ನವದೆಹಲಿ : ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ತಮಿಳುನಾಡು ಮೂಲದ ಮಾಜಿ ಐ.ಪಿ.ಎಸ್ ಅಧಿಕಾರಿ ಕೆ.ಅಣ್ಣಾಮಲೈ ರಾಜಕೀಯ ಪ್ರವೇಶ ಮಾಡಿದ್ದು ಅಧಿಕೃತವಾಗಿ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ.
ಇಂದು ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಬಿಜೆಪಿ ಶಾಲು ಹೊದಿಸಿ, ಸೇರ್ಪಡೆ ಆದೇಶ ನೀಡುವ ಮೂಲಕ ಮುರುಳೀಧರ್ ರಾವ್, ಅವರನ್ನು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿಕೊಂಡರು. ಈ ಮೂಲಕ ತಮಿಳುನಾಡು ರಾಜಕೀಯಕ್ಕೆ ಸಿಂಗಂ ಅಧಿಕೃತವಾಗಿ ಎಂಟ್ರಿ ಕೊಟ್ಟಂತಾಗಿದೆ.
ಬಿಜೆಪಿ ಸೇರ್ಪಡೆಗೊಂಡ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಸಾರ್ವಜನಿಕರ ಸೇವೆ ಮಾಡುವ ಸಂಬಂಧ ರಾಜಕೀಯಕ್ಕೆ ಸೇರಿದ್ದೇನೆ. ಮುಂದೆಯೂ ಪೊಲೀಸ್ ವೃತ್ತಿಯಲ್ಲಿ ಮಾಡಿದಂತೆ ರಾಜಕೀಯವಾಗಿಯೂ ಜನರ ಸೇವೆ ಮಾಡಲಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮುರುಳೀಧರ್ ರಾವ್, ಸಂಬಿತ್ ಪಾತ್ರ, ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಭಾಗವಹಿಸಿದ್ದರು.