‘ ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಪೂರ್ವೋತ್ತರ ಭಾರತದಲ್ಲಿಯ ಮತಾಂತರ’ ಇದರ ಬಗ್ಗೆ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ವಿಚಾರ ಮಂಥನ !

ಮಂಗಳೂರು: ‘ಪನೂನ ಕಾಶ್ಮೀರ ದೌರ್ಜನ್ಯ ಹಾಗೂ ನರಸಂಹಾರ ನಿರ್ಮೂಲನೆ ವಿಧೇಯಕ 2020’ ಜಾರಿಗೊಳಿಸಲು ಹಿಂದೂಗಳು ಸಂಘಟಿತರಾಗಬೇಕು ! – ರಾಹುಲ ಕೌಲ್, ರಾಷ್ಟ್ರೀಯ ಸಂಯೋಜಕರು, ‘ಯುಥ ಫಾರ್ ಪನೂನ್ ಕಾಶ್ಮೀರ’

ಕಲಂ 370 ರದ್ದು ಪಡಿಸಿದ ನಂತರ ದೇಶದಾದ್ಯಂತ ಹಿಂದೂಗಳಿಗೆ ನೆಮ್ಮದಿ ಸಿಕ್ಕಿದರೂ, ಜಿಹಾದಿ ಭಯೋತ್ಪಾದಕರು ತದನಂತರ 22 ಭಯೋತ್ಪಾದಕ ಚಟುವಟಿಕೆಗಳಲ್ಲಿ ಹಿಂದೂಗಳ ಹತ್ಯೆ ಮಾಡಿದ್ದಾರೆ. 1990 ರಲ್ಲಿ ಕಾಶ್ಮೀರಿ ಹಿಂದೂಗಳ ವಂಶನಾಶದಂತೆ ಇಂದಿಗೂ ನಡೆಯುತ್ತಿದೆ. ಹೀಗಾದರೆ ಹಿಂದೂಗಳ ಪುನರ್ವಸತಿ ಹೇಗಾಗಬಹುದು ? ಇದನ್ನು ತಡೆಗಟ್ಟಲು ಕೇಂದ್ರ ಸರಕಾರವು ‘ಕಾಶ್ಮೀರಿ ಹಿಂದೂಗಳ ವಂಶನಾಶವಾಗಿದೆ’, ಎಂಬುದನ್ನು ಕಾನೂನು ಮಾಡಿ ಪ್ರಪ್ರಥಮವಾಗಿ ಒಪ್ಪಿಕೊಳ್ಳಬೇಕು. ನಾವು ಈ ಬಗ್ಗೆ ‘ಪನೂನ್ ಕಾಶ್ಮೀರ ದೌರ್ಜನ್ಯ ಹಾಗೂ ನರಸಂಹಾರ ನಿರ್ಮೂಲನೆ ವಿಧೇಯಕ 2020’ ಈ ಖಾಸಗೀ ವಿಧೇಯಕವನ್ನು ಮಾಡಿದ್ದೇವೆ. ಈ ವಿಧೇಯಕದ ಅನುಮೋದನೆಗಾಗಿ ಎಲ್ಲ ಶಾಸಕರು, ಅದೇರೀತಿ ಪ್ರಧಾನಿಯವರಿಗೆ ಕಳುಹಿಸಲಾಗಿದೆ. ಕೇಂದ್ರ ಸರಕಾರವು ಈ ಮಸೂದೆಯನ್ನು ಅನುಮೋದನೆಗೊಳಿಸಬೇಕು, ಎಂಬುದಕ್ಕಾಗಿ ದೇಶದ ಎಲ್ಲ ಹಿಂದೂ ಸಂಘಟನೆಗಳು, ಅದೇರೀತಿ ಹಿಂದೂಗಳೂ ಸಂಘಟಿತರಾಗಬೇಕು, ಎಂದು ‘ಯೂಥ ಫಾರ್ ಪನೂನ್ ಕಾಶ್ಮೀರ’ದ ರಾಷ್ಟ್ರೀಯ ಸಂಯೋಜಕರಾದ ಶ್ರೀ. ರಾಹುಲ್ ಕೌಲ್ ಇವರು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಆನ್‌ಲೈನ್’ 9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ‘ಕಲಂ 370 ರದ್ದು ಪಡಿಸಿದ ನಂತರ ಕಾಶ್ಮೀರದಲ್ಲಿ ವರ್ತಮಾನ ಸ್ಥಿತಿ’ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಸಮಿತಿಯ ‘ಯೂ-ಟ್ಯೂಬ್’ ಚಾನೆಲ್ ಹಾಗೂ ‘ಫೇಸ್‌ಬುಕ್ ಪೇಜ್’ ಮೂಲಕ ಈ ಅಧಿವೇಶನವನ್ನು ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, ಲಕ್ಷ ಸಾವಿರಕ್ಕಿಂತಲೂ ಹೆಚ್ಚು ಜನರ ತನಕ ಈ ವಿಷಯವು ತಲುಪಿದೆ.

