ಪದೇ ಪಾಲಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವೇ ಆಗಿದೆ. – ಶ್ರೀ. ದಾಮೋದರ ವಝೆ, ಸಂಚಾಲಕರು, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೭.೨೦೨೦)

೪. ‘ಗಣೇಶಮೂರ್ತಿಯು ಏಕೆ ಜೇಡಿಮಣ್ಣಿನದ್ದಾಗಿರಬೇಕು?, ಈ ವಿಷಯದಲ್ಲಿನ ಧರ್ಮಶಾಸ್ತ್ರದ ಸಂದರ್ಭ ! : ‘ಧರ್ಮಶಾಸ್ತ್ರಾನುಸಾರ ಜೇಡಿಮಣ್ಣಿನ ಮೂರ್ತಿಯನ್ನು ಪೂಜಿಸಿದರೆ, ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಅತ್ಯಧಿಕ ಲಾಭವಾಗುತ್ತದೆ, ಎಂದು ಹಿಂದೂಗಳ ಧರ್ಮಶಾಸ್ತ್ರೀಯ ಗ್ರಂಥಗಳಲ್ಲಿ ಹೇಳಲಾಗಿದೆ.
‘ಧರ್ಮಸಿಂಧುವಿನಲ್ಲಿ ‘ಗಣೇಶಚತುರ್ಥಿಗೆ ಗಣಪತಿಯ ಮೂರ್ತಿ ಹೇಗಿರಬೇಕು?, ಎಂಬ ವಿಷಯದಲ್ಲಿ ಮುಂದಿನ ನಿಯಮಗಳನ್ನು ನೀಡಲಾಗಿದೆ.

ತತ್ರ ಮೃನ್ಮಯಾದಿಮೂರ್ತೌ ಪ್ರಾಣಪ್ರತಿಷ್ಠಾಪೂರ್ವಕಂ ವಿನಾಯಕಂ ಷೋಡಷೋಪಚಾರೈಃ ಸಂಪೂಜ್ಯ! – ಧರ್ಮಸಿಂಧು, ಪರಿಚ್ಛೇದ ೨

ಅರ್ಥ: ಈ ದಿನ (ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ) ಶ್ರೀ ಗಣೇಶನ ಮಣ್ಣು ಇತ್ಯಾದಿಗಳಿಂದ ತಯಾರಿಸಿದ ಮೂರ್ತಿಯ ಪ್ರಾಣಪ್ರತಿಷ್ಠೆಯೊಂದಿಗೆ ಸ್ಥಾಪನೆಯನ್ನು ಮಾಡಿ ಷೋಡಷೋಪಚಾರ ಪೂಜೆಯನ್ನು ಮಾಡಿ….

ಇನ್ನೊಂದು ಸಂದರ್ಭಕ್ಕನುಸಾರ ‘ಸ್ಮೃತಿಕೌಸ್ತುಭ ಹೆಸರಿನ ಧರ್ಮಗ್ರಂಥದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ಸಿದ್ಧಿವಿನಾಯಕನ ವ್ರತವನ್ನು ಮಾಡುವುದರ ಬಗೆಗಿನ ಉಲ್ಲೇಖವಿದೆ. ಇದರಲ್ಲಿ ‘ಮೂರ್ತಿ ಹೇಗಿರಬೇಕು ?, ಎಂಬುದರ ಸವಿಸ್ತಾರ ವರ್ಣನೆ ಬಂದಿದೆ.
ಸ್ವಶಕ್ತ್ಯಾ ಗಣನಾಥಸ್ಯ ಸ್ವರ್ಣರೌಪ್ಯಮಯಾಕೃತಿಮ್||
ಅಥವಾ ಮೃನ್ಮಯಿ ಕಾರ್ಯಾ ವಿತ್ತಶಾಠ್ಯಂ ನ ಕಾರಯೇತ್|| -ಸ್ಮೃತಿಕೌಸ್ತುಭ

ಅರ್ಥ: ಈ (ಸಿದ್ಧಿವಿನಾಯಕನ) ಪೂಜೆಗಾಗಿ ತಮ್ಮ ಕ್ಷಮತೆಗನುಸಾರ ಬಂಗಾರ, ಬೆಳ್ಳಿ ಅಥವಾ ಮಣ್ಣಿನ ಮೂರ್ತಿಯನ್ನು ತಯಾರಿಸಬೇಕು. ಇದರಲ್ಲಿ ಜಿಪುಣತನ ಮಾಡಬಾರದು.

‘ಇದರಲ್ಲಿ ಬಂಗಾರ, ಬೆಳ್ಳಿ ಅಥವಾ ಮಣ್ಣಿನಿಂದಲೇ ಮೂರ್ತಿಯನ್ನು ತಯಾರಿಸಬೇಕು, ಎನ್ನುವ ಸ್ಪಷ್ಟ ಉಲ್ಲೇಖವಿರುವುದರಿಂದ, ಇದನ್ನು ಹೊರತುಪಡಿಸಿ ಇತರ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಶಾಸ್ತ್ರಾನುಸಾರ ಅಯೋಗ್ಯವಾಗಿದೆ.

