ಅಂಕುಡೊಂಕು ರಸ್ತೆಗಳಲ್ಲಿ ಕಾಮಗಾರಿ ಮುನ್ನವೇ 100 ವೇಗ ಮಿತಿ ಫಲಕ: ಚಾರ್ಮಾಡಿ ರಸ್ತೆಯಲ್ಲಿ ಸಾರ್ವಜನಿಕರ ಆತಂಕ

ಬೆಳ್ತಂಗಡಿ ತಾಲ್ಲೂಕಿನ ಪುಂಜಾಲಕಟ್ಟೆ–ಚಾರ್ಮಾಡಿ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿದ್ದರೂ, ಈಗಾಗಲೇ ವಿವಿಧ ಸ್ಥಳಗಳಲ್ಲಿ ವೇಗ ಮಿತಿ ಸೂಚಿಸುವ ಫಲಕಗಳನ್ನು ಅಳವಡಿಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ವಿಶೇಷವಾಗಿ ಚಾರ್ಮಾಡಿ–ಉಜಿರೆ ಮಾರ್ಗದ ಕೆಲವು ಅಂಕುಡೊಂಕಾದ ಹಾಗೂ ಅಪಾಯಕಾರಿ ತಿರುವುಗಳಿರುವ ಪ್ರದೇಶಗಳಲ್ಲಿ ಕೂಡ 100 ಕಿಮೀ ವೇಗ ಮಿತಿ ಸೂಚಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ರಸ್ತೆ ಇನ್ನೂ ಕಾಮಗಾರಿ ಹಂತದಲ್ಲಿರುವುದರಿಂದ, ಇಂತಹ ಹೆಚ್ಚು ವೇಗ ಮಿತಿ ಫಲಕಗಳು ವಾಹನ ಸವಾರರಿಗೆ ತಪ್ಪು ಸಂದೇಶ ನೀಡುವ ಸಾಧ್ಯತೆ ಇದೆ. ಫಲಕಗಳನ್ನು ನೋಡಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಅಪಘಾತಗಳ ಸಂಭವ ಹೆಚ್ಚಾಗುವ ಭೀತಿ ವ್ಯಕ್ತವಾಗುತ್ತಿದೆ. ಸ್ಥಳೀಯರು ಮತ್ತು ನಿತ್ಯ ಪ್ರಯಾಣಿಕರ ಪ್ರಕಾರ, ಇಂತಹ ತಿರುವುಗಳಿರುವ ಪ್ರದೇಶಗಳಲ್ಲಿ ಗರಿಷ್ಠ ವೇಗ ಮಿತಿಯನ್ನು 60 ಕಿಮೀಗೆ ಸೀಮಿತಗೊಳಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೂ ರಸ್ತೆ ಕಾಮಗಾರಿ ಪೂರ್ಣಗೊಳ್ಳದಿರುವ ಸಂದರ್ಭದಲ್ಲಿ ವೇಗ ಮಿತಿ ಫಲಕಗಳನ್ನು ಅಳವಡಿಸುವುದಕ್ಕಿಂತ, ಕಾಮಗಾರಿ ಪೂರ್ಣಗೊಂಡ ನಂತರವೇ ನಿಯಮಾನುಸಾರ ಫಲಕಗಳನ್ನು ಅಳವಡಿಸುವುದು ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು PWD ಇಲಾಖೆ ಹಾಗೂ ಸಂಬಂಧಿತ ಟೆಂಡರ್ ದಾರರು ತಕ್ಷಣ ಗಮನಹರಿಸಿ, ತಪ್ಪಾಗಿ ಅಳವಡಿಸಿರುವ ವೇಗ ಮಿತಿ ಫಲಕಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ರಂಜನ್ ರಾವ್ ಯರ್ಡೂರು ಸುಪ್ರಿಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಾಲಯ ದೂರುದಾರರು ನೀಡಿದ ಈ ದೂರು ಆಧಾರ ರಹಿತವಾಗಿದೆ ಎಂದು, ದಾವೆಯನ್ನು ಪ್ರಾಥಮಿಕ ಹಂತದಲ್ಲೇ ವಜಾಗೊಳಿಸಿದೆ. ಶ್ರೀ ಕ್ಷೇತ್ರ…

    Spread the love

    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    ಕಡಿರುದ್ಯಾವರ: ಚಿರಂಜೀವಿ ಯುವಕ ಮಂಡಲ (ರಿ) ಕಾನರ್ಪ, ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ ಮತ್ತು 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಇದರ ವತಿಯಿಂದ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಗ್ರಾಮೀಣ ಕ್ರೀಡಾಕೂಟಗಳು…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    • By admin
    • September 8, 2026
    • 4 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದ ಆರೋಪ ಆಧಾರರಹಿತ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ

    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    • By admin
    • September 8, 2026
    • 12 views
    ಧರ್ಮ–ಸಂಸ್ಕೃತಿಯ ಸಾರ ಹೊತ್ತು ವಿಜೃಂಭಿಸಿದ ಚಿರಂಜೀವಿಯ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    • By admin
    • September 3, 2026
    • 12 views
    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    • By admin
    • September 3, 2026
    • 7 views
    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    • By admin
    • September 3, 2026
    • 10 views
    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    • By admin
    • September 3, 2026
    • 16 views
    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