‘ಅಖಿಲ ಭಾರತವರ್ಷ ಧರ್ಮಸಂಘ ತಥಾ ಸ್ವಾಮಿ ಕರಪಾತ್ರಿ ಫೌಂಡೇಶನ’ನ ಪ.ಪೂ. ಡಾ. ಗುಣಪ್ರಕಾಶ ಚೈತನ್ಯಜಿ ಮಹಾರಾಜರು ಮಾತನಾಡುತ್ತಾ, ಸದ್ಯ ಆಗುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯು ನಮಗೆ ಭೋಗದ ದಿಕ್ಕಿನತ್ತ ಕೊಂಡೊಯ್ಯುತ್ತಿದೆ. ಅದು ನಮಗೆ ಭಗವಂತ ಪ್ರಾಪ್ತಿ ಮಾಡಿಸಿಕೊಡುವುದಿಲ್ಲ. ಅದಕ್ಕಾಗಿ ಸನಾತನ ಶಾಸ್ತ್ರದ ಅಗತ್ಯವಿದೆ. ಗೋಮಾತೆ, ವರ್ಣವ್ಯವಸ್ಥೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಎಲ್ಲ ಸಂತರು ಒಟ್ಟಾಗಬೇಕು, ಎಂದು ಕರೆ ನೀಡಿದ್ದಾರೆ.

‘ರಾಷ್ಟ್ರೀಯ ಇತಿಹಾಸ ಸಂಶೋಧನೆ ಹಾಗೂ ತುಲನಾತ್ಮಕ ಅಧ್ಯಯನ ಕೇಂದ್ರ’ದ ಅಧ್ಯಕ್ಷ ಶ್ರೀ. ನೀರಜ ಅತ್ರಿಯವರು ಮಾತನಾಡುತ್ತಾ, ಇಂದು ಹಿಂದೂಗಳು ಸತ್ಯದ ಪರವಾಗಿದ್ದರೂ ಹಿಂದೂಗಳು ಆಲಸ್ಯ ಹಾಗೂ ತಾಮಸಿಕ ಆಗಿದ್ದರಿಂದ ಹಿಂದೆ ಬಿದ್ದಿದ್ದಾರೆ, ಇನ್ನೊಂದೆಡೆ ಕ್ರೈಸ್ತರು ಹಾಗೂ ಇತರ ಪಂಥದವರು, ಅದೇರೀತಿ ಕಮ್ಯುನಿಸ್ಟ್‌ರು ತಮ್ಮ ವಿಚಾರಧಾರೆಯು ಅಸತ್ಯವಾಗಿದ್ದರೂ ಅದರ ಬಗ್ಗೆ ಬಿರುಸಿನ ಪ್ರಸಾರ ಮಾಡುತ್ತಿದ್ದಾರೆ. ಹೀಗೆ ನಾವು ಕೂಡ ಸತತವಾಗಿ ಬಿರುಸಿನ ಪ್ರಸಾರ ಮಾಡಬೇಕಿದೆ ಎಂದು ಹೇಳಿದರು.


‘ಪೂರ್ವ ಹಾಗೂ ಪುರ್ವೋತ್ತರ ಭಾರತದಲ್ಲಿ ಹೆಚ್ಚಾಗುತ್ತಿರುವ ಹಿಂದೂಗಳ ಮತಾಂತರ ಹಾಗೂ ಅದರ ಮೇಲಿನ ಉಪಾಯ’ ಈ ವಿಶೇಷ ವಿಚಾರ ಮಂಥನದಲ್ಲಿ ಗಣ್ಯರ ಸಹಭಾಗ ಈ ವಿಚಾರಮಂಥನದಲ್ಲಿ ಕೇಂದ್ರ ಸರಕಾರವು ಮತಾಂತರಕ್ಕಾಗಿ ವಿದೇಶದಿಂದ ಬರುವ ಬರುವ ನಿಧಿಯನ್ನು ಮೊದಲು ತಡೆಗಟ್ಟಿ ರಾಷ್ಟ್ರೀಯ ಮಟ್ಟದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಬೇಕು, ಎಂದು ಝಾರಖಂಡನ ‘ತರುಣ ಹಿಂದೂ’ವಿನ ಸಂಸ್ಥಾಪಕ ಅಧ್ಯಕ್ಷ ಡಾ. ನೀಲ ಮಾಧವ ದಾಸ ಇವರು ಒತ್ತಾಯಿಸಿದರು.