ಟಿಪ್ಪಣಿ : ‘ಶ್ರೀ ಗಣೇಶನ ಪೂಜೆಯನ್ನು ಹೇಗೆ ಮಾಡಬೇಕು? ಯಾವ ಸಾಮಗ್ರಿಗಳು ಇರಬೇಕು?, ಈ ಸಂದರ್ಭದಲ್ಲಿ ಯಾರಿಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ, ಅವರು ಸನಾತನದ ‘ಗಣೇಶ ಪೂಜೆ ಮತ್ತು ಆರತಿ, ಈ ಆಪ್ ಡೌನಲೋಡ್ ಮಾಡಬೇಕು ಅಥವಾ ‘ಸನಾತನ ಸಂಸ್ಥೆಯ www.Sanatan.org ಈ ಜಾಲತಾಣಕ್ಕೆ ಭೇಟಿ ನೀಡಬೇಕು.

‘ಗಣೇಶ ಪೂಜೆ ಮತ್ತು ಆರತಿ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಜಾಲತಾಣಗಳು:

  1. Android App : sanatan.org/ganeshapp
  2. Apple iOS App : sanatan.org/iosganeshapp
Spread the love
  • Related Posts

    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    ಬೆಳ್ತಂಗಡಿ: ತಾಲೂಕಿನ ರೇಷ್ಮೆರೋಡ್ ಬಳಿ ಚಲಿಸುತ್ತಿದ್ದ ಕೆ.ಎಸ್‌.ಆರ್.ಟಿ.ಸಿ ಬಸ್ಸಿನಿಂದ ಅಕಸ್ಮಿಕವಾಗಿ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿನಿಯರ ಆರೋಗ್ಯವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ ಕುಟುಂಬ ಸದಸ್ಯರಿಗೆ ಹಾಗೂ ಗಾಯಳು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. Spread the love

    Spread the love

    ವಿದ್ಯುತ್ ಶಾಕ್ ಮೂಲಕ ಕಾರ್ಮಿಕ ಆತ್ಮಹತ್ಯೆ – ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

    ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಗ್ರಾಮದ ಪಾರ್ದೊಟ್ಟು ಪ್ರದೇಶದಲ್ಲಿ ದಾರುಣ ಘಟನೆೊಂದು ನಡೆದಿದ್ದು, ಕೇರಳ ಮೂಲದ ಕಾರ್ಮಿಕನೋರ್ವ ವಿದ್ಯುತ್ ಶಾಕ್ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಜೋಸೆಫ್ ತೋಮಸ್ (69) ಎಂದು ಗುರುತಿಸಲಾಗಿದೆ. ಈತ ಕೇರಳದಿಂದ ಬಂದು ಹೊಸಂಗಡಿಯಲ್ಲಿ ಶಾಜು.ಪಿ.ಟಿ ಎಂಬವರ…

    Spread the love

    You Missed

    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    • By admin
    • March 31, 2026
    • 137 views
    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    ವಿದ್ಯುತ್ ಶಾಕ್ ಮೂಲಕ ಕಾರ್ಮಿಕ ಆತ್ಮಹತ್ಯೆ – ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

    • By admin
    • March 31, 2026
    • 29 views
    ವಿದ್ಯುತ್ ಶಾಕ್ ಮೂಲಕ ಕಾರ್ಮಿಕ ಆತ್ಮಹತ್ಯೆ – ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

    ಹಾಸನದ ‘ರುಚಿ ಲೋಕ’: ನೂರಾರು ಕುಟುಂಬಗಳ ಬದುಕಿಗೆ ಬೆಳಕಾದ 76 ಮಳಿಗೆಗಳ ಫುಡ್ ಕೋರ್ಟ್

    • By admin
    • March 31, 2026
    • 43 views
    ಹಾಸನದ ‘ರುಚಿ ಲೋಕ’: ನೂರಾರು ಕುಟುಂಬಗಳ ಬದುಕಿಗೆ ಬೆಳಕಾದ 76 ಮಳಿಗೆಗಳ ಫುಡ್ ಕೋರ್ಟ್

    ಸರಕಾರಿ ಬಸ್ ನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

    • By admin
    • March 31, 2026
    • 259 views
    ಸರಕಾರಿ ಬಸ್ ನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

    ಅಂಕುಡೊಂಕು ರಸ್ತೆಗಳಲ್ಲಿ ಕಾಮಗಾರಿ ಮುನ್ನವೇ 100 ವೇಗ ಮಿತಿ ಫಲಕ: ಚಾರ್ಮಾಡಿ ರಸ್ತೆಯಲ್ಲಿ ಸಾರ್ವಜನಿಕರ ಆತಂಕ

    • By admin
    • March 31, 2026
    • 158 views
    ಅಂಕುಡೊಂಕು ರಸ್ತೆಗಳಲ್ಲಿ ಕಾಮಗಾರಿ ಮುನ್ನವೇ 100 ವೇಗ ಮಿತಿ ಫಲಕ: ಚಾರ್ಮಾಡಿ ರಸ್ತೆಯಲ್ಲಿ ಸಾರ್ವಜನಿಕರ ಆತಂಕ

    ಸಕಲೇಶಪುರ ಕುಂಬ್ರಹಳ್ಳಿ ಲೋಲಾಕ್ಷಮ್ಮರಿಗೆ ವಾತ್ಸಲ್ಯ ಯೋಜನೆಡಿಯಲ್ಲಿ ವಾತ್ಸಲ್ಯ ಸೂರು ನಿರ್ಮಾಣ

    • By admin
    • March 30, 2026
    • 115 views
    ಸಕಲೇಶಪುರ ಕುಂಬ್ರಹಳ್ಳಿ ಲೋಲಾಕ್ಷಮ್ಮರಿಗೆ ವಾತ್ಸಲ್ಯ ಯೋಜನೆಡಿಯಲ್ಲಿ ವಾತ್ಸಲ್ಯ ಸೂರು ನಿರ್ಮಾಣ