ಶ್ರೀ ರಾಘವೇಂದ್ರ ಗುರುವೈಭವೋತ್ಸವ ಕಾರ್ಯಕ್ರಮಕ್ಕೆ ಚಾಲನೆ, ಡಾ. ಹೆಗ್ಗಡೆ ಸಹಿತ ಹಲವು ಗಣ್ಯರು ಭಾಗಿ

ಮಂತ್ರಾಲಯ: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುರಾಯರ 401ನೇ ಪಟ್ಟಾಭಿಷೇಕ ಮಹೋತ್ಸವ ಮತ್ತು 427ನೇ ವರ್ಧಂತಿ ಉತ್ಸವಗಳ ಶ್ರೀಗುರುವೈಭವೋತ್ಸವದ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.

04/03/2022ರಿಂದ 09/03/2022ರವರೆಗೆ ನಡೆಯುವ ಶ್ರೀ ರಾಘವೇಂದ್ರ ಗುರುವೈಭವೋತ್ಸವ ಕಾರ್ಯಕ್ರಮದ ಮೊದಲ ದಿನ ರಾಯರ ಪಟ್ಟಾಭಿಷೇಕ ಹಿನ್ನೆಲೆ ಶ್ರೀಗುರುಸಾರ್ವಭೌಮರ ಬೃಂದಾವನಕ್ಕೆ ವಿಶೇಷ ಪೂಜೆ, ಶ್ರೀ ಮಠದ ಪ್ರಕಾರದಲ್ಲಿ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಪಂಡಿತರು ಹಾಗೂ ವಿದ್ವಾಂಸರಿಂದ ಪ್ರವಚನ, ಶ್ರೀ ಗಳಿಂದ ಮೂಲರಾಮದೇವರಿಗೆ ಸಂಸ್ಥಾನ ಪೂಜಾ ಕೈಂಕಾರ್ಯಗಳು ನಡೆದವು.

READ ALSO

ಬಳಿಕ ಮಠದ ಪ್ರಾಂಗಣದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂರ್ತಿಗೆ ವಿಶೇಷ ಪೂಜೆ, ಪಾದುಕೆಗಳಿಗೆ ಪೂಜೆ ಕೈಂಕಾರ್ಯಗಳು ಜರುಗಿದವು. ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀರಾಘವೇಂದ್ರ ಸ್ವಾಮಿಗಳ ಸ್ವರ್ಣ ಪಾದುಕೆಗಳಿಗೆ ಮಂತ್ರ-ಘೋಷಗಳ ನಡುವೆ ನಾಣ್ಯಗಳು, ಮುತ್ತು, ರತ್ನಗಳಿಂದ ಅಭಿಷೇಕ ನೇರವೇರಿಸಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಸೇವಗಳನ್ನು ಮಾಡಿದರು.

ಪಟ್ಟಾಭಿಷೇಕ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್ ಕೂಡಾ ಭೇಟಿ ನೀಡಿ, ಆಶೀರ್ವಾದ ಪಡೆದರು.