ರಾಜ್ಯಾದ್ಯಂತ ಮಾಸಾಶನ ಕಾರ್ಯಕ್ರಮದ ಜೊತೆಗೆ 11ಸಾವಿರಕ್ಕೂ ಮಿಕ್ಕಿ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಿಸುವ ಮೂಲಕ ಮಾದರಿಯಾದ ಗ್ರಾಮಾಭಿವೃದ್ಧಿ ಯೋಜನೆ

ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದ ವೃದ್ಧೆ ಕಸ್ತೂರಮ್ಮರವರಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವತಿಯಿಂದ ವಾತ್ಸಲ್ಯ ಕಿಟ್ ವಿತರಿಸುವ ಮೂಲಕ ತಾಲೂಕಿನಾದ್ಯಂತ ಒಟ್ಟು 22 ನಿರ್ಗತಿಕ ಕುಟುಂಬದ ಫಲಾನುಭವಿಗಳಿಗೆ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಗ್ರಾಮಾಭಿವೃದ್ಧಿ‌ ಯೋಜನೆಯ ರಾಯಚೂರು ಜಿಲ್ಲೆಯ ನಿರ್ದೇಶಕರಾದ ಸಂತೋಷ್ ಕುಮಾರ್ ರವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಾ ಮುಂದೆ ಸಾಗುತ್ತಿರುವ ಸಂಸ್ಥೆಯು ಅನೇಕ ಬಗೆಯ ಸೇವೆಗಳನ್ನು ನೀಡುತ್ತಾ ಬರುತ್ತಿದ್ದು, ಇತ್ತೀಚಿಗೆ ರಾಜ್ಯದಾಧ್ಯಂತ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ 750 ರಿಂದ ಒಂದು ಸಾವಿರ ರೂಪಾಯಿಯವರಿಗೆ ಮಾಸಾಶನ ನೀಡಲಾಗುತ್ತದೆ.

ಮಾಸಾಶನದೊಂದಿಗೆ ಈ ಬಾರಿ ಪಾತ್ರೆ, ತಲೆ ದಿಂಬು, ಹೊದಿಕೆ ಸೇರಿದಂತೆ ಮೂಲಭೂತ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಸಂಸ್ಥೆಯು ಸಮಾಜದಲ್ಲಿ ಸರ್ವರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮವಾಗಿ ಸೇವೆ ಮಾಡುತ್ತಿದೆ ಎಂದರು. ಈ ವಾತ್ಸಲ್ಯ ಕಿಟ್ ಮುಖಾಂತರ ರೋಗಿಗಳು , ನಿರ್ಗತಿಕರು, ಅಸಹಾಯಕರು, ವಿಧವೆಯರು ಹಾಗೂ ಬಡವರ ಕಷ್ಟ ಕಾರ್ಪಣ್ಯಗಳಿಗೆ ಮಾನವೀಯತೆಯಿಂದ ಸ್ಪಂದಿಸಿ ಸಕಾಲಿಕ ನೆರವು, ಮಾರ್ಗದರ್ಶನ ನೀಡಿ ಅವರ ದು:ಖವನ್ನು ನಿವಾರಿಸಿ ಶಾಂತಿ , ನೆಮ್ಮದಿಯ ಜೀವನ ನಡೆಸುವಂತೆ ಅಭಯ ನೀಡುವ ಉದ್ದೇಶದಿಂದ ರಾಯಚೂರು ಜಿಲ್ಲೆಯಾದ್ಯಾಂತ 255 ಕುಟುಂಬಗಳಿಗೆ, ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ವಿಭಾಗದಲ್ಲಿ 1336 ರಾಜ್ಯಾದಾಧ್ಯಂತ 11287 ವಾತ್ಸಲ್ಯ ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ವಾತ್ಸಲ್ಯ ಕಿಟ್ಗಳನು ವಿತರಿಸಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಮುಂದುವರೆದ ಭಾಗವಾಗಿ ವಾತ್ಸಲ್ಯ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದರು.

ಈ ಸಂದರ್ಭ ದೇವದುರ್ಗ ತಾಲೂಕಿನ ಯೋಜನಾಧಿಕಾರಿ ರಾಜೇಶ್.ಎಂ , ಯುವ ಬ್ರಿಗೇಡ್ ಸಂಚಾಲಕ ಚನ್ನು ಚಿಕ್ಕಮಠ , ನಾಗರಾಜ್, ವೀರೇಶ್ , ಗ್ರಾಮ ಪಂಚಾಯತ್ ಸದಸ್ಯ ಮಹಿಬೊಬ್ ಅಲಿ, ಅಮರಗುಂಡಪ್ಪ ಮೇಲ್ವಿಚಾರಕ ರಾಮು, ಸೇವಾಪ್ರತಿನಿಧಿಗಳು ಮುಂತಾದವರು ಉಪಸ್ಧಿತರಿದ್ದರು.

Spread the love
  • Related Posts

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಯುವತಿಯರಿಗೆ ಉಚಿತವಾಗಿ ತರಬೇತಿಯೊಂದಿಗೆ ಉದ್ಯೋಗಾವಕಾಶ ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ 2ವರ್ಷದ ANM ತರಬೇತಿಯನ್ನು…

    Spread the love

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    Bangalore: ರಾಜ್ಯದಲ್ಲಿ ಎಚ್ಎಸ್ಆರ್ಪಿ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ. HSRP ಗಳನ್ನು ಪಡೆಯದ ವಾಹನ ಮಾಲೀಕರು ಸೆ.16 ರಿಂದ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ…

    Spread the love

    You Missed

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    • By admin
    • September 10, 2024
    • 35 views
    2024ರಲ್ಲಿ  ಪೂಜಿಸಲ್ಪಟ್ಟ ಗಣಪ

    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    • By admin
    • September 7, 2024
    • 94 views
    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    • By admin
    • September 4, 2024
    • 214 views
    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    • By admin
    • September 4, 2024
    • 38 views
    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    • By admin
    • September 4, 2024
    • 27 views
    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ

    • By admin
    • September 4, 2024
    • 23 views
    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