ಮಂಗಳೂರು: ಜಿಪಿಎಲ್ ಉತ್ಸವದಲ್ಲಿ ಹೆಲಿಕಾಪ್ಟರ್ ರೈಡ್

ಮಂಗಳೂರು: ನೇತ್ರಾವತಿ ನದಿ ತೀರದ ಸಹ್ಯಾದ್ರಿ ಕ್ರೀಡಾಂಗಣ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಶನ್ ಆಯೋಜಿಸುವ ಫುಜ್ಞಾನಾ ಜಿಪಿಎಲ್ ಉತ್ಸವಕ್ಕೆ-2022ಕ್ಕೆ ಸಿದ್ಧಗೊಂಡಿದ್ದು, ಈ ಬಾರಿಯ ಟೂರ್ನಿಯಲ್ಲಿ ಹೆಲಿ ಟೂರಿಸಂ’ ವಿಶೇಷ ಆಕರ್ಷಣೆಯಾಗಿದೆ.ಫೆ.25ರಿಂದ 27ರವರೆಗೆ ಈ ಟೂರ್ನಿ ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣದ ಸೇರಿ ಕರಾವಳಿ ಕರ್ನಾಟಕವನ್ನು ಒಳಗೊಂಡ 16 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.

ಜಿಪಿಎಲ್ ಉತ್ಸವದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಒಂದು ಭಾಗವಾದರೆ, ಇಡೀ ಉತ್ಸವ ವೈವಿಧ್ಯತೆ ಮೂಲಕ ಗಮನ ಸೆಳೆಯಲಿದೆ.

ಹೆಲಿ ಟೂರಿಸಂ ವೈಶಿಷ್ಟ್ಯತೆ: ಶುಕ್ರವಾರದಿಂದ ಭಾನುವಾರದವರೆಗೆ ಹೆಲಿ ಟೂರಿಸಂ ಅವಕಾಶವನ್ನು ನೀಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ಎಟಿಸಿ (ಏರ್‌ಟ್ರಾಫಿಕ್ ಕಂಟ್ರೋಲ್) ನಿಯಂತ್ರಣದಲ್ಲಿ ಈ ಹೆಲಿಕಾಪ್ಟರ್ ಪ್ರಯಾಣಿಸಲಿದ್ದು, ಒಬ್ಬರಿಗೆ 10ನಿಮಿಷಕ್ಕೆ 4 ಸಾವಿರ ರೂ. ದರ ವಿಧಿಸಲಾಗಿದೆ.ಏಕಕಾಲಕ್ಕೆ ಮಂದಿಗೆ ಸಂಚರಿಸಬಹುದಾಗಿದೆ.ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಿಂದ ಹೊರಟ ಈ ಹೆಲಿಕಾಪ್ಟರ್ ಉಳ್ಳಾಲ ಸೇತುವೆ, ಧಕ್ಕೆ, ಬೆಂಗರೆ, ಮಂಗಳೂರು ನಗರದಾದ್ಯಂತ ಸುತ್ತಾಡಿ ಮತ್ತೆ ಸಹ್ಯಾದ್ರಿ ಕ್ಯಾಂಪಸ್‌ನಲ್ಲೇ ಭೂಸ್ಪರ್ಶ ಆಗಲಿದೆ. ಸಾರ್ವಜನಿಕರ ಸ್ಪಂದನೆಯನ್ನು ಗಮನಿಸಿ ಸೋಮವಾರದವರೆಗೆ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ.


