ಜನಸ್ಪಂದನ ಸಭೆಯ ಫಲಶ್ರುತಿ108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜನ ಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿಯಲ್ಲಿ: ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಜನರ ಬಳಿಗೆ ತಾಲೂಕು ಮಟ್ಟದ ಆಡಳಿತ ವಿನೂತನ ಪರಿಕಲ್ಪನೆಯ ಜನಸ್ಪಂದನ ಸಭೆಯ ಫಲಶ್ರುತಿಯಾಗಿ ತಾಲೂಕು ಆಡಳಿತ ಸೌಧದಲ್ಲಿ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರಗಳನ್ನು ವಿತರಣಾ ಕಾರ್ಯಕ್ರಮ ಜ.10 ರಂದು ನಡೆಯಿತು.ತಾಲೂಕಿನ 48 ಗ್ರಾಮ ಪಂಚಾಯತ್ ಹಾಗೂ ಒಂದು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆದ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ತಮ್ಮ 94/ಸಿ, ನಡಾವಳಿ ಕಡತಗಳ ವಿಲೇಗೆ ಶಾಸಕರಲ್ಲಿ ವಿನಂತಿಸಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು ಜನಸ್ಪಂದನ ಸಭೆಯ ಫಲಶ್ರುತಿಯಾಗಿ 108 ಮಂದಿಗೆ ಹಕ್ಕು ಪತ್ರ ಹಾಗೂ 54 ಮುಂದಿಗೆ ನಡವಾಳಿ ನೀಡಲಾಯಿತು.ಹಕ್ಕು ಪತ್ರ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಕಳೆದ ಮೂರು ತಿಂಗಳಿಂದ ನಿರಂತರವಾಗಿ ತಾಲೂಕಿನ 48 ಗ್ರಾಮ ಪಂಚಾಯತ್ ನಲ್ಲಿ ಆಯೋಜಿಸಿದ ಜನಸ್ಪಂದನ ಸಭೆಯಲ್ಲಿ ಜನರಿಂದ 94ಸಿ ವಿತರಣೆಗೊಳಿಸಲು ಅಡ್ಡಿಯಾಗಿರುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿದ್ದು ಮುಂದೆ ಈ ಬಗ್ಗೆ ಅಧಿಕಾರಿಗಳಿಗೆ ಸ್ಥಳ ತನಿಖೆ ನಡೆಸಲು ಸೂಚಿಸಲಾಗಿತ್ತು. ಕೆಲ ಕಡತಗಳಲ್ಲಿ ಅರಣ್ಯದ ಎನ್ ಒಸಿ ನೀಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದರ ಪ್ರತಿಫಲವಾಗಿ ಇಂದು 108 ಮುಂದಿಗೆ ಹಕ್ಕು ಪತ್ರ ಹಾಗೂ 54 ಮುಂದಿಗೆ ನಡವಾಳಿ ನೀಡಲಾಗಿದೆ. ರಾಜ್ಯದಲ್ಲಿಯೇ 32 ಇಲಾಖೆಗಳ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆದಿರುವುದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಪ್ರಥಮವಾಗಿದೆ ಎಂದು ಹೇಳಿದ ಶಾಸಕರು ಕಡತಗಳ ವಿಲೇಗೆ ಕ್ರಮ ವಹಿಸಿದ ಅಧಿಕಾರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಮಲವಂತಿಗೆಯ ಪ್ರಕಾಶ್ ಜೈನ್ ಎಳನೀರು, ಪಟ್ರಮೆಯ ಮನೋಜ್, ಕುಕ್ಕೇಡಿಯ ಅನಿತಾ ಕೆ. ಹಾಗೂ ಉಪ ತಹಶೀಲ್ದಾರ್ ಜಯ ಉಪಸ್ಥಿತರಿದ್ದರು.

Spread the love
  • Related Posts

    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    ಗುರುವಾಯನಕೆರೆ: ರಾಷ್ಟ್ರಮಟ್ಟದಲ್ಲಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ (COA) ನಡೆಸುವ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (NATA) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ಕಾಲೇಜಿನ 73 ವಿದ್ಯಾರ್ಥಿಗಳೂ…

    Spread the love

    “ಪ್ರಾಣಿಗಳ ಮೇಲೆ ದಯೆ ಇರಲಿ”… ಮಕ್ಕಳ ಬದುಕಿನ ಮೇಲೂ ಕಾಳಜಿ ಇರಲಿ! ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ

