ದುಬೈ: ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿರುದ್ಧ ಕೊಲ್ಕತ್ತಾ ನೈಟ್ ತಂಡವು 3 ವಿಕೆಟ್ ಗಳ ಗೆಲುವು ಸಾಧಿಸುದರೊಂದಿಗೆ 14ನೇ ಆವೃತ್ತಿಯ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಇದು ನಾಲ್ಕನೆಯ ಬಾರಿಗೆ ತಂಡವು ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 193 ರನ್ ಗಳ ಗುರಿಯನ್ನು ನೀಡಿತು. ಆರಂಭಿಕ ಬ್ಯಾಟ್ಸ್‌ಮನ್ ಗಳಾದ ಡು ಪ್ಲೆಸಿಸ್ ಮತ್ತು ರುತುರಾಜ್ ಗೈಕ್ವಾಡ್ ಉತ್ತಮ ಇನ್ನಿಂಗ್ಸ್ ಆರಂಬಿಸಿದರು. ಡು ಪ್ಲೆಸಿಸ್(86) ಮೊಯಿನ್ ಅಲಿ(37) ರಾಬಿನ್ ಉತ್ತಪ್ಪ (31) ರುತುರಾಜ್ ಗೈಕ್ವಾಡ್ (32) ಉತ್ತಮ ಬ್ಯಾಟಿಂಗ್ ಪ್ರದರ್ಶನ ನಡೆಸುವುದರ ಮೂಲಕ ಬ್ರಹತ್ ರನ್ ಸೇರಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ಗಳಿಸಿ 27 ರನ್ ಗಳ ಸೋಲು ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಗಳಾದ ಶುಭ್ಮಾನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಮೊದಲ ವಿಕೆಟ್ ಗೆ 91 ರನ್ ಸೇರಿಸುವುದರ ಮೂಲಕ ಉತ್ತಮ ಇನ್ನಿಂಗ್ಸ್ ಆರಂಬಿಸಿದರು, ನಂತರ ಬಂದ ಆಟಗಾರರು ಬೇಗನೇ ಪೆವಿಲಿಯನ್ ಸೇರುವುದರ ಮೂಲಕ ಕಲಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವೆಂಕಟೇಶ್ ಅಯ್ಯರ್ (50) ಶುಬ್ಮಾನ್ ಗಿಲ್ (51) ಶಿವಂ ಮಾವಿ (20) ಲೋಕಿ ಫರ್ಗ್ಯುಸನ್(17*) ತಂಡದ ಅಗ್ರ ಸ್ಕೋರರ್ ಎನಿಸಿಕೊಂಡರೆ ಉಳಿದ ಆಟಗಾರರು ಒಂದಂಕೆಯ ರನ್ ಗಳಿಸಲು ವಿಫಲರಾದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಶಾರ್ದೂಲ್ ಠಾಕೂರ್ 3, ರವೀಂದ್ರ ಜಡೇಜ 2, ಜೋಶ್ ಹೇಝಲ್ ವುಡ್ 2, ರವೀಂದ್ರ ಜಡೇಜ ಮತ್ತು ಬ್ರಾವೋ ತಲಾ 1 ವಿಕೆಟ್ ಪಡೆದು ಮಿಂಚಿದರು.