ತ್ರಿಪುರಾದಲ್ಲಿಯ ಶಾಂತಿ ಕಾಲಿ ಆಶ್ರಮದ ಪೂ. ಸ್ವಾಮಿ ಚಿತ್ತರಂಜನ ಮಹಾರಾಜರು ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಹೆಚ್ಚೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರೆ, ಬಂಗಾಲದಲ್ಲಿಯ ಶಾಸ್ತ್ರ ಧರ್ಮ ಪ್ರಸಾರ ಸಭೆಯ ಡಾ. ಕೌಶಿಕಚಂದ್ರ ಮಲ್ಲಿಕ ಇವರು ಬಂಗಾಲದಲ್ಲಿ ಮತಾಂತರ ನಿಷೇಧದೊಂದಿಗೆ ನುಸುಳುಖೋರರನ್ನೂ ತಡೆಗಟ್ಟುವುದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದು ಹಾಗೂ ಧರ್ಮಶಿಕ್ಷಣ ನೀಡುವ ಅನಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಈ ಸಮಯದಲ್ಲಿ ಮೇಘಾಲಯದ ಸಾಮಾಜಿಕ ಕಾರ್ಯಕರ್ತೆಯಾದ ಶ್ರೀಮತಿ ಈಸ್ಟರ್ ಖರಬಾಮೋನ್ ಇವರು ‘ಮೇಘಾಲಯದಲ್ಲಿ ಹಿಂದೂಗಳಿಗೆ ಶಾಲೆ, ಆಸ್ಪತ್ರೆ, ಸರಕಾರಿ ಉದ್ಯೋಗ, ನಿವಾಸ, ವಿವಾಹ, ವಿದೇಶಿ ಪ್ರಯಾಣ ಇತ್ಯಾದಿಗಳನ್ನು ನಿರ್ಲಕ್ಷಿಸಲಾಗುತ್ತದೆ; ಆದರೆ ಕ್ರೈಸ್ತ ಹಾಗೂ ಮುಸಲ್ಮಾನರಿಗೆ ಈ ಎಲ್ಲ ಸೌಲಭ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಲಾಗುತ್ತದೆ; ಆದ್ದರಿಂದ ಹಿಂದೂಗಳ ಮತಾಂತರವಾಗುತ್ತಿದ್ದಾರೆ ಎಂಬ ನೈಜ್ಯ ಸ್ಥಿತಿಯನ್ನು ಹೇಳಿದರು.

Spread the love
  • Related Posts

    ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆಯಲ್ಲಿ ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಾಶ್ ಕೋರ್ಸ್

    ಗುರುವಾಯನಕೆರೆ: ನೀಟ್, ಜೆಇಇ ಮೈನ್ಸ್ ಮತ್ತು ಅಡ್ವಾನ್ಸ್, ಸಿಇಟಿ, ಬಿಎಸ್ಸಿ ಅಗ್ರಿ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉದ್ದೇಶಿಸಿರುವ ವಿದ್ಯಾರ್ಥಿಗಳಿಗೆ ಒಂದು ಸ್ವರ್ಣಾವಕಾಶ. ನೂರಾರು ವಿದ್ಯಾರ್ಥಿಗಳನ್ನು ಜಗತ್ತಿನ ಶ್ರೇಷ್ಠ ಏಮ್ಸ್, ಜಿಸ್ಟ್ರಾರ್, ಐಐಟಿ, ಐಐಐಟಿ, ಎನ್ ಐಐಟಿ ಹಾಗೂ ಉತ್ಕೃಷ್ಟ…

    Spread the love

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    You Missed

    ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆಯಲ್ಲಿ ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಾಶ್ ಕೋರ್ಸ್

    • By admin
    • March 16, 2026
    • 16 views
    ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆಯಲ್ಲಿ ನೀಟ್, ಜೆಇಇ, ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಾಶ್ ಕೋರ್ಸ್

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 71 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 111 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 46 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 620 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 154 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