    🖊️• ವರದಿ: ರಾಜೇಶ್ ಎಂ ಕಾನರ್ಪ ಗ್ರಾಮೀಣ ಮಕ್ಕಳ ನಿತ್ಯದ ನರಕಯಾತನೆಗೆ ಕೊನೆಯೆಲ್ಲಿ? ಮಳೆ ಸುರಿಯುತ್ತಿದೆ, ರಸ್ತೆ ಒದ್ದೆಯಾಗಿದೆ ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಇಂತಹ ರಸ್ತೆಯಲ್ಲಿ ಪ್ರತಿದಿನ ಶಾಲೆಗೆ ಹೋಗುವ ಗ್ರಾಮೀಣ ಮಕ್ಕಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಒಮ್ಮೆಯಾದರೂ ಯೋಚಿಸಿದ್ದೇವೆಯೇ? “ಪ್ರಾಣಿಗಳ…

    Spread the love

    You Missed

    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    • By admin
    • August 27, 2026
    • 4 views
    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    “ಪ್ರಾಣಿಗಳ ಮೇಲೆ ದಯೆ ಇರಲಿ”… ಮಕ್ಕಳ ಬದುಕಿನ ಮೇಲೂ ಕಾಳಜಿ ಇರಲಿ! ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ

    • By admin
    • August 27, 2026
    • 6 views
    “ಪ್ರಾಣಿಗಳ ಮೇಲೆ ದಯೆ ಇರಲಿ”… ಮಕ್ಕಳ ಬದುಕಿನ ಮೇಲೂ ಕಾಳಜಿ ಇರಲಿ! ಗ್ರಾಮೀಣ ಪ್ರದೇಶದ ಮಕ್ಕಳ ಪಯಣ ಪ್ರಾಣಕ್ಕೆ ಸಂಚಕಾರ ಆಗದಿರಲಿ

    ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ವಿಶೇಷ ಸಭೆ

    • By admin
    • August 25, 2026
    • 5 views
    ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ವಿಶೇಷ ಸಭೆ

    “ಆರ್ಥಿಕ, ಸಾಮಾಜಿಕ ಹಾಗೂ ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ತರ ಸಾಧನೆ” “ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡು ಒಕ್ಕೂಟಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಿ” : ಡಾ. ನವೀನ್ ಚಂದ್ರ ಶೆಟ್ಟಿ

    • By admin
    • August 25, 2026
    • 6 views
    “ಆರ್ಥಿಕ, ಸಾಮಾಜಿಕ ಹಾಗೂ ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ತರ ಸಾಧನೆ” “ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡು ಒಕ್ಕೂಟಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಿ” : ಡಾ. ನವೀನ್ ಚಂದ್ರ ಶೆಟ್ಟಿ

    ಧರ್ಮಸ್ಥಳದ ಶೌರ್ಯ ಪಡೆಗೆ NDRF ತರಬೇತಿ: ವಿಪತ್ತು ನಿರ್ವಹಣೆಯಲ್ಲಿ ಸಮಾಜಸೇವೆಗೆ ಸಜ್ಜು, ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಸೇವೆ ಶ್ಲಾಘನೀಯ: ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ

    • By admin
    • August 24, 2026
    • 10 views
    ಧರ್ಮಸ್ಥಳದ ಶೌರ್ಯ ಪಡೆಗೆ NDRF ತರಬೇತಿ: ವಿಪತ್ತು ನಿರ್ವಹಣೆಯಲ್ಲಿ ಸಮಾಜಸೇವೆಗೆ ಸಜ್ಜು, ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಸೇವೆ ಶ್ಲಾಘನೀಯ: ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ

    ವಿದ್ಯುತ್ ಕಣ್ಣಾಮುಚ್ಚಾಲೆ! ⚡ಮಿತ್ತಬಾಗಿಲು–ಮಲವಂತಿಗೆ–ಕಡಿರುದ್ಯಾವರದಲ್ಲಿ ವಿದ್ಯುತ್ ಸಮಸ್ಯೆ: ಗ್ರಾಮಸ್ಥರ ಆಕ್ರೋಶ, ಮೆಸ್ಕಾಂ ವಿರುದ್ಧ ಅಸಮಾಧಾನ

    • By admin
    • August 24, 2026
    • 12 views
    ವಿದ್ಯುತ್ ಕಣ್ಣಾಮುಚ್ಚಾಲೆ! ⚡ಮಿತ್ತಬಾಗಿಲು–ಮಲವಂತಿಗೆ–ಕಡಿರುದ್ಯಾವರದಲ್ಲಿ ವಿದ್ಯುತ್ ಸಮಸ್ಯೆ: ಗ್ರಾಮಸ್ಥರ ಆಕ್ರೋಶ, ಮೆಸ್ಕಾಂ ವಿರುದ್ಧ ಅಸಮಾಧಾನ