ಫುಜ್ಞಾನಾ ಜಿಪಿಎಲ್ ಟೂರ್ನಿಯ ಮುಖ್ಯಸ್ಥರಾದ ನರೇಶ್ ಶೆಣೈ. 120ಕ್ಕೂ ಅಧಿಕ ಮಂದಿ ಬುಕ್ಕಿಂಗ್: ಹೆಲಿ ಟೂರಿಸಂಗೆ ಈಗಾಗಲೇ 120ಮಂದಿ ಬುಕ್ಕಿಂಗ್ ಮಾಡಿದ್ದು, ಅವರಿಗೆ ಸಮಯ ನಿಗದಿಪಡಿಸುವ ಅವಧಿಯಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆ 6.00ಗಂಟೆಯವರೆಗೆ ಈ ಹೆಲಿಕಾಪ್ಟರ್ ನಗರ ಸಂಚಾರ ನಡೆಸಲಿದೆ.ಬೋಟಿಂಗ್, ಕಿಡ್ನ್: ಹೆಲಿ ಟೂರಿಸಂ ಮಾತ್ರವಲ್ಲದೆ ನೇತ್ರಾವತಿಯಲ್ಲಿ ಬೋಟಿಂಗ್ ವ್ಯವಸ್ಥೆ, ಮಕ್ಕಳಿಗೆ ಆಟವಾಡಲು ಕಿಡ್ರನ್ ನಿರ್ಮಿಸಲಾಗಿದೆ. ಗೂಡುದೀಪ ಸ್ಪರ್ಧೆ, ಕಸದಿಂದ ರಸ, ಆಭರಣಗಳ ತಯಾರಿ, ಮೆಹಂದಿ, ಪ್ಲೇ ಮಾಡೆಲಿಂಗ್, ಹೂ ಅಲಂಕಾರ, ಕೇಶ ವಿನ್ಯಾಸ, ಡ್ರಾಯಿಂಗ್, ಕೊಲಾಜ್, ಜಿಎಸ್‌ಬಿ ಟ್ಯಾಲೆಂಟ್, ಅಡುಗೆ, ಪೋಸ್ಟರ್ ತಯಾರಿಕೆ, ಫ್ಯಾನ್ಸಿ ಡ್ರೆಸ್, ಟಗ್ ಆಫ್ ವಾರ್, ರಂಗೋಲಿ, ಮ್ಯೂಸಿಕ್ ವರ್ಕ್ ಶಾಪ್, ಹೌಸಿ ಹೌಸಿ ಸಹಿತ ಇನ್ನು ಹಲವು ಬಗೆಯ ಸ್ಪರ್ಧೆ ಆಯೋಜಿಸಲಾಗಿದೆ. ಇಂದು ಉದ್ಘಾಟನೆ: ಫೆ.25ರಂದು ಬೆಳಗ್ಗೆ ಕ್ರಿಕೆಟ್ ಪಂದ್ಯಾಟಗಳಿಗೆ ಗಣ್ಯರು ಚಾಲನೆ ನೀಡಲಿದ್ದಾರೆ.ಜಿಪಿಎಲ್ ಉತ್ಸವದಲ್ಲಿ 25 ಸಾವಿರದಷ್ಟು ಜಿಎಸ್‌ಬಿ ಸಮುದಾಯದವರು ಭಾಗವಹಿಸುವ ನಿರೀಕ್ಷೆಯಿದೆ.

ಖಾದ್ಯಗಳನ್ನು ಉಣಬಡಿಸಲು ವಿಶಾಲವಾದ ಫುಡ್ ಕೋರ್ಟ್ ವ್ಯವಸ್ಥೆ ಮಾಡಲಾಗಿದ್ದು, 100ಕ್ಕೂ ಅಧಿಕ ಬಗೆಯ ತಿಂಡಿ-ತಿನಸುಗಳು, ಐಸ್ ಕ್ರೀಂಗಳು, ಹಣ್ಣುಹಂಪಲುಗಳ ಸಹಿತ ಮೊಕ್‌ಟೇಲ್ ರುಚಿ ಸವಿಯಬಹುದಾಗಿದೆ.
ಇನ್ನು ಕಲಾತ್ಮಕ ಮನಸ್ಸಿನ ಮಹಿಳೆಯರಿಗೆ ಮತ್ತು ಚಿಣ್ಣರಿಗಾಗಿ ಮತ್ತು ಪುರುಷರಿಗಾಗಿ ನಾನಾ ಸ್ಪರ್ಧೆಗಳು, ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಗೋವಾ ಮತ್ತು ಕೊಚ್ಚಿ ಸಮುದ್ರ ತೀರಗಳಲ್ಲಿ ಮಾತ್ರ ಕಂಡು ಬರುವ ಫೆಬೋರ್ಡ ಅನ್ನು ಈ ಬಾರಿ ಪರಿಚಯಿಸಲಾಗಿದೆ. ತಜ್ಞರಿಂದ ಸಂವಾದ, ಶಾಪಿಂಗ್ ಮೇಳಾ, ಜಲಕ್ರೀಡೆ, ವೆವಾಹಿಕ (ಜ್ಯೋತಿಷ್ಯ ಸಹಿತ) ಸಂಬಂಧ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕಲೆ, ಸಂಸ್ಕೃತಿ ಪ್ರದರ್ಶನ ಕಾರ್ಯಕ್ರಮಗಳು ಜಿಎಸ್‌ಬಿ ಸಮುದಾಯದಲ್ಲಿ ಗೃಹ ಉತ್ಪನ್ನಗಳನ್ನು ತಯಾರಿಸಿ ಬದುಕು ಕಟ್ಟಿಕೊಂಡಿರುವ ಕಿರುವ್ಯಾಪಾರಿಗಳಿಗಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 278 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 45 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 314 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 53 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 110 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